ಮೈಸೂರಿನಲ್ಲಿ ಮೂರು ದಿನ 'ರಂಗವಲ್ಲಿ ರಂಗಸಂಭ್ರಮ'

Subscribe to Oneindia Kannada

ಮೈಸೂರು, ಮಾರ್ಚ್, 25: ರಂಗವಲ್ಲಿಯು ತನ್ನ 10ನೇ ವರ್ಷಾಚರಣೆ ಅಂಗವಾಗಿ ಮಾರ್ಚ್ 27 ರಿಂದ 29 ರವರೆಗೆ ಮೈಸೂರಿನ ಕಲಾಮಂದಿರದಲ್ಲಿ "ರಂಗವಲ್ಲಿ ರಂಗಸಂಭ್ರಮ" ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದೆ.

ಮೂರು ದಿನ ನಾಟಕ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದ್ದು ಬೆಂಗಳೂರು ಹಾಗೂ ತುಮುರಿಯಿಂದ ತಂಡಗಳೂ ಭಾಗವಹಿಸುತ್ತಿವೆ. ಈ ಮೂರುದಿನಗಳ ರಂಗವಲ್ಲಿ ರಂಗಸಂಭ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೆರವಿನಿಂದ ಆಯೋಜಿಸಲಾಗುತ್ತಿದ್ದು ಇದರ ಮಾರ್ಚ 27, ಭಾನುವಾರ ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಉದ್ಘಾಟನೆ ನೆರವೇರಲಿದೆ.

drama

ನಹೆಸರಾಂತ ರಂಗನಿರ್ದೇಶಕರು ಹಾಗೂ ಚಲನಚಿತ್ರ ನಟ ಪ್ರಕಾಶ್ ಬೆಳವಾಡಿ ಅವರು "ರಂಗಸಂಭ್ರಮ"ದ ಉದ್ಘಾಟನೆಯನ್ನು ನೆರವೇರಿಸಿಕೊಡಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಮಲ್ಲಿಕಾರ್ಜುನಸ್ವಾಮಿ, ಹಿರಿಯರಂಗಕರ್ಮಿಗಳು ಹಾಗೂ ಚಿಂತಕರಾದ ಕೆ.ವೆಂಕಟರಾಜು ಹಾಗೂ ರಂಗವಲ್ಲಿಯ ಸಂಸ್ಥಾಪಕ ಸದಸ್ಯ ರವಿಪ್ರಸಾದ್ ಹೆಚ್.ಆರ್ ಅವರು ಆಗಮಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಸುಗುಣ ಕುಲದೀಪ್ ಗೀತೆಗಳನ್ನು ಹಾಡಲಿದ್ದಾರೆ. ರಂಗಭೂಮಿ ಹಾಗೂ ಕಿರುತೆರೆ ನಟಿ ಸುಷ್ಮ ನಾಣಯ್ಯ ಅಥಿತಿಗಳನ್ನು ಸ್ವಾಗತಿಸಿ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ ಹಾಗೂ ಧನ್ಯ ಶ್ರೀಧರ್ ವಂದನಾರ್ಪಣೆ ನಡೆಸಿಕೊಡಲಿದ್ದಾರೆ.

* ಮಾರ್ಚ್ 27, ಭಾನುವಾರ ಸಂಜೆ 7 ಗಂಟೆಗೆ ಬೆಂಗಳೂರಿನ ರಂಗಮಂಟಪ ತಂಡದಿಂದ ವೈದೇಹಿ ಅವರ ಕತೆಗಳ ಆಧರಿತ ನಾಟಕ "ಅಕ್ಕು" ಪ್ರದರ್ಶನವಿರುತ್ತದೆ. ಇದರ ವಿನ್ಯಾಸ ಮತ್ತು ನಿರ್ದೇಶನ ಚಂಪಾಶೆಟ್ಟಿ ಅವರದು.

* ಮಾರ್ಚ್ 28, ರ ಸೋಮವಾರ ಸಂಜೆ 7 ಗಂಟೆಗೆ ತುಮುರಿಯ ಕಿನ್ನರ ಮೇಳ ತಂಡದಿಂದ ಡಾ.ಮೊಗಳ್ಳಿ ಗಣೇಶ್ ಅವರ ಕತೆ ಆಧಾರಿತ ನಟಕ "ಬುಗುರಿ" ಪ್ರದರ್ಶನವಿರುತ್ತದೆ. ಇದರ ವಿನ್ಯಾಸ ಮತ್ತು ನಿರ್ದೇಶನ ಡಾ.ಎಂ.ಗಣೇಶ್ ಅವರದು.

* ಮಾರ್ಚ್ 29,ರ ಮಂಗಳವಾರ ಸಂಜೆ 7 ಗಂಟೆಗೆ ಬೆಂಗಳೂರಿನ ಅನನ್ಯ ತಂಡದಿಂದ ಎನ್.ಎಸ್.ಸೇತೂರಾಂ ರಚಿಸಿ, ನಿರ್ದೇಶಿಸಿ ನಟಿಸಿರುವ ನಾಟಕ "ಅತೀತ" ಪ್ರದರ್ಶನವಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysuru: Rangavalli organization will conducting 3 days drama festival in Mysuru on 27 March to 29th March on the occasion of First year anniversary. Drama artist and actor Prakash Belavadi will inagurate the programme.
Please Wait while comments are loading...