ಚುಡಾಯಿಸಿದ್ರೆ ಹುಷಾರ್... ಜೈಲಿಗೆ ಹೋಗೋದು ಪಕ್ಕಾ..!

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜುಲೈ 29 : ಶಾಲಾ ಬಾಲಕಿಯನ್ನು ಚುಡಾಯಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಮೈಸೂರುನ ಕೆ.ಆರ್.ನಗರ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪಟ್ಟಣದ ವಿದ್ಯಾರ್ಥಿನಿಗೆ ಮುಸ್ಲಿಂ ಬಡಾವಣೆಯ ನಿವಾಸಿ ಷಕೀಮ್ (18) ಬಿನ್ ಷಮಿ ಎಂಬ ಹುಡುಗ ಚುಡಾಯಿಸಿದ ಆರೋಪದ ಮೇಲೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ವಿದ್ಯಾರ್ಥಿನಿಯು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಮನೆ ಪಾಠಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿ ಷಕೀಮ್ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ. ಅಲ್ಲದೇ ಚುಡಾಯಿಸುತ್ತಿದ್ದ ಎಂದು ಬಾಲಕಿ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.

A court in Mysuru ordered judicial custody to a man for ragging a girl.

ಇದಕ್ಕೂ ಮುನ್ನ ಆರೋಪಿಯನ್ನು ಬಾಲಕಿಯ ತಾತಾ ಕರೆದು, ಈ ರೀತಿಯ ನಡವಳಿಕೆಯನ್ನು ತ್ಯಜಿಸುವಂತೆ ತಿಳಿಹೇಳಿದ್ದಾರೆ. ಆದರೆ, ಬುದ್ಧಿ ಮಾತಿಗೂ ಕಿವಿಗೊಡದ ಆರೋಪಿ ಷಕೀಮ್ ಬಾಲಕಿಯ ತಾತನ ಮುಖಕ್ಕೆ ಹೊಡೆದಿದ್ದಾನೆ. ಕೂಡಲೇ ಠಾಣೆ ಮೆಟ್ಟಿಲೇರಿ ಮೊಮ್ಮಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಮನವಿ ಮಾಡಿ ಷಕೀಮ್ ವಿರುದ್ಧ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಸದ್ಯ ಆರೋಪಿ 14 ದಿನಗಳ ನ್ಯಾಯಾಂಗ ಬಂಧನ ದಲ್ಲಿದ್ದು, 6 ತಿಂಗಳವರೆಗೆ ಜಾಮೀನು ಪಡೆಯಲು ಅವಕಾಶವಿರುವುದಿಲ್ಲ.

ರಸ್ತೆಯಲ್ಲೇ ಹೆಂಡತಿಯನ್ನು ಥಳಿಸಿದ ಮೈಸೂರಿನ ಕುಡುಕ ವಕೀಲ!

ನಕಲಿ ಪೇದೆ ಬಂಧನ
ವ್ಯಕ್ತಿಯೊಬ್ಬ ತಾನೊಬ್ಬ ಪೊಲೀಸ್ ಪೇದೆ ಎಂದು ನಂಬಿಸಿ, ಮದುವೆಯಾಗಿ ಯುವತಿಗೆ ಮೋಸಗೈದಿರುವ ಘಟನೆ ಮೈಸೂರಿನಲ್ಲಿ ಇಂದು ನಡೆದಿದೆ.

ಪರಸಯ್ಯನಹುಂಡಿ ಗ್ರಾಮದ ನಿವಾಸಿ ಶಿವಮೂರ್ತಿ (25) ಬಂಧಿತ ಆರೋಪಿ. ಈತ ಕಳೆದ ವರ್ಷ ದೇವಿಕ ಎಂಬ ಯುವತಿಯನ್ನು ಡಿಎಆರ್ ವಿಭಾಗದಲ್ಲಿ ಪೊಲೀಸ್ ಪೇದೆ ಸುಳ್ಳು ಹೇಳಿ ಮದುವೆಯಾಗಿದ್ದ. ಪೊಲೀಸ್ ಇಲಾಖೆಯ ಗುರುತಿನ ಚೀಟಿಯನ್ನೂ ಸಹ ಸಿದ್ದಪಡಿಸಿ ನಂಬಿಸಿದ್ದ.

ಅಲ್ಲದೆ ಮದುವೆ ಸಮಯದಲ್ಲಿ ವರದಕ್ಷಿಣೆಯಾಗಿ ಒಂದು ಲಕ್ಷ ನಗದು ಮತ್ತು 260 ಗ್ರಾಂ ಚಿನ್ನ ಪಡೆದುಕೊಂಡಿದ್ದ. ಮದುವೆಯಾದ ಹೊಸದರಲ್ಲಿ ಪೊಲೀಸ್ ಸಮವಸ್ತ್ರ ಧರಿಸಿ ಕೆಲಸಕ್ಕೆ ಹೋಗುತ್ತಿರುವುದಾಗಿ ನಂಬಿಸಿದ್ದ. ಅಲ್ಲದೆ ನಿಜಬಣ್ಣ ಬೆಳಕಿಗೆ ಬರುವಷ್ಟರಲ್ಲಿ ಸುಮಾರು 2 ಕೋಟಿಯಷ್ಟು ಸಾಲ ಮಾಡಿಕೊಂಡು ತಲೆಮರೆಸಿಕೊಂಡಿದ್ದ.

ಇತ್ತ ಪತಿಯ ಅಸಲಿ ವಿಷಯ ತಿಳಿದ ಪತ್ನಿ ದೇವಿಕ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Ragging is a punishable offence. A court in Mysuru ordered judicial custody to a man for ragging a girl. The incident took place in K R nagar taluk, Mysuru on July 29th.
Please Wait while comments are loading...