ಫೆ.2 ರಿಂದ ಮೈಸೂರಲ್ಲಿ 9ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಜನವರಿ 19 : 9ನೇ ಅಂತರಾಷ್ಟ್ರೀಯ ಚಲನಚಿತ್ರೋತ್ಸವವು ಫೆ.2 ರಿಂದ 9ರವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಏಕಕಾಲದಲ್ಲಿ ನಡೆಯುವುದು, ಸುಮಾರು 200 ಚಿತ್ರಗಳು ಉತ್ಸವದಲ್ಲಿ ಪ್ರದರ್ಶಿತಗೊಳ್ಳಿವೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಾರ್ತಾ ಇಲಾಖೆ ಕಚೇರಿಯಲ್ಲಿ ಪೋಸ್ಟರ್ ಬಿಡುಗಡೆಗೊಳಿಸಿದರು. ಸಿನಿಮೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ಪೂರ್ವಸಿದ್ಧತೆಗಳು ಬಿರುಸಿನಿಂದ ನಡೆದಿದ್ದು ಬೆಂಗಳೂರಿನ ರಾಜಾಜಿನಗರದ ಒರಿಯನ್ ಮಾಲ್, ಪಿವಿಆರ್ ಸಿನಿಮಾಸ್ ಹಾಗೂ ಮೈಸೂರಿನ ಐನಾಕಸ್ ಸಿಮಾಸ್ ನಲ್ಲಿ ಪ್ರದರ್ಶನಗೊಳ್ಳಲಿವೆ. ಸಿನಿಮೋತ್ಸವವು ಫೆ2ರಂದು ಬೆಂಗಳೂರಿನಲ್ಲಿ ಉದ್ಘಾಟನೆಗೊಳ್ಳಲಿದ್ದು ಫೆ.9ರಂದು ಮೈಸೂರಿನ ಅರಮನೆ ಆವರಣದಲ್ಲಿ ಸಮಾರೋಪಗೊಳ್ಳುವುದು ಎಂದು ತಿಳಿಸಿ 17 ಕನ್ನಡ ಚಿತ್ರ ಸೇರಿದಂತೆ ಪ್ರತಿನಿತ್ಯ 20 ರಂತೆ 7 ದಿನ 140 ಸಿನಿಮಾಗಳ ಪ್ರದರ್ಶನಗೊಳ್ಳಲಿವೆ ಎಂದರು.[ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2016ರ ವಿಶೇಷತೆಗಳು]

9th International Film Festival 2017, held in Bangaluru and Mysuru from February 2 to 9

ಸಿನಿಮೋತ್ಸವವನ್ನು ಭಾರತೀಯ, ಕನ್ನಡ, ಏಷಿಯನ್ ಹಾಗೂ ಕನ್ನಡ ಜನಪ್ರಿಯ ಮನರಂಜನಾ ಚಿತ್ರಗಳ ಸ್ಪರ್ಧೆ ವಿಭಾಗ ಎಂದು ವಿಂಗಡಿಸಲಾಗಿದೆ. ಶತಮಾನೋತ್ಸವದ ನೆನಪು, ಅದ್ಭುತ ಭಾರತ ವಿಭಾಗದಲ್ಲಿ ವಿವಿಧ ಚಲನಚಿತ್ರಗಳು ಪ್ರದರ್ಶನಗೊಳ್ಳಿವೆ ಎಂದು ಅಕಾಡೆಮಿ ಕಾರ್ಯದರ್ಶಿ ದಿನೇಶ್ ತಿಳಿಸಿದರು.

ಪ್ರದರ್ಶನ ಕಾಣದ ಅಪರೂಪದ ಚಲನಚಿತ್ರಗಳು ಸಿನಿಮೋತ್ಸವದಲ್ಲಿ ತೆರೆ ಮೇಲೆ ಬರಲಿವೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು. ಪ್ರತಿನಿಧಿಗಳ ನೋಂದಣಿ ಕಾರ್ಯ ಆರಂಭವಾಗಿದ್ದು ಆಸಕ್ತರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು. ರು.600 ಪ್ರವೇಶ ಶುಲ್ಕವಿದ್ದು ವಿಶೇಷ ರಿಯಾಯಿತಿ ದರ ರು.300 ನಿಗದಿಗೊಳಿಸಲಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
9th International Film Festival 2017, held in Bangaluru and Mysuru from February 2 to 9. Kannada film 140, including 17 of the 20 films to be shown at the 7th day.
Please Wait while comments are loading...