ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರ 64 ಲಕ್ಷ ರುಪಾಯಿ ಹುಂಡಿ ಹಣ ಸಂಗ್ರಹ

Posted By:
Subscribe to Oneindia Kannada

ಮೈಸೂರು, ಜುಲೈ 18: ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಕಳೆದ 3 ವಾರ ವಿಶ್ವವಿಖ್ಯಾತ ಚಾಮುಂಡೇಶ್ವರಿ ಬೆಟ್ಟದಲ್ಲಿ ದಾಖಲೆ ಗಳಿಕೆಯಾಗಿದೆ.

ಈ ಬಾರಿ ಬರೋಬ್ಬರಿ 64 ಲಕ್ಷ ರುಪಾಯಿ ಸಂಗ್ರಹವಾಗಿ ಕಳೆದ ಎರಡು ವರ್ಷಗಳಲ್ಲಿ ಅತ್ಯಧಿಕ ಮೊತ್ತವಾಗಿದೆ. ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತ ಸಾಗರ ಹರಿದು ಬರುತ್ತಿದ್ದು, ಮೂರನೇ ಆಷಾಢ ಶುಕ್ರವಾರ ಹುಂಡಿಯಲ್ಲಿ 24 ಲಕ್ಷ ರುಪಾಯಿ ಸಂಗ್ರಹವಾಗಿದೆ.

ಆಷಾಢ ಶುಕ್ರವಾರ ಚಾಮುಂಡೇಶ್ವರಿ ದರ್ಶಿಸಿದ ಸೃಜನ್, ದರ್ಶನ್

2015, 2016 ರ ನಾಲ್ಕು ಶುಕ್ರವಾರಗಳಿಗೆ ಹೋಲಿಸಿದರೆ ಈ ಬಾರಿ ದಾಖಲೆ ಗಳಿಕೆಯಾಗಿದೆ. 2015ರ ಆಷಾಢ ಶುಕ್ರವಾರಗಳಲ್ಲಿ 29 ಲಕ್ಷದ 67 ಸಾವಿರ ಹಾಗೂ 2016ರಲ್ಲಿ 38 ಲಕ್ಷದ 73 ಸಾವಿರ ಹುಂಡಿಯಲ್ಲಿ ಸಂಗ್ರಹವಾಗಿತ್ತು. ಈ ಸಲ ಎರಡು ಶುಕ್ರವಾರದಂದು ಬರೋಬ್ಬರಿ 64 ಲಕ್ಷದ 70 ಸಾವಿರ ರುಪಾಯಿ ಸಂಗ್ರಹವಾಗಿದೆ.

64 lakh rupee hundi amount collected in Chamundi hills

ಚಾಮುಂಡಿ ವರ್ಧಂತಿ ಅದ್ಧೂರಿ ಆಚರಣೆ

ಆಷಾಢ ಮಾಸದಲ್ಲೇ ಚಾಮುಂಡೇಶ್ವರಿ ವರ್ಧಂತಿ ಆಚರಣೆಯೂ ಅದ್ಧೂರಿಯಾಗಿ ನಡೆಯುತ್ತದೆ.

ಮೈಸೂರು ಅರಸರು ಒಂಬತ್ತು ದಿನ ದರ್ಬಾರ್ ನಡೆಸಿ, ಹತ್ತನೇ ದಿನ ವಿಜಯ ದಶಮಿ ಆಚರಿಸಿಕೊಂಡು ಬಂದಿದ್ದಾರೆ. ತಮ್ಮ ದರ್ಬಾರಿಗೂ ಮುನ್ನ ಕುಲದೇವತೆ ಚಾಮುಂಡೇಶ್ವರಿಗೆ ದರ್ಬಾರ್ ಆಚರಿಸುವ ಸಂಪ್ರದಾಯವನ್ನು ಬಹು ವರ್ಷಗಳ ಹಿಂದಿನಿಂದಲೇ ಆಚರಣೆಗೆ ತಂದಿದ್ದಾರೆ.

ವೈಭವೋಪೇತವಾಗಿ ಜರುಗಿದ ಚಾಮುಂಡಿ ವರ್ಧಂತ್ಯೋತ್ಸವ

ಅಂದರೆ ಶರನ್ನವರಾತ್ರಿಗೂ ಮುಂಚಿತವಾಗಿ ಬರುವ ಗ್ರೀಷ್ಮ ನವರಾತ್ರಿಯಲ್ಲೇ ತಮ್ಮ ಕುಲದೇವತೆಯ ದರ್ಬಾರ್ ನಡೆಸಿ, ತಾವೇ ಖುದ್ದಾಗಿ ಅಮ್ಮನವರನ್ನು ಬೇಡಿಕೊಳ್ಳುತ್ತಿದ್ದು, ಈ ಸಂಪ್ರದಾಯ ಈಗಲೂ ಜಾರಿಯಲ್ಲಿದೆ.

Chamundi Hills,Mysuru:Entry Is Restricted For Tourists After 10pm | Oneindia Kannada

ವಿಪ್ರರು, ರಾಜಮನೆತನದವರು, ಅರಮನೆ ಸಿಬ್ಬಂದಿ, ಸೈನಿಕರು, ಪ್ರಜೆಗಳಿಗೆ ದಾನ-ಧರ್ಮ ಮಾಡುತ್ತಾರೆ. ಅದರಂತೆ ಚಾಮುಂಡಿ ದರ್ಬಾರಿನಲ್ಲೂ ಪ್ರಧಾನ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ಮೊದಲಿಗೆ ಪೂಜಾ ಕೈಂಕರ್ಯಗಳನ್ನು ಸಾಂಗವಾಗಿ ನೆರವೇರಿಸಿದರು. ಈ ಸಂದರ್ಭದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
64 lakh rupee hundi amount collected in Chamundi hills on the occasion of Ashadha Friday special worship of goddess Chamundi.
Please Wait while comments are loading...