ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ವಿದೇಶಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್, 25 : ಆಸ್ಪತ್ರೆಗೆ ಬಂದಿದ್ದ ಅಮೆರಿಕಾದ ವಿದ್ಯಾರ್ಥಿನಿಗೆ ಕಾಂಪೌಂಡರ್ ತಾನೇ ವೈದ್ಯನೆಂದು ನಂಬಿಸಿ ತುರ್ತು ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಘಟನೆ ನಗರದಲ್ಲಿ ನಡೆದಿದೆ.

ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾಂಪೌಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಸುಮಿತ್ ಎಂಬಾತ ಲೈಂಗಿಕ ಕಿರುಕುಳ ನೀಡಿದ ಆರೋಪಿ. ಇತ್ತೀಚೆಗೆ ಅಧ್ಯಯನ ಪ್ರವಾಸಕ್ಕೆಂದು ಮೈಸೂರಿಗೆ ಬಂದಿದ್ದ ಅಮೆರಿಕಾ ವಿದ್ಯಾರ್ಥಿಗಳಲ್ಲಿ ಒಬ್ಬಳಿಗೆ ಗುಪ್ತಾಂಗದ ಸಮಸ್ಯೆ ಕಂಡು ಬಂದ ಕಾರಣ ಆಕೆ ಆಸ್ಪತ್ರೆಗೆ ತೆರಳಿದ ಸಂದರ್ಭದಲ್ಲಿ ಲೈಂಗಿಕ ಕಿರುಕುಳಕ್ಕೆ ಮುಂದಾಗಿದ್ದಾನೆ.[ವಿಪ್ರೋದಿಂದ 1 ಮಿಲಿಯನ್ ಪೌಂಡ್ಸ್ ಆಗ್ರಹಿಸಿ ದೂರು]

A America student sexually assaulted by private hospital compounder Mysuru

ಮಂಗಳವಾರ ರಾತ್ರಿ ಗುಪ್ತಾಂಗದ ಸಮಸ್ಯೆ ತೀವ್ರವಾಗಿ ಬಾದಿಸಿದ ಪರಿಣಾಮ ಚಿಕಿತ್ಸೆ ಪಡೆಯಲೆಂದು ನರಸಿಂಹರಾಜ ಪೊಲೀಸ್ ಠಾಣಾ ವ್ಯಾಪ್ತಿಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ನೀಡುವಂತೆ ಕೋರಿದ್ದಾಳೆ. [ರಿಕ್ಷಾ ಚಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದ 'ಕಾಮುಕಿ' ಸೆರೆ]

ಆಕೆ ಆಸ್ಪತ್ರೆಗೆ ಹೋದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಯಾವುದೇ ವೈದ್ಯರಿರಲಿಲ್ಲ. ಆಗ ಕಾಂಪೌಂಡರ್ ಸುಮಿತ್ ಮಾತ್ರ ಇದ್ದು ತಾನೇ ವೈದ್ಯನೆಂದು ನಂಬಿಸಿ ತುರ್ತು ಚಿಕಿತ್ಸೆ ನೀಡುವುದಾಗಿ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾನೆ.

ಸುಮಿತ್ ನ ವರ್ತನೆಯಿಂದ ವಿಚಲಿತಳಾದ ವಿದ್ಯಾರ್ಥಿನಿ ಬುಧವಾರ ಬೆಳಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿಗೆ ದೂರು ನೀಡಿದ್ದಾಳೆ. ಆದರೆ ಆಡಳಿತ ಮಂಡಳಿಯವರು ಅವನ ಮೇಲೆ ಯಾವುದೇ ಕಾನೂನು ಕ್ರಮಕ್ಕೆ ಮುಂದಾಗದೆ ಆತನನ್ನು ಕೆಲಸದಿಂದ ವಜಾಗೊಳಿಸಿ ಕೈತೊಳೆದು ಕೊಂಡಿದ್ದಾರೆ.[ಕುಡಿದ ಮತ್ತಲ್ಲಿ ಗಗನಸಖಿಯರ ಫೋಟೋ ತೆಗೆಯಲು ಮುಂದಾದ್ರು..]

ಆಸ್ಪತ್ರೆ ಮಂಡಳಿಯವರು ತೋರಿದ ನಿರ್ಲಕ್ಷ್ಯದಿಂದ ನೊಂದ ವಿದೇಶಿ ವಿದ್ಯಾರ್ಥಿನಿ ನರಸಿಂಹರಾಜ ಠಾಣಾ ವ್ಯಾಪ್ತಿಯ ಪೊಲೀಸ್ ಠಾಣೆಗೆ ತೆರಳಿ ಆಸ್ಪತ್ರೆ ಹಾಗೂ ಕಿರುಕುಳ ನೀಡಿದ ಸುಮಿತ್ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

English summary
A private hospital compounder Summit sexually assaulted to America student at Mysuru on Tuesday, November 24th, America student registered complaint on him and Narasimharaja police arrested on Wednesday
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X