ಸಾಹಿತ್ಯ ಜಾತ್ರೆಯಲ್ಲಿ ದೊಡ್ಡರಂಗೇಗೌಡರ ಜೊತೆ ಮಾತುಕತೆ

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ನವೆಂಬರ್ 25: ಓದುಗರ ಅಭಿರುಚಿ ಬದಲಾಗಿದೆಯೆ? ಅಥವಾ ಓದುಗರ ಅಭಿರುಚಿಯ ದಿಕ್ಕನ್ನೇ ಬದಲಿಸುವ ಪಯತ್ನ ನಡೆಯುತ್ತಿದೆಯೆ? ಯಾವುದನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಾಗದ ಪರಿಸ್ಥಿತಿ ಇಂದು ಸೃಷ್ಟಿಯಾಗಿರುವುದು ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಯಲ್ಲಿ ಕಂಡುಬಂದಿತು. ಸಮ್ಮೇಳನದ ಪುಸ್ತಕ ಮಳಿಗೆಯಲ್ಲಿ ಕನ್ನಡದ ಎಲ್ಲಾ ಪ್ರಕಾರದ ಸಾಹಿತಿಗಳ ಪುಸ್ತಕಗಳನ್ನು ಕಾಣಬಹುದು.

ಸಾಹಿತ್ಯ ಸಮ್ಮೇಳನ : ನವೆಂಬರ್ 25ರ ಕಾರ್ಯಕ್ರಮ ಪಟ್ಟಿ

ಇನ್ನು ಪ್ರತಿ ಪುಸ್ತಕ ಮಳಿಗೆಯಲ್ಲೂ ಕಾಣಬರುತ್ತಿದ್ದದ್ದು ಪ್ರಖ್ಯಾತ ಸಾಹಿತಿಗಳೇ. ಹೀಗೆ ಪುಸ್ತಕ ಮಳಿಗೆಯ ಸುತ್ತ ಸುತ್ತುತ್ತಿದ್ದ ನಮ್ಮ ಪ್ರತಿನಿಧಿಗೆ ಕಂಡು ಬಂದದ್ದು ಸಾಹಿತಿ ಪ್ರೊ. ದೊಡ್ಡರಂಗೇಗೌಡರು. ಒನ್ ಇಂಡಿಯಾದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡದ್ದು ಹೀಗೆ.

83rd Kannada Sahitya Sammelana Mysuru: Doddarange Gowda interview

ಮೈಸೂರಿನಲ್ಲಿ ಹಲವು ದಶಕಗಳ ಬಳಿಕ ಮತ್ತೆ ಸಾಹಿತ್ಯ ಜಾತ್ರೆ ನಡೆಯುತ್ತಿರುವುದು ಸಂತಸಕಾರಿ. ಅದರಲ್ಲೂ ತಮ್ಮ ಮೊನಚು ಮಾತಿನಿಂದಲೇ ಪ್ರಖ್ಯಾತರಾದ ಚಂಪಾರವರು ಉದ್ಘಾಟಿಸಿದ್ದು ಸಂತಸದಾಯಕ. ಕನ್ನಡದ ಸಮಸ್ಯೆಗಳು ಸಾವಿರದ ಸಮಸ್ಯೆಗಳಾಗಿದೆ. ಸಮ್ಮೇಳನದ ನಿಯಮಾವಳಿಗಳು ಕೇವಲ ಪುಸ್ತಕಕಕ್ಕೆ ಮಾತ್ರ ಸೀಮಿತವಾಗದೇ ಅನುಷ್ಠಾನಕ್ಕೆ ಬರಬೇಕು. ಶೈಕ್ಷಣಿಕ ಕ್ಷೇತ್ರದಲ್ಲಿ ಮೊದಲು ಕನ್ನಡ ಕಡ್ಡಾಯವಾಗಬೇಕು. ಬೇರೇ ಬಾಷೆಗಳನ್ನು ಜನ ಕಲಿಯಲಿ, ಆದರೆ ಕನ್ನಡವನ್ನು ಓದುವ - ಬರೆಯುವ, ಕನ್ನಡದಲ್ಲಿ ಪರೀಕ್ಷೆ ಬರೆದು ತೇರ್ಗಡೆಯಾಗುವ ಕಾನೂನನ್ನು ಸರ್ಕಾರ ರೂಪಿಸಿದಾಗ ಮಾತ್ರ ಕನ್ನಡಕ್ಕೆ ಉಳಿಗಾಲ ಎಂದರು.

ದೊಡ್ಡರಂಗೇಗೌಡರ ಚಿತ್ರಗೀತೆಗಳ ಸುಗ್ಗಿ ಸವಿಯೋಣ ಬನ್ನಿ

ಮುಂದುವರಿದು ಮಾತನಾಡಿದ ಅವರು, ನಾನು ಮತ್ತು ನನ್ನ ಪತ್ನಿ ರಾಜೇಶ್ವರಿ ಗೌಡ ಸಂಶೋಧನೆಗೈದು ಕ್ರಿ.ಪೂ. 2ನೇ ಶತಮಾನದಲ್ಲಿ ಕನ್ನಡ ಇತ್ತು. ಕರಗಡ ಎಂಬುದು ಸಹ ಅಸ್ಥಿತ್ವದಲ್ಲಿತ್ತು ಎಂದು ಪ್ರಸ್ತುತಪಡಿಸಿದ್ದೇವೆ. ಇದು ಚರಿತ್ರೆಯ ಪುಸ್ತಕಗಳಲ್ಲಿ ದಾಖಲಾಗಬೇಕು. ಕೇಂದ್ರ ಸರಕಾರದಿಂದ ಶಾಸ್ತ್ರೀಯ ಭಾಷೆಯ ಸ್ಥಾನ ಮಾನ ಸಿಕ್ಕರೂ, ಕನ್ನಡದ ಅಭ್ಯುದಯಕ್ಕೆ ದುಡ್ಡು ಹರಿಯದೇ ಇರುವುದು ವಿಷಾದನೀಯ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada writer and poet Prof.Doddarange Gowda gives an interview about 83rd Kannada Sahitya Sammelana. He is attending Sahitya Sammelana in Mysuru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