ಮೈಸೂರಿನಲ್ಲಿ ಸಾಹಿತ್ಯ ಜಾತ್ರೆ, ಮೊದಲ ದಿನದ ಮುಖ್ಯಾಂಶಗಳು

Posted By:
Subscribe to Oneindia Kannada

ಮೈಸೂರು, ನವೆಂಬರ್ 24 : ಮೂರು ದಿನಗಳ ಕನ್ನಡ ಸಾಹಿತ್ಯ ಜಾತ್ರೆಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಶುಕ್ರವಾರ ಚಾಲನೆ ಸಿಕ್ಕಿದೆ. ಸಮ್ಮೇಳನದ ಮೊದಲ ದಿನದ ಮುಖ್ಯಾಂಶಗಳು ಇಲ್ಲಿವೆ.

ಚಿತ್ರಗಳು : ಮೈಸೂರಲ್ಲಿ 83ನೇ ಸಾಹಿತ್ಯ ಸಮ್ಮೇಳನ ಸಂಭ್ರಮ

* 'ಕನ್ನಡ ಕುಲದೋಳ್ ಅಡಗಿದೆ ಮಾನವೀಯ ಧರ್ಮ' ಎಂಬುದಕ್ಕೆ ಸಾಕ್ಷಿಯಾದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಆಗಮಿಸಿದ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂಪಾ ಬಳಲಿಕೆಯಿಂದ ತಲೆಸುತ್ತು ಬಂದು ಸಂಘಟಕರಿಂದ ಮತ್ತು ತಮ್ಮ ಶ್ರೀಮತಿ ನೀಲಾ ಚಂಪಾ ಅವರಿಂದ ಉಪಚರಿಸಿಕೊಂಡರು.

ಕನ್ನಡದ ಸಂಕಟಗಳಿಗೆಲ್ಲ ಕುಲಕಂಟಕರೇ ಕಾರಣ : ಚಂಪಾ

* ಮುಖದಲ್ಲಿ ಬೆವರು ಮೂಡಿ ತಲೆ ಸುತ್ತು ಬಂದ ಕಾರಣ ಅವರನ್ನು ಸಂಘಟಕರು ಮುಖ್ಯ ವೇದಿಕೆ ಬಲಭಾಗಕ್ಕೆ ಕರೆತಂದು ಆಹ್ವಾನ ಪತ್ರಿಕೆಗಳ ಮೂಲಕ ಗಾಳಿ ಬೀಸಿದರು. ಶ್ರೀಮತಿ ನೀಲಾ ಚಂಪಾ ಅವರು ಸೆರಗಿನಿಂದ ಗಾಳಿ ಬೀಸಿದರು. ಸ್ವಲ್ಪ ನೀರು ಕುಡಿದು, ಚೇತರಿಸಿಕೋಂಡರು.

83 Kannada sahitya sammelana day one highlights

* ವೇದಿಕೆಯಲ್ಲಿ ಲವಲವಿಕೆಯಿಂದ ಇದ್ದರು. ಜೊತೆಗೆ ತಮ್ಮ ಮಾತಿನ ಸರದಿ ಬಂದಾಗ ಎಂದಿನ ಧಾರವಾಡದ ಜವಾರಿ ಧ್ವನಿಯಲ್ಲೇ ಮಾತನಾಡಿದರು. ಚಂಪಾ ಅವರು ವೇದಿಕೆಗೆ ಬಂದಾಗ ಮಧ್ಯಾಹ್ನವಾಗಿತ್ತು. ಇದರಿಂದಾಗಿ ಬಳಲಿದ್ದ ಪ್ರೊ. ಚಂಪಾ ವೇದಿಕೆಗೆ ಬಂದು ಆಸೀನರಾದ ಕೆಲವೇ ಕ್ಷಣಗಳಲ್ಲಿ ಸುಸ್ತಾದರು.

* ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ದೂರದ ಜಿಲ್ಲೆಗಳಿಂದ ಬಂದಿದ್ದ ನೋಂದಾಯಿತ ಪ್ರತಿನಿಧಿಗಳು, ತಮಗೆ ಸಿಗಬೇಕಾದ ಕಿಟ್‍ಬ್ಯಾಗ್, ಓಓಡಿ ರಸೀತಿ ಹಾಗೂ ಊಟದ ಕೂಪನ್ ಸಿಕ್ಕಿಲ್ಲ ಎಂಬ ಕಾರಣದಿಂದ ಸಮ್ಮೇಳನಾಧ್ಯಕ್ಷರ ಭಾಷಣದ ವೇಳೆ ಪ್ರತಿಭಟನೆ ನಡೆಸಿದರು.

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಿದ್ದರಾಮಯ್ಯ ಭಾಷಣದ ಮುಖ್ಯಾಂಶ

* ಸಮ್ಮೇಳನದ ಆರಂಭಕ್ಕೂ ಮುನ್ನ ಜಿಲ್ಲಾವಾರು ತೆರೆಯಲಾಗಿದ್ದ ಶಾಖೆಗಳಲ್ಲಿ ಆಯಾ ಜಿಲ್ಲೆಗಳ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ 250 ರೂಪಾಯಿ ಪಾವತಿಸಿ ರಸೀತಿ ಪಡೆದು ಬಂದಿದ್ದವರಿಗೆ ಒಂದು ಕಿಟ್‍ಬ್ಯಾಗ್ ನೀಡಲಾಗುತ್ತಿತ್ತು. ಆ ಬ್ಯಾಗಿನೊಳಗೆ ಊಟದ ಕೂಪನ್, ನೋಟ್‍ಪ್ಯಾಡ್ ಹಾಗೂ ಪೆನ್ ಇದ್ದವು. ಇದರೊಂದಿಗೆ ಓಓಡಿ ಮೇಲೆ ಬಂದಿದ್ದ ಸರ್ಕಾರಿ ನೌಕರರಿಗೆ ಓಓಡಿ ರಸೀತಿ ನೀಡಬೇಕಿತ್ತು. ಆರಂಭದಲ್ಲಿ ಈ ರಸೀತಿಗಳನ್ನು ನೀಡಲಾಯಿತು. ಆದರೆ ಮಧ್ಯಾಹ್ನದ ನಂತರ ಕೌಂಟರ್‌ಗಳಲ್ಲಿ ಯಾರೂ ಇರಲಿಲ್ಲ.

