ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ ಆನೆಗಳಿಗೆ 35 ಲಕ್ಷದ ವಿಮೆ

|
Google Oneindia Kannada News

ಮೈಸೂರು, ಸೆಪ್ಟೆಂಬರ್, 08 : ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಮೆಯ ಸುರಕ್ಷತೆ ಒದಗಿಸಲಾಗಿದೆ. ದಸರಾ ಆನೆಗಳು, ಕಾವಾಡಿಗಳು ಮತ್ತು ಮಾವುತರು ಸೇರಿದಂತೆ ಒಟ್ಟು 89 ಲಕ್ಷ ರೂ. ಮೊತ್ತದ ವಿಮೆಯನ್ನು ಮಾಡಿಸಲಾಗಿದೆ.

ಅಂಬಾರಿ ಹೊರುವ ಅರ್ಜುನ ಸೇರಿದಂತೆ 12 ಆನೆಗಳು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತವೆ. ನ್ಯೂ ಇಂಡಿಯಾ ಇನ್ಶೊರೆನ್ಸ್ ಕಂಪನಿಯಿಂದ ಆನೆಗಳಿಗೆ 35 ಲಕ್ಷದ ವಿಮೆ ಮಾಡಿಸಲಾಗಿದೆ. 24 ಕಾವಾಡಿ ಮತ್ತು ಮಾವುತರಿಗೆ 24 ಲಕ್ಷ ರೂ., ಆಸ್ತಿ ನಷ್ಟಕ್ಕೆ 30 ಲಕ್ಷ ರೂ. ವಿಮೆ ಮಾಡಿಸಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ.ಕಮಲಾ ಹೇಳಿದ್ದಾರೆ.

elephants

ಸೆಪ್ಟೆಂಬರ್ 4ರಿಂದ ಅಕ್ಟೋಬರ್ 30ರ ತನಕ ಈ ವಿಮೆ ಜಾರಿಯಲ್ಲಿರುತ್ತದೆ. 2014ನೇ ಸಾಲಿನಲ್ಲಿ ಗಜಪಡೆಗಳಿಗೆ 40 ಲಕ್ಷ ರೂ.ಗಳ ವಿಮೆ ಮಾಡಿಸಲಾಗಿತ್ತು. ದಸರಾ ಆನೆಗಳು ತಾಲೀಮು ನಡೆಸಲು ನಗರ ಪ್ರದಕ್ಷಿಣೆ ಮಾಡುವ ಸಂದರ್ಭದಲ್ಲಿ ಆಸ್ತಿ-ಪಾಸ್ತಿಗಳಿಗೆ ಹಾನಿಯಾಗಬಹುದು ಎಂದು 30 ಲಕ್ಷ ವಿಮೆ ಮಾಡಿಲಾಗಿದೆ. [ಸರಳವಾಗಿ ದಸರಾ ಆಚರಣೆ : ಈ ಬಾರಿ ಏನಿರುತ್ತೆ, ಏನಿರಲ್ಲ?]

ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಅಂಬಾರಿ ಹೊತ್ತು ಸಾಗುವ ಅರ್ಜುನ ಸೇರಿ ದಂತವುಳ್ಳ ಗಂಡಾನೆಗಳಿಗೆ 3.5 ಲಕ್ಷ, ಹೆಣ್ಣಾನೆಗಳಿಗೆ 2.5 ಲಕ್ಷದ ವಿಮೆ ಮಾಡಿಸಲಾಗಿದೆ. ಅರಣ್ಯ ಇಲಾಖೆ ವತಿಯಿಂದ 55 ಸಾವಿರ ಪ್ರೀಮಿಯಂ ಹಣ ಕಟ್ಟಲಾಗಿದ್ದು, ದಸರಾ ಸಮಿತಿ ಈ ಹಣವನ್ನು ಇಲಾಖೆಗೆ ಪಾವತಿ ಮಾಡಲಿದೆ.[ದಸರಾ ಆನೆಗಳ ಪಟ್ಟಿ]

6 ಆನೆಗಳು ನಗರಕ್ಕೆ ಆಗಮನ : ದಸರಾದಲ್ಲಿ ಪಾಲ್ಗೊಳ್ಳುವ 6 ಆನೆಗಳ ತಂಡ ಮೈಸೂರಿಗೆ ಕಳೆದ ವಾರ ಆಗಮಿಸಿದೆ. ಅರಣ್ಯ ಭವನದಲ್ಲಿ ಆನೆಗಳು ಮತ್ತು ಮಾವುತರು ವಾಸ್ತವ್ಯ ಹೂಡಿದ್ದು, ಸೆ.9ರಂದು ಅರಮನೆಗೆ ಆಗಮಿಸಲಿದ್ದಾರೆ.

English summary
12 Mysuru Dasara elephants and their mahouts, kavadis have been given insurance during the festival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X