ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಲೈಲಾಮರ ರಕ್ಷಣಾ ಸಿಬ್ಬಂದಿಗೆ ನಾಯಿ ಕಚ್ಚಿದರೂ ರಜೆ ಇಲ್ಲ!

By ಬಿ.ಎಂ ಲವಕುಮಾರ್
|
Google Oneindia Kannada News

ಮೈಸೂರು, ಡಿಸೆಂಬರ್, 19: ಸಾರ್ವಜನಿಕರ ರಕ್ಷಣೆ ಮಾಡುವ ಪೊಲೀಸರ ಜೀವಕ್ಕೆ ಈಗ ಕಿಮ್ಮತ್ತಿನ ಬೆಲೆ ಇಲ್ಲದಂತಾಗಿದೆ. ನಾಯಿಯಿಂದ ಕಚ್ಚಿಸಿಕೊಂಡು ನೋವಿನಿಂದ ನರಳುತ್ತಿದ್ದರೂ ಕರ್ತವ್ಯ ನಿರ್ವಹಿಸಬೇಕಾಗಿದೆ. ಆಸ್ಪತ್ರೆಗೆ ತೆರಳಲು ರಜೆಯೂ ಸಿಕ್ಕಿಲ್ಲ.

ಹೌದು..ಬೈಲಕುಪ್ಪೆ ಟಿಬೆಟಿಯನ್ ಧರ್ಮಗುರು ದಲೈಲಾಮ ಅವರ ಬಂದೋಬಸ್ತಿಗಾಗಿ ನಿಯೋಜಿತರಾದ ಎಎಸ್ಐ ಡಿ.ಆರ್. ಜಯಸ್ವಾಮಿ ಅವರ ನೋವಿನ ಕಥೆಯಿದು. ನಾಯಿ ಕಚ್ಚಿದ್ದರೂ ಚಿಕಿತ್ಸೆ ಮತ್ತು ವಿಶ್ರಾಂತಿಯಿಲ್ಲದೆ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇವರ ಪಾಲಿಗೆ.['ಅಮ್ಮಾ' ಎಂದು ಬೊಗಳುವ ನಾಯಿಯನ್ನು ಬಲ್ಲಿರಾ?]

A dog had bitten to security police of Dalai Lama in Mysuru

ಬೆಟ್ಟದಪುರ ತಾಲ್ಲೂಕಿನ ಪೋಲಿಸ್ ಠಾಣೆಯಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿರುವ ಡಿ.ಆರ್. ಜಯಸ್ವಾಮಿ ಅವರಿಗೆ ಟಿಬೆಟ್ ಧರ್ಮಗುರು ದಲೈಲಾಮಾ ಅವರ ರಕ್ಷಣೆಗಾಗಿ ಬೈಲುಕುಪ್ಪೆಯಲ್ಲಿ ಕರ್ತವ್ಯ ನಿರ್ವಹಿಸಲು ನಿಯೋಜಿಸಲಾಗಿತ್ತು. ಈ ಸಂದರ್ಭ ಅವರ ಎಡಗೈ ಮತ್ತು ಬಲ ಕಾಲಿಗೆ ನಾಯಿಕಚ್ಚಿದ್ದು, ತೀವ್ರ ಗಾಯಗೊಂಡಿದ್ದಾರೆ.[ಮಂಗಳೂರಿನ ಹೋಮ್ ಗಾರ್ಡಿಗೊಂದು ಸೆಲ್ಯೂಟ್ ಸಲ್ಲಿಸಿ]

ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದ ಜಯಸ್ವಾಮಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಹಾಗೂ ವಿಶ್ರಾಂತಿಗಾಗಿ ಒಂದೆರಡು ದಿನ ರಜೆ ಕೇಳಿದ್ದಾರೆ. ಆದರೆ ಅವರಿಗೆ ರಜೆ ದೊರೆಯದ ಕಾರಣ ನೋವಿನಲ್ಲಿ ನರಳುತ್ತಾ ಸೇವೆ ಸಲ್ಲಿಸುತ್ತಿದ್ದಾರೆ. ಒಟ್ಟಾರೆ ಎಎಸ್ಐ ಜಯರಾಮ ಅವರ ನೋವಿಗೆ ಮೇಲಾಧಿಕಾರಿಗಳು ಸ್ಪಂದಿಸದೆ ಇರುವುದು ನಾಯಿಕಚ್ಚಿದ ನೋವಿಗಿಂತ ಅಧಿಕಾರಿಗಳ ವರ್ತನೆಯೇ ನೋವು ತಂದಿದೆ.

English summary
A dog had bitten to ASI D.R Jayaswamy security police of Dalai Lama. He is very injured and suffering from lot of pain but main officers didn't give leave going to hospital. All are neglected to him
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X