ರಸ್ತೆಯಲ್ಲೇ ಹೆಂಡತಿಯನ್ನು ಥಳಿಸಿದ ಮೈಸೂರಿನ ಕುಡುಕ ವಕೀಲ!

Posted By:
Subscribe to Oneindia Kannada

ಮೈಸೂರು, ಜುಲೈ 26 : ಮೈಸೂರಿನಲ್ಲಿ ಒಡನಾಡಿ ಸಂಸ್ಥೆಗೆ ವಕೀಲನೋರ್ವ ಕುಡಿದು ಬಂದು ದಾಂಧಲೆ ನಡೆಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಮಂಚೇಗೌಡನಕೊಪ್ಪಲು ನಿವಾಸಿ ಬಾಲಕೃಷ್ಣ (54) ಮಹಿಳೆಯರ ಪುನರ್ವಸತಿ ಕೇಂದ್ರಕ್ಕೆ ನುಗ್ಗಿದ ದಾಂಧಲೆ ನಡೆಸಿದ ಆರೋಪಿ.

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಆತನ ಪತ್ನಿ ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಆಶ್ರಯ ಪಡೆದಿದ್ದರು. ಪತ್ನಿಗೆ ಆಶ್ರಯ ನೀಡಿದ್ದಕ್ಕೆ ಸಂಸ್ಥೆ ವಿರುದ್ಧ ಕುಪಿತನಾಗಿದ್ದ ಬಾಲಕೃಷ್ಣ ನಸುಕಿನಲ್ಲಿ ಸಂಸ್ಥೆಯ ಒಳಗೆ ನುಗ್ಗಿ ಬಾಗಿಲು ಗಾಜು ಪುಡಿ ಮಾಡಿ ರಂಪಾಟ ಮಾಡಿದ್ದಾನೆ ಎನ್ನಲಾಗುತ್ತಿದೆ.
ಇದಲ್ಲದೆ ಬಾಲಕಿಯರು, ಯುವತಿಯರ ಮುಂದೆಯೇ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದು, ಈ ಕುರಿತು ವಿಜಯನಗರ ಪೊಲೀಸ್ ಠಾಣೆಯ್ಲಿ ಪ್ರಕರಣ ದಾಖಲಾಗಿದೆ.

a drunk advocate attacks his wife in Mysuru

ಮನೆಯಲ್ಲೇ ಗಾಂಜಾ ಬೆಳೆದು ಪೊಲೀಸರ ಅತಿಥಿಯಾದ ಭೂಪ
ಮನೆಯ ತಾರಸಿಯಲ್ಲೇ ಗಾಂಜಾ ಬೆಳೆದಿದ್ದ ವ್ಯಕ್ತಿಯೋರ್ವನನ್ನ ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಚಾರ್ಟೆಡ್ ಅಕೌಂಟೆಂಟ್ ಆಗಿರುವ ಸಿ.ಎ. ಜಗನ್ನಾಥ್ ಎಂಬಾತನೇ ಮನೆಯ ತಾರಸಿ ಮೇಲೆ ಗಾಂಜಾ ಬೆಳೆದಿದ್ದು ಈತನನ್ನ ಸರಸ್ವತಿ ಪುರಂ ಪೊಲೀಸರು ಇಂದು ವಶಕ್ಕೆ ಪಡೆದಿದ್ದಾರೆ. ಬೋಗಾದಿ ೨ನೇ ಹಂತದ ಈತನ ನಿವಾಸದಲ್ಲಿ ಅಕ್ರಮವಾಗಿ ಗಾಂಜಾ ಗಿಡ ಪತ್ತೆಯಾಗಿದೆ. 'ಮನೆಯ ಹಾಲ್, ರೂಮ್ ನಲ್ಲೇ ಒಣಗಿಸಿದ ಗಾಂಜಾವನ್ನ ಈತ ಸಂಗ್ರಹ ಮಾಡಿದ್ದ ಎನ್ನಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ.ಈ ಕುರಿತು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

a drunk advocate attacks his wife in Mysuru

ಮೈಸೂರಿನ ನರ್ಸ್ ಶವ ಕೆರೆಯಲ್ಲಿ ಪತ್ತೆ
ಊರಿಗೆ ಹೋಗುವುದಾಗಿ ತಿಳಿಸಿದ ನರ್ಸ್ ಓರ್ವರು ಕೆರೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಶ್ರೀರಂಗಪಟ್ಟಣದಲ್ಲಿ ನಿನ್ನೆ ನಡೆದಿದೆ. ಮೃತರನ್ನು ಕೆ.ಆರ್.ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಉಷಾ ಎಂದು ಗುರುತಿಸಲಾಗಿದೆ. ಈಕೆ ಭೀಮನ ಅಮಾವಾಸ್ಯೆಯೆಂದು ಮನೆಗೆ ಹೋಗಿ ಬರುತ್ತೇನೆಂದು ತೆರಳಿದ್ದರು. ಆದರೆ ಮನೆಗೆ ತೆರಳಿಲ್ಲ ಎನ್ನಲಾಗಿದೆ. ಪತಿಗೆ ಮತ್ತು ಪೋಷಕರಿಗೆ ಸಂದೇಶ ರವಾನಿಸಿದ್ದು ಅದರಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದರು.

Mysuru city corporation officials attacked bars in Mysuru

ಕೇವಲ ಒಂದು ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದ ಉಷಾ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಶ್ರೀರಂಗಪಟ್ಟಣದ ಕೆರೆಯಲ್ಲಿ ಶವವೊಂದು ಕಾಣಿಸುತ್ತಿದೆ ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಲಾಗಿ ಆಗಿ ಉಷಾ ಎಂಬುದು ತಿಳಿದುಬಂದಿದೆ. ಆತ್ಮಹತ್ಯೆಗೆ ಕಾರಣವೇನು ಎನ್ನುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ್ಮಹತ್ಯೆಯೋ ಕೊಲೆಯೋ ಎಂಬ ಮಾಹಿತಿ ತನಿಖೆಯ ನಂತರವೇ ತಿಳಿದುಬರಬೇಕಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A drunk man attacked his wife in road. The man is an advocate by proffession. The incident took place on July 25th in Mysuru
Please Wait while comments are loading...