83 Kannada sahitya sammelana day one highlights

* ಇದರಿಂದ ಕೆರಳಿದ ಕೆಲವರು ಸಮ್ಮೇಳನಾಧ್ಯಕ್ಷರಾದ ಚಂದ್ರಶೇಖರ ಪಾಟೀಲರು ಭಾಷಣ ಮಾಡುವಾಗಲೇ ವೇದಿಕೆ ಹತ್ತಿರ ಬಂದು ಘೋಷಣೆ ಕೂಗಿದರು. ಪರಿಸ್ಥಿತಿಯನ್ನು ಹೀಗೆ ಬಿಟ್ಟರೆ ಕಷ್ಟವಾಗುತ್ತದೆ ಎನ್ನುವುದನ್ನು ಅರಿತ ಪೊಲೀಸರು ಲಾಠಿ ಬೀಸುವ ಪ್ರಯತ್ನ ಮಾಡಿ ಗುಂಪನ್ನು ಚದುರಿಸಿದರು.

* ಸರ್ವಾಧ್ಯಕ್ಷರ ಮೆರವಣಿಗೆ ಇರ್ವಿನ್ ರಸ್ತೆಗೆ ಬಂದಾಗ ಎಲ್ಲಿಲ್ಲದ ಅತ್ಯುತ್ಸಾಹ ಕಾಣಿಸಿಕೊಂಡಿತು. ವಿವಿಧ ಜಿಲ್ಲೆಗಳು ಮತ್ತು ಹೊರನಾಡಿನ ಕನ್ನಡ ಸಂಸ್ಥೆಗಳ ಪ್ರತಿನಿಧಿಗಳನ್ನು ಹೊತ್ತು ತರುತ್ತಿದ್ದ ಶಾಹಿ ಟಾಂಗಾಗಳು ವೇಗವಾಗಿ ಹೋಗುವ ಭರದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡವು.

* ಟಾಂಗ ಎಳೆಯುತ್ತಿದ್ದ ಅಮಾಯಕ ಕುದುರೆಯೊಂದು ಈ ಸಮಯ ದಿಢೀರನೆ ಕುಸಿದು ಬಿದ್ದು ಆತಂಕ ಸೃಷ್ಟಿಸಿತು. ಈ ಮೂಕ ಪ್ರಾಣಿ ಬಿದ್ದ ರಭಸಕ್ಕೆ ಏಳಲಾಗದೇ ಗಾಬರಿಯಿಂದ ಒದ್ದಾಡಿತು. ಒಂದಷ್ಟು ಜನ ಸುತ್ತುವರೆದು ಕುದುರೆಯನ್ನು ಎತ್ತಿ ನಿಲ್ಲಿಸಿ, ಕತ್ತು ಬೆನ್ನು ಸವರಿ ಸಮಾಧಾನಿಸಿದ ನಂತರ ಮೆರವಣಿಗೆ ಮುಂದುವರೆಯಿತು.

* ಕನ್ನಡ ನಾಡು, ನುಡಿ, ಸಂಸ್ಕೃತಿ ಮೇಳೈಸಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿತ ವಾಣಿಜ್ಯ ಮೇಳ ದಿಂದ ಸಾಹಿತ್ಯಾಭಿಮಾನಿಗಳು ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದರು.

* ಪುಸ್ತಕ ಮಳಿಗೆಗಳಲ್ಲಿ ಗಿಜಿಗುಡುತ್ತಿದ್ದ ಕನ್ನಡಾಭಿಮಾನಿಗಳು ಅಲ್ಲೇ ಪಕ್ಕದಲ್ಲೇ ವ್ಯವಸ್ಥಿತವಾಗಿ ಆಯೋಜಿತವಾಗಿದ್ದ ವಾಣಿಜ್ಯ ಮೇಳದ ಮಳಿಗೆಗಳತ್ತ ಚಿತ್ತ ಹರಿಸಲಿಲ್ಲ. ಹೀಗಾಗಿ ವಾಣಿಜ್ಯ ಮಳಿಗೆಗಳು ಜನರಿಲ್ಲದೆ ಬಣಗುಡುತ್ತಿದ್ದ ದೃಶ್ಯ ಕಂಡು ಬಂದಿತು.

* ವಾಣಿಜ್ಯ ಮೇಳದಲ್ಲಿ 242 ಮಳಿಗೆಗಳು ತೆರೆದಿದ್ದು, ಸಾಕಷ್ಟು ಮಳಿಗೆಗಳು ಮಹಿಳೆಯರಿಗೆ ಸರ, ಸೀರೆ, ಬಟ್ಟೆಗಳಿಗೆ ಸೀಮಿತವಾಗಿದ್ದರೆ ಮತ್ತೆ ಹಲವಷ್ಟು ಮಳಿಗೆಗಳು ತಿಂಡಿ ತಿನಿಸುಗಳ ಮಾರಾಟಕ್ಕಷ್ಟೆ ಸೀಮಿತವಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Chandrashekara Patil flaged off the 83rd Kannada Sahitya Sammela procession in Mysuru on Friday, November 24, 2017. Day one highlights of the Sahitya Sammela.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