11 ವಾಹನಗಳ ಸವಾರಿ ಮಾಡಿ ವರ್ಲ್ಡ್ ರೆಕಾರ್ಡ್ ಮಾಡಿದ 7ರ ಪೋರಿ

Posted By:
Subscribe to Oneindia Kannada

ಮೈಸೂರು, ನವೆಂಬರ್6 : ಏಳು ವರ್ಷದ ಪೋರಿ ಒಂದೇ ದಿನದಲ್ಲಿ ಐಷಾರಾಮಿ ಕಾರುಗಳು ಲಾರಿ ಸೇರಿದಂತೆ 11 ವಾಹನಗಳನ್ನು ಓಡಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಮೈಸೂರಿನ 7 ವರ್ಷದ ರಿಫಾ ತಸ್ಕಿನಾ ಈ ಸಾಧನೆ ಮಾಡಿದ್ದು, ಇದೀಗ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪುಸ್ತಕಕ್ಕೆ ಸೇರ್ಪಡೆಯಾಗಿದ್ದಾಳೆ. ಮೈಸೂರಿನ ಬನ್ನಿಮಂಟಪದ ನಿವಾಸಿಯಾದ ತಾಜ್ ಉದ್ದೀನ್ ಹಾಗೂ ಫಾತಿಮಾ ಅವರ ಪುತ್ರಿ ತಸ್ಕೀನ್ ನಗರದ ಸೇಂಟ್ ಜೋಸೆಫ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿದ್ದಾಳೆ.

ಈದ್ಗಾ ಮೈದಾನದಲ್ಲಿ 10 ಚಕ್ರದ ಲಾರಿ ಹಾಗೂ ಸೇಂಟ್ ಜೋಸೆಫ್ ಶಾಲೆ ಆವರಣದಲ್ಲಿ ಗೂಡ್ಸ್ ವಾಹನ, ಹೋಂಡಾ ಸಿಟಿ, ಸ್ಕಾರ್ಪಿಯೋ, ಟಾಟಾ ಸಫಾರಿ, ಮಾರುತಿ 800 ವಾಹನಗಳನ್ನು ಚಾಲನೆ ಮಾಡಿದ್ದಲ್ಲದೆ, ವಿಭಿನ್ನ ಸ್ಟಂಟ್‍ಗಳ ಮೂಲಕ ನೋಡುಗರನ್ನು ನಿಬ್ಬೆರಗಾಗಿಸಿದಳು. ಈ ವೇಳೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ತೀರ್ಪುಗಾರ ಸಂತೋಷ್ ಆಗರವಾಲ್ ದಾಖಲೆ ಘೋಷಣೆ ಮಾಡಿದರು.

ಗೋಲ್ಡನ್ ಬುಕ್ ರೆಕಾರ್ಡ್

ಗೋಲ್ಡನ್ ಬುಕ್ ರೆಕಾರ್ಡ್

'ಅತಿ ಕಿರಿಯ ವಯಸ್ಸಿನಲ್ಲಿ ದೊಡ್ಡ ವಾಹನ ಚಲಾಯಿಸುವ ಮೂಲಕ ರಿಫಾ ತಸ್ಕಿನಾ ದಾಖಲೆ ಮಾಡಿದ್ದಾಳೆ. ಸದ್ಯಕ್ಕೆ ತಾತ್ಕಾಲಿಕ ಪ್ರಮಾಣ ಪತ್ರ ನೀಡಲಾಗಿದೆ. 2 ವಾರಗಳ ಒಳಗೆ ಪ್ರಮಾಣ ಪತ್ರ, ಟೀ ಶಾರ್ಟ್ ಹಾಗೂ ತಸ್ಕೀನ್ಸಾ ಧನೆಯನ್ನೊಳಗೊಂಡ ಗೋಲ್ಡನ್ ಬುಕ್ ರೆಕಾರ್ಡ್ ಪುಸ್ತಕವನ್ನು ನೀಡಲಾಗುವುದು ಎಂದು ತೀರ್ಪುಗಾರ ಸಂತೋಷ್ ಆಗರವಾಲ್ ಸ್ಪಷ್ಟಪಡಿಸಿದರು.

