ಗಣರಾಜ್ಯೋತ್ಸವಕ್ಕಾಗಿ ಮೈಸೂರಿನಲ್ಲಿ ಸಿದ್ದಗೊಂಡಿದೆ ದೇಶಗೀತೆ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 25: 68ನೇ ಗಣರಾಜ್ಯೋತ್ಸವಕ್ಕೆ ದೇಶವ್ಯಾಪಿಯಾಗಿ ಸಿದ್ಧತೆಗಳು ನಡೆಯುತ್ತಿವೆ. ನಮ್ಮ ಗಣರಾಜ್ಯೋತ್ಸವಕ್ಕೆ ವಿಶೇಷವಾಗಿ ಎನಾದ್ರೂ ಮಾಡಲಿಲ್ಲ ಎಂದ ಮೇಲೆ ಹೇಗೆ? ಅದಕ್ಕಾಗಿಯೆ ಮೈಸೂರಿನ ಟೌನ್ ಬ್ರದರ್ಸ್ ಡ್ಯಾನ್ಸ್ ಕ್ಲಾಸ್ ಸಂಸ್ಥೆಯಿಂದ ದೇಶ ಭಕ್ತಿ ಕುರಿತಾದ ವಿಡಿಯೋ ಸಾಂಗ್ ವೊಂದನ್ನು ಮಾಡಿದ್ದಾರೆ. ಇದೀಗ ವಿಡಿಯೋ ಸಖರ್ ವೈರಲ್ ಆಗಿದ್ದು, ಸಾಮಾನ್ಯರ ಮೊಬೈಲಿನಲ್ಲಿ ಹರಿದಾಡುತ್ತಿದೆ.[188 ಕೈದಿಗಳನ್ನು ಗಣರಾಜ್ಯೋತ್ಸವ ದಿನದಂದು ಬಿಡುಗಡೆಗೆ ನಿರ್ಧಾರ]

68th Republic: mysuru Town Brothers Dance Class Association create the Patriotism song

ಗೀತೆಯ ಆರಂಭದಲ್ಲೇ ರೈತರ ನಾಡಿದು, ಕಲೆಗಳ ತವರಿದು ಕಲ್ಪನ ಚಾವ್ಲಾ ಜನಿಸಿದ ನಾಡಿದು ಎನ್ನುವ ಮೂಲಕ ದೇಶಕ್ಕಾಗಿ ದುಡಿದ, ಮಡಿದ ಗಣ್ಯರನ್ನು ಗೀತೆಯಲ್ಲಿ ಅಳವಡಿಸಿಕೊಂಡು ವಂದೇ ಮಾತರಂ ಎನ್ನುವ ಗೀತೆಯ ಸಾಲುಗಳನ್ನು ಇದರಲ್ಲಿ ಅಳವಡಿಸಿಕೊಂಡಿದ್ದಾರೆ. ವಿಡಿಯೋದಲ್ಲಿನ ಗೀತೆ ಇಷ್ಟು ಚೆನ್ನಾಗಿ ಮೂಡಿ ಬರಲು ಕಾರಣ ನರಸಿಂಹ ಮೂರ್ತಿ. ಅವರ ಗೀತ ರಚನೆಗೆ ವೈಶಾಖ್ ಶಶಿಧರ್ ಮತ್ತು ಮನುರಾವ್ ಸಂಗೀತ ನೀಡಿದ್ದಾರೆ. ವೈಶಾಖ್ ಅವರ ಕಂಠಸಿರಿಯಲ್ಲೇ ಗೀತೆ ಚೆನ್ನಾಗಿ ಮೂಡಿ ಬಂದಿದೆ. ರಕ್ಷಿತ್ ಅವರ ಛಾಯಾಗ್ರಹಣದಲ್ಲಿ ನೃತ್ಯ ಸಂಯೋಜನೆಯನ್ನು ಮೈಸೂರು ರಾಜು ಮಾಡಿದ್ದಾರೆ.[ಮಂಗಳೂರು: ಇಬ್ಬರು ಪೊಲೀಸರಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ]

68th Republic: mysuru Town Brothers Dance Class Association create the Patriotism song

60 ರೂ. ವೆಚ್ಚದಲ್ಲಿ ಈ ಗೀತೆ ನಿರ್ಮಾಣ
ಬರೋಬ್ಬರಿ 60 ಸಾವಿರ ರೂ. ವೆಚ್ಚದಲ್ಲಿ ಈ ಗೀತೆಯನ್ನು ಸಿದ್ಧಪಡಿಸಲಾಗಿದೆ. ಇದು ನಮ್ಮ ನಾಡಿಗಾಗಿ, ನಮ್ಮ ದೇಶಕ್ಕಾಗಿ ಮಾಡಿರುವುದು ಅಂತಾರೆ ಹಾಗೂ ಮೈಸೂರು ರಾಜು ಅವರು.
ಗಣರಾಜ್ಯೋತ್ಸವಕ್ಕೆ ಮೈಸೂರಿಗರಿಂದ ಹೊಸದೊಂದು ದೇಶಭಕ್ತಿ ಗೀತೆ ರೆಡಿಯಾಗಿದ್ದು, ಮೋಡಿ ಮಾಡಿರುವುದಲ್ಲದೇ ಎಲ್ಲರ ನಾಲಿಗೆಯ ಮೇಲೆಯೂ ನಲಿದಾಡಲಿದೆ.

68th Republic: mysuru Town Brothers Dance Class Association create the Patriotism song

ಹೈ ವೀವ್ ಗಳನ್ನು ಸೆರೆ ಹಿಡಿಯಲು ಹೆಲಿಕ್ಯಾಮ್ ಗಳನ್ನು ಬಳಕೆ ಮಾಡಲಾಗಿದೆ. ಜೊತೆಯಲ್ಲಿ ನಾಗೇಂದ್ರ ಇದರ ನಿರ್ವಹಣೆ ಮಾಡಿದ್ದಾರೆ. ಜೊತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಡ್ಯಾನ್ಸ್ ಕ್ಲಾಸ್'ನ ತರಬೇತಿಯ ಮಕ್ಕಳೂ, ಅವರ ಪೋಷಕರು ಹಾಗೂ ಇಟ್ಟಿಗೆ ಗೂಡಿನ ನಿವಾಸಿಗಳು ಈ ದೇಶ ಭಕ್ತಿ ಗೀತೆಗೆ ಸಾಥ್ ನೀಡಿದ್ದಾರೆ. ಸ್ನೇಹಮಯಿಯವರ ನಿರ್ಮಾಣದಲ್ಲಿ ಗೀತೆ ಅದ್ಭುತವಾಗಿದೆ ಎಂದು ಜನರೇ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
68th Republic day part of Town Brothers Dance Class Association create the Patriotism song of RS 60 thousand cost in mysuru.
Please Wait while comments are loading...