ಮೈಸೂರಲ್ಲಿ ಎಚ್1ಎನ್1 ರುದ್ರ ನರ್ತನಕ್ಕೆ 8 ಬಲಿ

Subscribe to Oneindia Kannada

ಮೈಸೂರು, ಮಾರ್ಚ್ 16: ಕೇವಲ ಎರಡೂವರೆ ತಿಂಗಳಲ್ಲಿ ಮೈಸೂರಿನಲ್ಲಿ 129 ಎಚ್1ಎನ್1 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆಗೆ ಭೀಕರ ಖಾಯಿಲೆಯ ರುದ್ರ ನರ್ತನಕ್ಕೆ 8 ಜನ ಅಸುನೀಗಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಎಚ್1ಎನ್1 ಪ್ರಕರಣಗಳು ಭಾರೀ ಹೆಚ್ಚಾಗಿವೆ. ಕಳೆದ ವರ್ಷದಲ್ಲಿ ಒಟ್ಟು ಕೇವಲ 5 ಪ್ರಕರಣಗಳು ವರದಿಯಾಗಿದ್ದವು. ಮತ್ತು ಯಾರೂ ಸಾವಿಗೀಡಾಗಿರಲಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. [ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲ್ಲ : ಹೆಚ್.ಡಿ.ದೇವೇಗೌಡ ಸ್ಪಷ್ಟನೆ]

8 Death, 121 positive case; Mysuru sees sharp rise in H1N1 cases

ಈ ವರ್ಷದ ಜನವರಿಯಿಂದ ಇಲ್ಲೀವರೆಗೆ ಜಿಲ್ಲಾ ಆರೋಗ್ಯ ಇಲಾಖೆ ಬೆಂಗಳೂರಿನ ನಿಮ್ಹಾನ್ಸ್ ಗೆ 289 ಸ್ಯಾಂಪಲ್ ಗಳನ್ನು ಕಳುಹಿಸಿತ್ತು. ಇದರಲ್ಲಿ 129 ಜನರಿಗೆ ಎಚ್1ಎನ್1 ಸೋಂಕು ಇರುವುದು ದೃಢ ಪಟ್ಟಿದೆ. ಇದರಲ್ಲಿ 90 ಪ್ರಕರಣಗಳು ಮೈಸೂರು ನಗರದಲ್ಲೇ ಪತ್ತೆಯಾಗಿದ್ದು ಆರೋಗ್ಯ ಇಲಾಖೆಯನ್ನು ಕಂಗೆಡಿಸಿದೆ.

ಇನ್ನೂ ಹೆಚ್ಚಿನ ರೋಗಬಾಧಿತರು 45 ವರ್ಷದೊಳಗಿನವರಾಗಿದ್ದು, ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಇದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಈಗಾಗಲೇ ಎನ್1ಎನ್1 ಹೆಮ್ಮಾರಿ ತಡೆಗಟ್ಟಲು ಕ್ರಮ ಕೈಗೊಂಡಿರುವುದಾಗಿ ಜಿಲ್ಲಾ ಆರೋಗ್ಯ ಇಲಾಖೆಯ ಡಾ ಕುಸುಮಾ ಹೇಳಿದ್ದಾರೆ. ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ಮನೆ ಮನೆಗೆ ಕರಪತ್ರಗಳನ್ನು ಹಂಚಿ ಜನರಿಗೆ ಮಾಹಿತಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆ 2015ರಲ್ಲಿ 118 ಎಚ್1ಎನ್1 ಪ್ರಕರಣಗಳು ವರದಿಯಾಗಿತ್ತು. ಮತ್ತು 5 ಜನ ಸಾವಿಗೀಡಾಗಿದ್ದರು. ಆದರೆ ಈ ವರ್ಷ ಎಲ್ಲಾ ದಾಖಲೆಗಳನ್ನೂ ಮೀರುವಂತೆ ಕೇವಲ ಎರಡೂವರೆ ತಿಂಗಳಲ್ಲಿ 8 ಜನರನ್ನು ಬಲಿ ತೆಗೆದುಕೊಂಡಿದ್ದು 129 ಜನರಿಗೆ ಹರಡಿದೆ.

ಎಚ್1ಎನ್1 ಲಕ್ಷಣಗಳು:

ತೀವ್ರ ಗಂಟಲು ನೋವು, ಜ್ವರ, ತಲೆನೋವು, ಕೆಣ್ಣು ಕೆಂಪಾಗುವುದು, ಮೈಕೈನೋವು ಕಾಣಿಸಿಕೊಳ್ಳುವುದು ಎಚ್1ಎನ್1 ಸಾಮಾನ್ಯ ಲಕ್ಷಣಗಳಾಗಿವೆ.

ಇನ್ನು ಕೆಮ್ಮಿದಾಗ, ಸೀನಿದಾಗ ರೋಗದ ವೈರಾಣುಗಳು ಗಾಳಿಯಲ್ಲಿ ಹರಡುತ್ತದೆ. ಇನ್ನು ಕೆಮ್ಮುವಾಗ, ಸೀನುವಾಗ ಕೈವಸ್ತ್ರ ಹಿಡಿದರೆ ಅದನ್ನು ಇನ್ನೊಬ್ಬರು ಬಳಸಿದಾಗ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಸೋಂಕು ಪೀಡಿತರು ಸಾರ್ವಜನಿಕ ಸಂಪರ್ಕದಿಂದ ದೂರವಿರುವುದು ಅತ್ಯಗತ್ಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In just a span of two and half months, 129 H1N1 positive cases reported in Mysuru district. Which includes eight deaths.
Please Wait while comments are loading...