ನಾಗರಹೊಳೆ ಕಾಡಿನ ರಸ್ತೆ ಪಕ್ಕದಲ್ಲೇ 9 ಹುಲಿ ಕಂಡ ಸ್ಥಳೀಯರು

By: ಗಗನ್ ಪ್ರೀತ್
Subscribe to Oneindia Kannada

ನಾಗರಹೊಳೆ, ಜನವರಿ 7: ಕಾಡಿನಲ್ಲಿ ಹುಲಿ ನೋಡಬೇಕು ಅಂದುಕೊಳ್ಳುವವರಿಗೂ ಸಂತೋಷದ ಸುದ್ದಿಯೊಂದಿದೆ. ನಾಗರಹೊಳೆ ಕಾಡಿನಲ್ಲಿ ರಸ್ತೆ ಪಕ್ಕದಲ್ಲೇ ಒಟ್ಟಿಗೆ ಒಂಬತ್ತು ಹುಲಿ ಕಂಡುಬಂದಿದೆ. ಸ್ಥಳೀಯರೊಬ್ಬರಿಗೆ ಈ ರೀತಿ ಅಷ್ಟು ಸಂಖ್ಯೆಯ ಹುಲಿ ಕಂಡುಬಂದಿದ್ದು, ಸಹಜವಾಗಿಯೇ ಸಂತೋಷ ಹಾಗೂ ಗಾಬರಿಗೆ ಕಾರಣವಾಗಿದೆ.

ಎಷ್ಟೋ ಸಲ ಗಂಟೆಗಟ್ಟಲೆ ಕಾದರೂ, ನಾಲ್ಕೈದು ಬಾರಿ ಸಫಾರಿಗೆ ಹೋದರೂ ಯಾವ ಪ್ರಾಣಿಯನ್ನೂ ನೋಡಲು ಆಗಿರೋದಿಲ್ಲ. ಇನ್ನು ಹುಲಿ ಕಾಣುವುದು, ಅದರಲ್ಲೂ ಒಂಬತ್ತು ಹುಲಿ ಕಾಣಿಸಿಕೊಳ್ಳುವುದು ತೀರಾ ಕಷ್ಟ ಕಷ್ಟ. ಈ ರೀತಿ ಹುಲಿಗಳು ರಸ್ತೆ ಪಕ್ಕದಲ್ಲಿ ಬಂದು ಇರುವುದಕ್ಕೆ ಕಾರಣಗಳಿವೆ.[ಹುಲಿ ಕೂಡ ಹೆದರುವ ಕಾಡು ನಾಯಿ ಅಂದ್ರೆ ಸುಮ್ನೇನಾ?]

9 tiger cited in Nagarahole forest

ಕಾಡಿನ ಮಧ್ಯದ ರಸ್ತೆಗಳಿಗೆ ಹೋಲಿಸಿದರೆ, ಡಾಂಬರು ರಸ್ತೆಗಳು ಹೆಚ್ಚು ಬೆಚ್ಚಗಿರುತ್ತವೆ. ಏಕೆಂದರೆ ಬೆಳಗ್ಗೆ ಇಡೀ ಬಿಸಿಲು ಕಾದಿರುತ್ತದೆ. ಜತೆಗೆ ವಾಹನಗಳ ಓಡಾಟದಿಂದಲೂ ಹೀಗಾಗಿರುತ್ತದೆ. ಈಗ ಕಾಡಿನೊಳಗೆ ವಿಪರೀತ ಚಳಿಯಿರುವುದರಿಂದ ಬೆಚ್ಚಗೆ ಎನಿಸುವ ಡಾಂಬರು ರಸ್ತೆಯ ಪಕ್ಕ ಬರುತ್ತವೆ.

ಇನ್ನು ಈಗ ಹುಲಿಗಳಿಗೆ ಕೂಡಿಕೆ ಕಾಲ. ಆದ್ದರಿಂದ ಅವುಗಳ ಚಟುವಟಿಕೆ ಕೂಡ ಹೆಚ್ಚು. ಸಾಧಾರಣವಾಗಿ ತಂಪಾದ ಜಾಗವನ್ನೇ ಹುಲಿಗಳು ಆರಿಸಿಕೊಳ್ಳುತ್ತವೆ. ಅದರಲ್ಲೂ ಬೇಟೆಯಾಡಿ, ಮಾಂಸ ತಿಂದ ನಂತರ ಅವುಗಳಿಗೆ ತಂಪಾದ ನೀರಿನ ಸಾಮೀಪ್ಯವೇ ಬೇಕು. ಆದರೆ ಈಗ ವಾತಾವರಣವೇ ಚಳಿಯಾದ್ದರಿಂದ ರಸ್ತೆ ಪಕ್ಕದಲ್ಲಿ ಕಾಣಿಸಿಕೊಳ್ಳುತ್ತಿದೆ. ಈಗೊಮ್ಮೆ ನಾಗರಹೊಳೆಗೆ ಪ್ರವಾಸಕ್ಕೆ ಹೋಗಿಬರಬಹುದು: ಹುಲಿ ದರ್ಶನಂ ಪ್ರಾಪ್ತಿರಸ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
9 Tiger cited to local people in Nagarahole forest, Which is located in Mysuru and Kodagu District.
Please Wait while comments are loading...