ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರ್ಜುನ ಆಯ್ತು, ಈಗ ಕಾವೇರಿ ಮಾವುತ –ಕಾವಡಿ ಮುಸುಕಿನ ಗುದ್ದಾಟ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 28 : ವಿಶ್ವವಿಖ್ಯಾತ ಜಂಬೂ ಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಕ್ಯಾಪ್ಟನ್ ಅರ್ಜುನನ ಮಾವುತ ಹಾಗೂ ಕಾವಾಡಿಯ ಮುಸುಕಿನ ಗುದ್ದಾಟದ ಜೊತೆ- ಜೊತೆಗೆ ಮತ್ತೊಂದು ಹೊಸ ತಾಪತ್ರಯ ಶುರುವಿಟ್ಟುಕೊಂಡಿದೆ. ಹೌದು, ಅರ್ಜುನನ ಜೊತೆ ಕುಮ್ಕಿ ಆನೆಯಾಗಿ ಹೆಜ್ಜೆ ಇಡುವ ಕಾವೇರಿ ಆನೆ ಮೇಲೆ ಕೂರಲು ಇಬ್ಬರು ಮಾವುತರಲ್ಲಿ ಪೈಪೋಟಿ ಆರಂಭವಾಗಿದೆ. ಒಮ್ಮೆಯೂ ಕಾವೇರಿಯನ್ನು ಮುನ್ನಡೆಸದ ವ್ಯಕ್ತಿಯನ್ನು ಮಾವುತನನ್ನಾಗಿ ನೇಮಕ ಮಾಡಿರು ವುದಕ್ಕೆ ಒಬ್ಬರ ವಿರೋಧವಾದರೆ, 'ಆನೆಯು ಮುಟ್ಟಲು ಬಿಡುವುದಿಲ್ಲ, ಆನೆಯ ಮೇಲೆ ಕೂರು ವುದು ಹೇಗೆ?' ಎಂಬ ಪ್ರಶ್ನೆ ಆನೆಯೊಂದಿಗೆ ಬಂದಿರುವ ಮತ್ತೊಬ್ಬ ಮಾವುತನದ್ದಾಗಿದೆ.

ಮಾವುತ - ಕಾವಾಡಿ ಕಾದಾಟದಲ್ಲಿ ಬಡವಾದ ಗಜಪಡೆ ಕ್ಯಾಪ್ಟನ್ ಅರ್ಜುನಮಾವುತ - ಕಾವಾಡಿ ಕಾದಾಟದಲ್ಲಿ ಬಡವಾದ ಗಜಪಡೆ ಕ್ಯಾಪ್ಟನ್ ಅರ್ಜುನ

ಹೌದು, ಐದು ವರ್ಷಗಳಿಂದ ಕುಮ್ಕಿ ಆನೆಯಾಗಿ ಹೆಜ್ಜೆ ಹಾಕುತ್ತಿದ್ದ ಕಾವೇರಿ ಆನೆಗೆ ಇದೇ ಮೊದಲ ಬಾರಿಗೆ ಜೆ.ಕೆ.ಪುಟ್ಟನನ್ನು ಮಾವುತನಾಗಿ ನೇಮಿಸಿ ಅರಮನೆಗೆ ಕಳುಹಿಸಿರುವುದು ಹಾಗೂ ಈ ಆನೆ ಯನ್ನು ಹಿಡಿಯಲು ಸಹಾಯ ಮಾಡಿದ, ಪಳ ಗಿಸಿದ ಮೇಲೆ ಸತತ 5 ಬಾರಿ ಕಾವೇರಿಯೊಂದಿಗೆ ದಸರೆಗೆ ಬಂದಿದ್ದ ಮಾವುತ ಕೆ.ಕೆ.ದೋಬಿ ಹೆಸರನ್ನು ಕೈಬಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ. -ಇನ್ನು ಕಾವೇರಿಯ ಮಾವುತ ಕೆ.ಕೆ.ದೋಬಿ, ಗಜಪಯಣ ಆರಂಭಕ್ಕೂ ಮುನ್ನ ಆನೆಗಳನ್ನು ಆಯ್ಕೆ ಮಾಡುವ ಅಧಿಕಾರಿಗಳು, ಮಾವುತ ಹಾಗೂ ಕಾವಾಡಿಗರ ಹೆಸರನ್ನೂ ಸೂಚಿಸಿ ಜಿಲ್ಲಾಡಳಿತಕ್ಕೆ ಪಟ್ಟಿ ಕಳುಹಿಸುತ್ತಾರೆ. ದುಬಾರೆ ಕ್ಯಾಂಪ್‍ನಲ್ಲಿ ಕಾವೇರಿ ಆನೆ ಪಳಗಿಸಿ, ಸತತ 5 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದೇನೆ. ಆದರೆ, ಈ ವರ್ಷ ಜೆ.ಕೆ.ಪುಟ್ಟನನ್ನು ಮಾವುತನನ್ನಾಗಿ ನೇಮಕ ಮಾಡಿರುವುದು ಬೇಸರ ತಂದಿದೆ. ಅರಣ್ಯಾಧಿಕಾರಿಗಳಿಗೆ ಎಲ್ಲ ವಿಷಯ ಗೊತ್ತಿದ್ದರೂ ಏಕೆ ಈ ರೀತಿ ಮಾಡಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ ಎನ್ನುತ್ತಾನೆ.

