ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 88 ಸಾವಿರ ಮೌಲ್ಯದ ನಕಲಿ ನೋಟು ವಶ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್ 19: ಎಟಿಎಂಗಳಲ್ಲಿ 2000 ಮುಖ ಬೆಲೆಯ ನೂತನ ನೋಟುಗಳು ಚಲಾವಣೆ ಆಗುತ್ತಿದ್ದಂತೆಯೇ ಅದನ್ನು ನಕಲಿ ಮಾಡಿ, ಚಲಾವಣೆ ಮಾಡುತ್ತಿದ್ದ ಪ್ರಕರಣ ಮೈಸೂರಿನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿ, ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಹಿನಕಲ್ ನಿವಾಸಿ ಅಜಿತ್, ಮಂಡ್ಯದ ರೇವಣ್ಣ ಮತ್ತು ಮೇಟಗಳ್ಳಿಯ ರೋಷನ್ ಬಂಧಿತರು. ಇವರಿಂದ 2000 ರುಪಾಯಿ ಮುಖಬೆಲೆಯ 34 ನಕಲಿ ನೋಟು, 50 ರು. ಮುಖಬೆಲೆಯ 4 ನಕಲಿ ನೋಟು, 20 ರು. ಮುಖಬೆಲೆಯ 2 ನಕಲಿ ನೋಟು, ಒಂದು ಕಲರ್ ಜೆರಾಕ್ಸ್ ಮಶೀನ್, ಒಂದು ಸ್ಕೇಲ್ ಹಾಗೂ ಕಟ್ಟರ್ ವಶಪಡಿಸಿಕೊಳ್ಳಲಾಗಿದೆ.[2 ಸಾವಿರ ರೂ. ನಕಲಿ ನೋಟು ಚಲಾವಣೆ: ಇಬ್ಬರ ಬಂಧನ]

Fake note

ಸೆರೆ ಸಿಕ್ಕಿದ್ದು ಹೇಗೆ?
ಅಜಿತ್ ಮತ್ತು ರೇವಣ್ಣ ಯಮಹಾ ಬೈಕ್ ನಲ್ಲಿ ಸರಸ್ವತಿಪುರಂನ ಕವಿತಾ ಬೇಕರಿ ಬಳಿ ವೇಗವಾಗಿ ಬರುತ್ತಿದ್ದರು. ಈ ವೇಳೆ ಸರಸ್ವತಿಪುರಂ ಠಾಣೆ ಪೊಲೀಸರು ಸಂಶಯದ ಮೇಲೆ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಅಜಿತ್ ಜೇಬಿನಲ್ಲಿ 2000 ರು. ಮುಖಬೆಲೆ 3 ನೋಟು, ರೇವಣ್ಣನ ಬಳಿ 2000 ರು. ಮುಖಬೆಲೆಯ 7 ನೋಟುಗಳು ದೊರೆತವು.

ಇವುಗಳನ್ನು ಪರಿಶೀಲಿಸಿದಾಗ ನಕಲಿ ನೋಟುಗಳಂತೆ ಕಂಡುಬಂದ ಹಿನ್ನೆಲೆಯಲ್ಲಿ ಠಾಣೆಗೆ ಕರೆದೊಯ್ದು ಪರಿಶೀಲಿಸಿದರು. ಆಗ ಅವುಗಳು ನಕಲಿ ಎಂದು ಮನದಟ್ಟಾಯಿತು. ಈ ಬಗ್ಗೆ ವಿಚಾರಣೆಗೊಳಪಡಿಸಿದಾಗ ಅವರು ಮೇಟಗಳ್ಳಿಯ ರೋಷನ್ ಎಂಬಾತನ ಹೆಸರು ಹೇಳಿ, ಆತನೇ ನೋಟುಗಳನ್ನು ನೀಡಿದ ಬಗ್ಗೆ ಮಾಹಿತಿ ನೀಡಿದ್ದಾರೆ.[ಚಿಕ್ಕಮಗಳೂರಿನಲ್ಲಿ 2 ಸಾವಿರ ರು ಖೋಟಾನೋಟು ಪತ್ತೆ]

ತಕ್ಷಣ ಮೇಟಗಳ್ಳಿಯ ರೋಷನ್ ನನ್ನು ವಶಕ್ಕೆ ಪಡೆದು, ಪರಿಶೀಲನೆ ನಡೆಸಿದಾಗ ಆತ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿ ಚಲಾವಣೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ದಾಳಿಯ ಸಂದರ್ಭದಲ್ಲಿ ಒಟ್ಟು 88,240 ರು. ಮೌಲ್ಯದ (2000 ರು. ಮುಖಬೆಲೆಯ 44 ನಕಲಿ ನೋಟು, 50 ರು. ಮುಖಬೆಲೆಯ 4 ನಕಲಿ ನೋಟು, 20 ರು. ಮುಖಬೆಲೆಯ 2 ನಕಲಿ ನೋಟು) ನಕಲಿ ನೋಟುಗಳು ಹಾಗೂ ಕಲರ್ ಜೆರಾಕ್ಸ್ ಮಶೀನ್ ವಶಪಡಿಸಿಕೊಳ್ಳಲಾಗಿದೆ.

ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಮೈಸೂರಿನ ವಿಜಯನಗರದಲ್ಲಿ ಮನೆ ದರೋಡೆ ಮತ್ತು ಮಳವಳ್ಳಿ ತಾಲೂಕಿನ ಕ್ಯಾತನಹಳ್ಳಿಯ ರಾಜಕೀಯ ಮುಖಂಡರೊಬ್ಬರ ಮನೆ ದರೋಡೆ ಮಾಡುವ ಸಂಚು ರೂಪಿಸಿದ್ದರು ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ.

English summary
88 thousand worth of fake notes including 2 thousand rupees notes seized by Saraswati puram police officers in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X