ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಎಸ್ಓಯು ಮಾನ್ಯತೆ ರದ್ದು: 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

ಮೈಸೂರು ವಿಶ್ವವಿದ್ಯಾಲಯದ (ಕೆಎಸ್ ಒಯು) ಮಾನ್ಯತೆ ರದ್ದಾದ ಹಿನ್ನೆಲೆ. 95 ಸಾವಿರ ವಿದ್ಯಾರ್ಥಿಗಳ ಭವಿಷ್ಯ ತೂಗುಯ್ಯಾಲೆಯಲ್ಲಿ. ಮಾನ್ಯತೆಗಾಗಿ ಕೆಎಸ್ ಒಯು ಅಧಿಕಾರಿಗಳ ಪ್ರಯತ್ನ . ಜೂನ್ 21ರಂದು ನವದೆಹಲಿಯಲ್ಲಿ ಸಭೆ.

By Yashaswini
|
Google Oneindia Kannada News

ಮೈಸೂರು, ಜೂನ್ 17: ಕಳೆದೆರಡು ವರುಷಗಳ ಹಿಂದೆ ಮಾನ್ಯತೆ ಕಳೆದುಕೊಂಡಿರುವ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (ಕೆಎಸ್ಓಯು) 2017-18ನೇ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳು ಇಲ್ಲದೆಯೇ ಮುಂದುವರಿಯಬೇಕಾದ ಇಕ್ಕಟ್ಟಿಗೆ ಸಿಲುಕಿಕೊಂಡಿದೆ.

ನಿಯಮ ಉಲ್ಲಂಘನೆ ಕಾರಣವೊಡ್ಡಿ 2015ನೇ ಜೂನ್ 16ರಂದು ವಿಶ್ವವಿದ್ಯಾನಿಲಯ ಅನುದಾನ ಆಯೋಗವು ( ಯುಜಿಸಿ)2012-13ನೇ ಶೈಕ್ಷಣಿಕ ಸಾಲಿನಿಂದ ಮುಕ್ತ ವಿವಿ ಮಾನ್ಯತೆ ರದ್ದುಪಡಿಸಲಾಗಿತ್ತು.

ಅಷ್ಟರಲ್ಲಾಗಲೇ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆದಿದ್ದ ಬಹುತೇಕ ವ್ಯಾಸಂಗ ಅವಧಿ ಈಚೆಗೆ ಮುಗಿದೆ. ಕೆಲವರು ಕೊನೆಯ ಸೆಮಿಸ್ಟರ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸುತ್ತಿದ್ದಾರೆ. 2015 - 2016 ಹಾಗೂ 2016-17ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ನಡೆದಿರಲಿಲ್ಲ.

95 thousands students fate is precarious as KSOU lost its recognition by UGC

ಮಾನ್ಯತೆ ನವೀಕರಿಸದೆ ಇದ್ದರೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಅಧಿಕೃತವಾಗಿ ವಿದ್ಯಾರ್ಥಿಗಳೇ ಇರುವುದಿಲ್ಲ. ಕೊನೆಯ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿರುವವರು, ಪುನರಾವರ್ತನೆಗ ವಿದ್ಯಾರ್ಥಿಗಳು ಮಾತ್ರ ಇದ್ದಾರೆ. ಹಿಂದಿನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಕೆಲಸಗಳಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಹೊಸದಾಗಿ ಪ್ರವೇಶಾತಿಗೆ ಅವಕಾಶ ಲಭಿಸದಿದ್ದರೆ ಮುಂದೆ ಆ ಕೆಲಸವೂ ಇರುವುದಿಲ್ಲ ಎನ್ನುತ್ತಾರೆ ವಿವಿ ಕುಲಪತಿ ಪ್ರೊ.ಡಿ. ಶಿವಲಿಂಗಯ್ಯ.

ಯುಜಿಸಿ ವಿಧಿಸಿರುವ ಲ್ಲಾ ಮಾರ್ಗದರ್ಶಕಗಳನ್ನು ನಾವು ಪಾಲಿಸಿದ್ದೇವೆ. ಅಗತ್ಯ ದಾಖಲೆಗಳನ್ನು ಒದಗಿಸಿದ್ದೇವೆ. ವಿವಿ ಮಾನ್ಯತೇ ನವೀಕರಣಗೊಳಿಸುವುದು, ವ್ಯಾಸಂಗ ಮುಗಿಸಿರುವ ( ನ್ ಹೌಸ್ ) ಪದವಿಪ್ರಮಾಣ ಪತ್ರ ನೀಡುವಂತೆ ಸಭೆಯಲ್ಲಿ ಕೋರಲಾಗುವುದು ಎಂದರು. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಮುಗಿಸಿರುವ ಸುಮಾರು 95 ಸಾವಿರ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದಾರೆ. ಯುಜಿಸಿ ಮಾನ್ಯತೆ ಲಭಿಸಿದಿದ್ದರೆ ಪದವಿ ಪಡೆದರೂ ಸಿಂಧುವಾಗುವುದಿಲ್ಲ ಬ ಆತಂಕ ಅವರಲ್ಲಿದೆ. 55 ವಿದ್ಯಾರ್ಥಿಗಳು ಸಂಶೋಧನೆಗೆ ನೋಂದಾಐಇಸಿ ಎರಡು ವರುಷಗಳೇ ಕಳೆದಿದೆ. ಅಲ್ಲದೆ, ಹೊರಭಾಗದ ಸುಮಾರು 2 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಮತಿಗಾಗಿ ಕಾದುಕುಳಿತಿದ್ದಾರೆ.

