ಮೈಸೂರಿನಲ್ಲಿ ಹಾರುತ್ತಿರುವ ಹರಿದ ರಾಷ್ಟ್ರಧ್ವಜ!

Posted By:
Subscribe to Oneindia Kannada

ಮೈಸೂರು, ಜುಲೈ 11 : ಸರ್ಕಾರ ಎಲ್ಲಾ ಗ್ರಾಮ ಪಂಚಾಯ್ತಿ ಕಛೇರಿಗಳ ಮುಂದೆ ಪ್ರತಿದಿನ ಕಡ್ಡಾಯವಾಗಿ ತ್ರಿವರ್ಣ ಧ್ವಜ ಹಾರಿಸಬೇಕೆಂಬ ನಿಯಮ ಜಾರಿಗೆ ತಂದ ಮೇಲೆ ಧ್ವಜ್ಕಕೆ ಸಂಬಂಧಿಸಿದ ಅವಾಂತರಗಳು ಆಗುತ್ತಲೇ ಇವೆ. ಇದೀಗ ಅಂತದ್ದೇ ಅವಾಂತರವೊಂದು ಮೈಸೂರುನಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗಾಗೇನಹಳ್ಳಿ ಗ್ರಾಮ ಪಂಚಾಯತಿ ಕಚೇರಿ ಮುಂಭಾಗ ಕಳೆದ 15 ದಿನಗಳಿಂದ ಸತತವಾಗಿ ಹರಿದು ಹೋಗಿರುವ ತ್ರಿವರ್ಣ ಧ್ವಜವನ್ನೇ ಹಾರಿಸಲಾಗುತ್ತಿದೆ. ರಾಷ್ಟ್ರ ಧ್ವಜಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಗ್ರಾಮಸ್ಥರು, ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರೂ ಸರಿಪಡಿಸುವ ಗೋಜಿಗೆ ಹೋಗಿಲ್ಲ.

ವಾಘಾ ಗಡಿಯಲ್ಲಿ ಅತೀ ಎತ್ತರದ ಧ್ವಜ ಹಾರಿಸಲು ಪಾಕ್ ಸಿದ್ಧತೆ

A damaged National Flag of India is flying in a government office in Mysuru

ರಾಷ್ಟ್ರ ಧ್ವಜಕ್ಕೆ ಕನಿಷ್ಠ ಗೌರವ ಕೊಡಲಾಗದ ಪಂಚಾಯಿತಿ ಕಚೇರಿ ಗಳ ಮುಂದೆ ದಿನ ನಿತ್ಯ ರಾಷ್ಟ್ರ ಧ್ವಜ ಹಾರಿಸಬೇಕಾದ ಔಚಿತ್ಯವನ್ನೇ ಜನ‌ ಪ್ರಶ್ನಿಸುವಂತಾಗಿದೆ.

A damaged National Flag of India is flying in a government office in Mysuru

ದಿ ಪ್ರಿವೆನ್ಷನ್ ಆಫ್ ಇನ್ಸಲ್ಟ್ ಟು ನ್ಯಾಶನಲ್ ಆನರ್ ಆಕ್ಟ್-1971 ಪ್ರಕಾರ ಧ್ವಜಕ್ಕೆ ಅಗೌರವ ಸೂಚಿಸುವವರಿಗೆ ಗರಿಷ್ಠ 3 ವರ್ಷ ಜೈಲುಶಿಕ್ಷೆ ವಿಧಿಸಬಹುದು. ಹಾಗೆಯೇ ದಂಡವನ್ನೂ ವಿಧಿಸಬಹುದಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A damaged National Flag of India is flying from past 15 days in Gaganehalli Gram Panchayat office in Hunasur taluk of Mysore district. The one who is responsible for this should know that, showing disrespect to the National Flag is a punishable offence.
Please Wait while comments are loading...