A controversy between Kaveri elephant Mauvuta – Kavadi

ಮಾವುತ ಕೆ.ಪುಟ್ಟು ಬೇಸರ
ಇತ್ತ ಕೆ.ಕೆ.ದೋಬಿ ಮಾಡುತ್ತಿರುವ ಆರೋಪ ಬೇಸರ ತರಿಸಿದೆ. ನಾನೂ 4 ವರ್ಷಗಳಿಂದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ. 2 ವರ್ಷ ಪ್ರಶಾಂತ ಹಾಗೂ 1 ವರ್ಷ ವಿಜಯ ಮೇಲೆ ಕುಳಿತಿದ್ದೇನೆ. ಈ ವರ್ಷ ಕಾವೇರಿಗೆ ಮಾವುತನಾಗಿ ಅರಣ್ಯಾಧಿ ಕಾರಿಗಳು ನೇಮಿಸಿದ್ದಾರೆ. ಆನೆಯನ್ನು ಮುಟ್ಟಲು ಅಲ್ಲ, ಹತ್ತಿರ ಹೋಗಲೂ ದೋಬಿ ಬಿಡುತ್ತಿಲ್ಲ ಎನ್ನುತ್ತಾರೆ ಮಾವುತ ಕೆ.ಪುಟ್ಟು

ಆದರೆ ದುಬಾರೆ ಕ್ಯಾಂಪ್‍ನಿಂದ ಕಾವೇರಿ ಆನೆ ಕಳುಹಿಸುವಾಗ ಮಾವುತ ದೋಬಿಯ ಹೆಸರು ಬಿಟ್ಟು ಈ ಆನೆಯನ್ನು ನೋಡಿಕೊಳ್ಳದ ಮತ್ತೊಬ್ಬ ಮಾವುತ ಜೆ.ಕೆ.ಪುಟ್ಟನ ಹೆಸರನ್ನು ಅರಣ್ಯಾಧಿಕಾರಿಗಳು ಪಟ್ಟಿಗೆ ಸೇರಿಸಿ ಕಳುಹಿಸಿದ್ದಾರೆ. ಕಾವೇರಿ ಆನೆಯನ್ನು ಒಮ್ಮೆಯೂ ಮುಟ್ಟದ ಪುಟ್ಟ, ಮಾವುತನಾಗಿ ಆನೆಯನ್ನು ಜಂಬೂ ಸವಾರಿಯಲ್ಲಿ ಹೇಗೆ ಮುನ್ನಡೆಸುತ್ತಾನೆ? ಎಂಬ ಪ್ರಶ್ನೆ ಇದೀಗ ಉದ್ಭವಿಸಿದೆ.

