ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೀಗೂ ಉಂಟೆ! ಒಂದೇ ಸ್ಕೂಟರ್ ಮೇಲಿದೆ 635 ಕೇಸ್, 63,500 ದಂಡ

By Yashaswini
|
Google Oneindia Kannada News

ಮೈಸೂರು, ಆಗಸ್ಟ್ 2 : ಯಾವುದಾದರೂ ದಾಖಲೆ ಅಂದರೆ ಹೀಗೂ ಆಗಬಹುದು ನೋಡಿ. ಸಂಚಾರ ನಿಯಮ ಮೀರಿದರೂ ಅನ್ನೋ ಕಾರಣಕ್ಕೆ ತಪಾಸಣೆ ವೇಳೆ ಸಿಕ್ಕಿದ ದ್ವಿಚಕ್ರ ವಾಹನವೊಂದರ ಮಾಲೀಕರೊಬ್ಬರು ಬಾಕಿ ಉಳಿಸಿಕೊಂಡಿದ್ದ ದಂಡದ ಮೊತ್ತ 63,500 ರುಪಾಯಿ ಎಂದು ತಿಳಿಯುತ್ತಲೇ ಸಂಚಾರ ಪೊಲೀಸರು ಹೌಹಾರಿದ್ದಾರೆ.

ಏಕೆಂದರೆ, ದ್ವಿಚಕ್ರ ವಾಹನವನ್ನು ಮಾರಾಟ ಮಾಡಿದರೂ ಅಷ್ಟು ಹಣ ಬರುವುದಿಲ್ಲ. ಎನ್.ಆರ್.ಸಂಚಾರ ಠಾಣೆಯ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಕೆ.ಮಧುಪ್ರಸಾದ್ ಅವರಿಗೆ ಸೇರಿದ ಹೋಂಡಾ ಆಕ್ಟಿವಾ ಸ್ಕೂಟರ್ ಸಿಕ್ಕಿದೆ. ಇದರ ಸಂಖ್ಯೆಯನ್ನು ಪರಿಶೀಲಿಸಿದಾಗ ವಾಹನದ ಮೇಲೆ ಒಟ್ಟು 635 ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿದ್ದು, ಒಟ್ಟು ದಂಡ ಮೊತ್ತ 63,500 ರುಪಾಯಿ ಆಗಿತ್ತು.

635 cases, 63,500 penalty against scooter in Mysore

ಅಪರಿಚಿತರಿಗೆ ಲಿಫ್ಟ್‌ ನೀಡಿದರೆ ದಂಡ ತೆರಬೇಕಾಗಿಲ್ಲ: ಪೊಲೀಸ್‌ ಸ್ಪಷ್ಟನೆಅಪರಿಚಿತರಿಗೆ ಲಿಫ್ಟ್‌ ನೀಡಿದರೆ ದಂಡ ತೆರಬೇಕಾಗಿಲ್ಲ: ಪೊಲೀಸ್‌ ಸ್ಪಷ್ಟನೆ

ಸದ್ಯ, ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೈಸೂರಿನಲ್ಲಿ ವಶಕ್ಕೆ ಪಡೆದ ಅತಿ ಹೆಚ್ಚು ಪ್ರಕರಣಗಳಿರುವ ವಾಹನ ಇದಾಗಿದೆ. ಸದ್ಯ ವಾಹನವನ್ನು ವಶಕ್ಕೆ ಪಡೆದಿದ್ದೇವೆ. ಇದನ್ನು ಮಾರಾಟ ಮಾಡಿದರೂ ಅಷ್ಟು ಹಣ ಸಿಗುವುದಿಲ್ಲ. ದಂಡ ವಸೂಲಾತಿಗೆ ಪರ್ಯಾಯ ಮಾರ್ಗಗಳನ್ನು ಹುಡುಕಲಾಗುವುದು. ಇದುವರೆಗೂ ಮೈಸೂರಿನಲ್ಲಿ ಇಷ್ಟು ದೊಡ್ಡ ಮೊತ್ತದ ತಂಡವಿರುವ ವಾಹನ ಪತ್ತೆಯಾಗಿರಲಿಲ್ಲ ಎಂದು ಎನ್ ಆರ್ ಸಂಚಾರ ಪೊಲೀಸರು ತಿಳಿಸಿದ್ದಾರೆ.

English summary
Mysuru city traffic police found that, Honda Activa scooter which has 635 traffic violation case and RS. 63,500 fine. Now, police department thinking that, how to collect fine amount from owner. Because even after selling the scooter will not get that much of amount.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X