2015ರಲ್ಲಿ ಮಾನ್ಯತೆ ರದ್ದಾಗಿದ್ದರೂ ದ್ವಿತೀಯ ಹಾಗೂ ತೃತೀಯ ಬಿ.ಎ, ಬಿ.ಕಾಂ ಮತ್ತು ಅಂತಿಮ ಎಂ,ಎ ಹಾಗೂ ಎಂ. ಕಾಂ ಕೋರ್ಸಗಳಿಗೆ ಪ್ರವೇಶ ಪ್ರಕ್ರಿಯೆ ಮುಂದುವರೆಸುವಂತೆ ರಾಜ್ಯ ಉನ್ನತ ಶಿಕ್ಷಣ ಲಾಖೆ ಅನುಮತಿ ನೀಡಿತ್ತು. ಆದರೆ, ಯಾವುದೇ ಕೋರ್ಸ್ಗಳಿಗೆ ಹೊಸದಾಗಿ ಪ್ರವೇಶ ನೀಡಬಾರದು ಎಂದು ಷರತ್ತು ವಿಧಿಸಿತ್ತು.

ವಿವಿಗೆ ಹಿಂದೆ ಲಭಿಸಿದ ಅನುದಾನವನ್ನೇ ಸಿಬ್ಬಂದಿ ವೇತನ ಹಾಗೂ ಇತರ ಕಾರ್ಯಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಅದು ಖಾಲಿಯಾದರೆ ಮುಂದಿನ ದಿನಗಳಲ್ಲಿ ಹಣಕಾಸಿನ ಸಮಸ್ಯೆ ತಲೆದೋರಲಿದೆ. ಮಾನ್ಯತೆ ಇಲ್ಲದಿರುವ ಕಾರಣ ಯಾವುದೇ ಅನುದಾನ ಬರುತ್ತಿಲ್ಲ ಎಂದು ಕುಲಸಚಿವ ಡಾ.ಕೆ.ಜಿ ಚಂದ್ರಶೇಖರ್ ಹೇಳಿದರು.

ಜೂನ್ 21 ರಂದು ಕೆಎಸ್ ಒಯು ಭವಿಷ್ಯ: KSOU ಮಾನ್ಯತೆ ನವೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ನವದೆಹಲಿಯಲ್ಲಿ‌ ಜೂನ್ 21 ರಂದು ಅಧಿಕಾರಿಗಳ ಸಭೆ ನಡೆಯಲಿದ್ದು ಅಂದು KSOU ಭವಿಷ್ಯ ನಿರ್ಧಾರವಾಗಲಿದೆ. ಮಾನವ ಸಂಪನ್ಮೂಲ‌ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಎಸ್.ಕೆ.ಶರ್ಮಾ ಅವರ ನೇತೃತ್ವದಲ್ಲಿ‌ ಈ ಸಭೆ ನಡೆಯಲಿದ್ದು, ಸಭೆಯಲ್ಲಿ ಯುಜಿಸಿ ಅಧಿಕಾರಿಗಳು, KSOU ಅಧಿಕಾರಿಗಳು ಉಪಸ್ಥಿತಿ ಸಾಧ್ಯತೆ ಇದೆ.

ಇನ್ನು ಇತ್ತಕಡೆ ಪ್ರಸಕ್ತ ಸಾಲಿಗಾದರೂ ಮಾನ್ಯತೆ ನವೀಕರಣಕ್ಕೆ ಕೆಎಸ್ ಒಯು ಕಸರತ್ತು ನಡೆಸುತ್ತಿದೆ. ಒಂದು ವೇಳೆ ಮಾನ್ಯತೆ ನವೀಕರಣವಾಗದಿದ್ದರೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. ಇದರಿಂದಾಗಿ 2012-13, 2013-14 ನೇ ಸಾಲಿನ ಅಂಕಪಟ್ಟಿಗಳು ಅಮಾನ್ಯಗೊಂಡಿರುವ ಹಳೆ ನೋಟಿನಂತಾಗಿವೆ.

English summary
Karnataka Open University having lost its recognition by UGC two years ago, has made the fate of 95,000 students insecure. To get its recognition back, the meeting has been organized by senior officials of KSOU and UGC, will decide the fate of the university.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X