ಸಾಧನೆ ಹಿನ್ನೆಲೆ

ಸಾಧನೆ ಹಿನ್ನೆಲೆ

4 ದಶಕಗಳ ಹಿಂದೆ ರಾಜ್ಯದಲ್ಲಿ ಕಾರ್ ಮತ್ತು ಬೈಕ್ ರೇಸ್‍ನಲ್ಲಿ ಬಹಳ ಹೆಸರು ವಾಸಿಯಾಗಿ, ಸಾಧನೆ ಮಾಡಲು ಮುಂದಾಗಿದ್ದ ಮೆಕ್ಯಾನಿಕ್ ತಂದೆ ತಾಜ್ ಉದ್ದೀನ್ ಧನ ಸಹಾಯವಿಲ್ಲದೆ ಸಾಧನೆಯಿಂದ ಹಿಂದೆ ಸರಿದಿದ್ದರು. ಬಳಿಕ ತಾವು ಮಾಡದ ಸಾಧನೆಯನ್ನು ತಮ್ಮ ಮಗನ ಕೈಯಲ್ಲೇ ಮಾಡಿಸಬೇಕೆಂಬ ಹೆಬ್ಬಯಕೆಯಲ್ಲಿ ವಿವಾಹವಾದರು. ಆದರೆ, ಹೆಣ್ಣು ಮಗು ಹುಟ್ಟಿದಾಗ ಚಿಂತೆಗೀಡಾಗದೇ ಆಕೆಯಿಂದಲೇ ಗುರಿ ಮುಟ್ಟಬೇಕೆಂಬ ಆಸೆಯಿಂದ 7 ತಿಂಗಳ ಮಗುವಿನಿಂದಲೇ ತರಬೇತಿ ನೀಡಲು ಮುಂದಾದರು.

ಸೈ ಎನಿಸಿಕೊಂಡ ರಿಫಾ ತಸ್ಕಿನಾ

ಸೈ ಎನಿಸಿಕೊಂಡ ರಿಫಾ ತಸ್ಕಿನಾ

4 ವರ್ಷಗಳ ನಂತರ ಬೈಕ್, ಕಾರ್‍ ಗಳನ್ನು ಸುಲಲಿತವಾಗಿ ಓಡಿಸುವುದಲ್ಲದೆ, ಲಾರಿಯನ್ನು ಓಡಿಸುವ ಸಾಹಸದಲ್ಲೂ ಆಕೆ ಸೈ ಎನಿಸಿಕೊಂಡಳು.

ಮತ್ತೊಮ್ಮೆ ಮೈಸೂರಿಗೆ ಕೀರ್ತಿ

ಮತ್ತೊಮ್ಮೆ ಮೈಸೂರಿಗೆ ಕೀರ್ತಿ

ಯೋಗದಲ್ಲಿ ಸಾಧನೆ ತೋರಿ ಗಿನ್ನಿಸ್ ರೆಕಾರ್ಡ್ ಮಾಡಿದ ಮೈಸೂರಿನ ಖುಷಿಯ ಸಾಧನೆ ನೆನಪಿರುವ ಬೆನ್ನಲ್ಲೇ ಮೈಸೂರಿನ ಮತ್ತೊಬ್ಬ ಪೋರಿ ರಿಫಾ ತಸ್ಕಿನಾ ತನ್ನ ಸಾಧನೆಯಲ್ಲಿ ವಿಶ್ವ ದಾಖಲೆ ನಿರ್ಮಿಸುವ ಮೂಲಕ ಮತ್ತೊಮ್ಮೆ ಮೈಸೂರಿಗೆ ಕೀರ್ತಿ ತಂದಿದ್ದಾಳೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A seven year old girl Rifa from Mysuru has written a world record for running 11 types of vehicles, including lorry, car.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