ಮೈಸೂರಲ್ಲಿ ಮತಚಲಾಯಿಸಿ ಜೀವತೆತ್ತ ಶತಾಯುಷಿ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು,ಫೆಬ್ರವರಿ,22: ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ಮತ ಚಲಾಯಿಸಲು ಬಂದ ಶತಾಯುಷಿಯೊಬ್ಬರು ಮತಗಟ್ಟೆಯಲ್ಲೇ ಕುಸಿದು ಬಿದ್ದ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಕೌಲನಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.

ಬೆಟ್ಟದಪುರ ಕೌಲನಹಳ್ಳಿ ಗ್ರಾಮದ ದಿವಂಗತ ಕಾಳಾಚಾರ್ ಅವರ ಪತ್ನಿ ಪುಟ್ಟಾಮಣಮ್ಮ ಮೃತಪಟ್ಟ ಶತಾಯುಷಿ. ಇವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರಿದ್ದಾರೆ.ಈ ಇಳಿವಯಸ್ಸಿನಲ್ಲಿಯೂ ಮತ ಚಲಾಯಿಸಲು ಬಂದ ಇವರ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ಇಳಿವಯಸ್ಸೇ ತಲೆತಗ್ಗಿಸುತ್ತೆ ಕಬ್ಬಿನ ಜೂಸ್ ಮಾಮನ ಎದುರು]

Mysuru

ಪುಟ್ಟಾಮಣಮ್ಮ ಅವರು ಫೆಬ್ರವರಿ 20ರ ಶನಿವಾರದಂದು ನಡೆದ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ಮತಹಾಕಲು ಮತಗಟ್ಟೆ ಸಂಖ್ಯೆ 36ಕ್ಕೆ ಸಂಜೆ 4.30 ರ ಸಮಯಕ್ಕೆ ಬಂದಿದ್ದಾರೆ. ಅಸ್ವಸ್ಥಗೊಂಡ ಅವರು ಮತ ಚಲಾಯಿಸಿದ ನಂತರ ಸ್ಥಳದಲ್ಲಿಯೇ ಕುಸಿದು ಬಿದ್ದು ಬಿದ್ದಿದ್ದಾರೆ.[ಪಂಚಾಯಿತಿ ಫೈಟ್ : ಮತದಾನ ಅಂತ್ಯ, ಫೆ.23ರಂದು ಫಲಿತಾಂಶ]

ಪುಟ್ಟಾಮಣಮ್ಮ ಮೂರು ದಿನಗಳ ಹಿಂದೆಯಷ್ಟೆ ನೂರು ವರ್ಷ ಪೂರೈಸಿದ್ದರು. ಕಳೆದ ಹಲವು ಚುನಾವಣೆಗಳಲ್ಲಿ ಮತ ಚಲಾಯಿಸುತ್ತಾ ಬಂದಿದ್ದ ಇವರು ಈ ಬಾರಿಯೂ ಮತ ಚಲಾಯಿಸುವ ಬಯಕೆಯಿಂದ ಮಕ್ಕಳ ಸಹಕಾರದೊಂದಿಗೆ ಮತ ಚಲಾಯಿಸಲು ಸಂಜೆ ವೇಳೆ ಬಂದಾಗ ಕುಸಿದ ಬಿದ್ದ ಇವರನ್ನು ಉಪಚರಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A 100 year women Puttamanamma died in taluk and zilla panchayat election time in Mysuru on Saturday, February 20th.
Please Wait while comments are loading...