ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮನೆಯ ಮುಂದಿನ ಸ್ಥಳ ಸ್ವಚ್ಛಗೊಳಿಸಬೇಕು ಎಂದಿದ್ದೇ ತಪ್ಪಾಯ್ತಾ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು,ಫೆಬ್ರವರಿ,26: ಮನೆಯ ಮುಂದಿನ ಸ್ಥಳವನ್ನು ಸ್ವಚ್ಛಗೊಳಿಸಬೇಕು, ಇಲ್ಲಿಂದ ಹೋಗುವಿರಾ ಎಂದು ಹೇಳಿದ ಮಾತಿನಿಂದ ಮೂವರ ಮೇಲೆ ಹಲ್ಲೆ ನಡೆದಿರುವ ಘಟನೆ ಹುಣಸೂರು ಬಳಿಯ ವಿ.ಪಿ.ಬೋರೆಯಲ್ಲಿ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.

ವಿ.ಪಿ.ಬೋರೆಯ ಎಚ್.ಎಸ್.ಸ್ವಾಮಿರವರ ಪುತ್ರರಾದ ಗುರುಪ್ರಸಾದ್, ಶಿವರಾಜು ಮತ್ತು ನೀಲಶೆಟ್ಟಿರವರ ಪುತ್ರ ಸುರೇಶ್ ಹಾಗೂ ಪತ್ನಿ ನಂಜಮ್ಮ ಹಲ್ಲೆಗೀಡಾದವರು. ಇವರು ಮೈಸೂರಿನ ಲಾಲ್‍ಬಂದ್ ಬೀದಿಯಲ್ಲಿ ವಾಸವಾಗಿದ್ದಾರೆ.[ಪ್ರಾಣ ಬಿಟ್ಟೆವು, ಹಾಡಿ ಬಿಡೋದಿಲ್ಲ: ಕರಡಿಬೊಕ್ಕೆ ಗಿರಿಜನರ ಕಣ್ಣೀರು]

Mysuru

ಲಾಲ್‍ಬಂದ್ ಬೀದಿಯ ಎಚ್.ಎಸ್.ರಾಮು ಅವರ ಮಗ ಶಿವಕುಮಾರ್ ಅವರು ಮನೆಯ ಗೃಹ ಪ್ರವೇಶ ಹಿನ್ನಲೆಯಲ್ಲಿ ಮನೆಯ ಮುಂದಿನ ಸ್ಥಳ ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಈ ಸಂದರ್ಭ ಮನೆ ಬಳಿ ಇರ್ಫಾನ್, ಇಮ್ರಾನ್, ಮುಭಾರಕ್ ಎಂಬುವರು ಕುಳಿತಿದ್ದರು.[ಅಷ್ಟಕ್ಕೂ.. ಮೈಸೂರ್ ಪಾಕ್ ಹೆಸರು ಬದಲಾಯಿಸಿಕೊಂಡಿದ್ದು ಯಾಕೆ?]

ಆಗ ಶಿವಕುಮಾರ್ ಮನೆಯನ್ನು ಮುಂದಿನ ಸ್ಥಳ ಸ್ವಚ್ಛಗೊಳಿಸಬೇಕು. ನೀವು ಇಲ್ಲಿಂದ ಹೋಗಿ ಎಂದಿದ್ದಾರೆ. ಈ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಇರ್ಫಾನ್, ಇಮ್ರಾನ್, ಮತ್ತು ಮುಭಾರಕ್ ಸೇರಿದಂತೆ ಸುಮಾರು 10ಮಂದಿ ಸೇರಿ ಗುರುಪ್ರಸಾದ್, ಶಿವರಾಜ್, ಸುರೇಶ್ ಅವರ ಮೇಲೆ ಕೈ ಮಾಡಿದ್ದಾರೆ.[ದುಶ್ಚಟಗಳಿಗೆ ಬಲಿಯಾದ ಮಗನನ್ನು ಕೊಲೆಗೈದ ತಂದೆ!]

ಹಲ್ಲೆಗೆ ಒಳಗಾದ ನಾಲ್ವರು ಗಾಯಗೊಂಡಿದ್ದು ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಣಸೂರು ನಗರ ಪೊಲೀಸರು ವಾತಾವರಣ ತಿಳಿಗೊಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

English summary
Three Muslim boys Irfan, Imran, Mubharak attack three neighbors Guruprasad, Suresh, Nanjamma. They were very injured and hospitalized in Mysuru, on Friday, February 26th. The skirmish started over cleaning their surrounding.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X