ಅರಣ್ಯಾಧಿಕಾರಿ ಏನಂತಾರೆ?
ಈ ಕುರಿತಾಗಿ ಅರಣ್ಯಾಧಿಕಾರಿ ಡಿಸಿಎಫ್ ಏಡುಕೊಂಡಲುರನ್ನು ಪ್ರಶ್ನಿಸಿದರೆ, ವಿಶೇಷ ಕರ್ತವ್ಯದ ಮೇಲೆ ದೋಬಿಯನ್ನು ಅರಣ್ಯ ಇಲಾಖೆ ಕರೆಸಿಕೊಂಡಿದೆ. ಜಂಬೂ ಸವಾರಿ ಸಮೀಪವಿದ್ದಾಗ ಆನೆಗೆ ಸಹಾಯಕ್ಕಾಗಿ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಇಬ್ಬರು ಮಾವುತರ ಮನಸ್ತಾಪ ನನ್ನ ಗಮನಕ್ಕೆ ಬಂದಿಲ್ಲ. ಇಬ್ಬರನ್ನೂ ಭೇಟಿಯಾಗಿ ವಿಚಾರಣೆ ನಡೆಸುತ್ತೇನೆ ಎನ್ನುತ್ತಾರೆ.

ತಾನು ಪಳಗಿಸಿರುವ ನೆಚ್ಚಿನ ಆನೆ ಕಾವೇರಿಯನ್ನು ಬಿಟ್ಟಿರಲಾಗದ ಕೆ.ಕೆ.ದೋಬಿಯೂ ಗಜಪಯಣದ ಜತೆಗೇ ಅರಮನೆಗೆ ಬಂದಿದ್ದಾನೆ. ಗಜಪಯಣ ಆರಂಭದಿಂದಲೂ ಇಲ್ಲಿಯವರೆಗೊ ಈತನೇ ಕಾವೇರಿ ಮೈದಡವಿ ನೋಡಿಕೊಳ್ಳುತ್ತಿದ್ದಾನೆ. ದೋಬಿ ಇದ್ದಾನೆಂದು ಕಾವೇರಿ ಬಳಿ ಸುಳಿಯದ ಪುಟ್ಟ, ಮುಖ ಮುನಿಸು ಮಾಡಿಕೊಂಡು ತಿರುಗುತ್ತಿದ್ದಾನೆ. ಇಬ್ಬರ ಕಿತ್ತಾಟದಿಂದ ಅರಮನೆಗೆ ಆಗಮಿಸಿರುವ ಮಾವುತರು ಹಾಗೂ ಕಾವಾಡಿಗಳ ಕುಟುಂಬಕ್ಕೆ ಯಾರ ಪರ ನ್ಯಾಯ ಹೇಳುವುದು ಎಂಬುದೇ ಗೊಂದಲವಾಗಿದೆ.

ಒಂದು ಕಡೆ ಅರ್ಜುನನನ್ನು ನಡೆಸಲು ಮಾವುತ ಹಾಗೂ ಕಾವಾಡಿಯ ಮುಸುಕಿನ ಗುದ್ದಾಟವಾದರೆ, ಕುಮ್ಕಿ ಆನೆ ಕಾವೇರಿಯ ಹೆಗಲ ಮೇಲೆ ಕೂರಲು ಇಬ್ಬರು ಮಾವುತರ ನಡುವೆ ಅಸಮಾಧಾನ ತಲೆದೋರಿದೆ. ಅರಣ್ಯ ಇಲಾಖೆ ನಿನ್ನನ್ನು ಇಲ್ಲಿಗೆ ಕಳುಹಿಸಿಲ್ಲ ಎಂದು ಜೆ.ಕೆ.ಪುಟ್ಟನ ಆರೋಪವಾದರೆ, ಕಾವೇರಿ ಆನೆಯನ್ನು ಬಿಟ್ಟುಕೊಡಲು ನಾನು ಸಿದ್ಧನಿಲ್ಲ. 5 ವರ್ಷಗಳಿಂದ ಜಂಬೂಸವಾರಿಯಲ್ಲಿ ಈ ಕಾವೇರಿ ಆನೆಯನ್ನು ನಾನೇ ಮುನ್ನಡೆಸಿದ್ದೆ. ಈ ವರ್ಷವೂ ನಾನೇ ಮುನ್ನುಡೆಸುತ್ತೇನೆ ಎಂಬುದು ದೋಬಿಯ ಬಲವಾದ ವಾದವಾಗಿದೆ.

English summary
A controversy between Kaveri elephant Mauvuta – Kavadi will be affecting on Mysuru Dasara Jambusavari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X