ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾಗೆ ಬರುವ 12 ಆನೆಗಳ ಪಟ್ಟಿ

|
Google Oneindia Kannada News

ಮೈಸೂರು, ಆಗಸ್ಟ್ 7 : ವಿಶ್ವವಿಖ್ಯಾತ ಮೈಸೂರು ದಸರಾಗೆ ಸಿದ್ಧತೆಗಳು ಆರಂಭಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆ.10ರಂದು ಬೆಂಗಳೂರಿನಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಲಿದೆ. ಆತ್ತ ಅರಣ್ಯ ಇಲಾಖೆ ದಸರಾದಲ್ಲಿ ಪಾಲ್ಗೊಳ್ಳುವ 12 ಆನೆಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.

ಅರಣ್ಯ ಇಲಾಖೆ ದಸರಾದಲ್ಲಿ ಪಾಲ್ಗೊಳ್ಳುವ 15 ಆನೆಗಳ ಪಟ್ಟಿಯನ್ನು ಮಾಡಿ ಬೆಂಗಳೂರಿನಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅಂತಿಮ ಒಪ್ಪಿಗೆಗಾಗಿ ಕಳುಹಿಸಿತ್ತು. ಅವರು ಪಟ್ಟಿಗೆ ಒಪ್ಪಿಗೆ ನೀಡಿದ್ದು 12 ಆನೆಗಳು ಎರಡು ತಂಡದಲ್ಲಿ ಅರಮನೆ ನಗರಿಗೆ ಬಂದು ಸೇರಲಿವೆ. [ಮೈಸೂರು ಜಂಬೂ ಸವಾರಿ ಆನೆಗಳ ಬಯೋಡೇಟಾ]

elephant

ಈ ಬಾರಿಯ ಮೈಸೂರು ದಸರಾದಲ್ಲಿಯೂ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ಅರ್ಜುನನ ಹೆಗಲೇರಿದೆ. ಅಕ್ಟೋಬರ್‌ನಲ್ಲಿ ದಸರಾ ನಡೆಯಲಿದ್ದು, ಆಗಸ್ಟ್ ಕೊನೆಯವಾರದಲ್ಲಿ ಗಜಪಡೆಯ ಮೊದಲ ತಂಡ ಮೈಸೂರಿಗೆ ಆಗಮಿಸಲಿವೆ. [ಜಂಬೂ ಸವಾರಿಯ ಆನೆ 'ಕಾಂತಿ' ಇನ್ನು ನೆನಪು ಮಾತ್ರ]

12 ಆನೆಗಳ ತಂಡ : ಅರ್ಜುನ, ಬಲರಾಮ, ಅಭಿಮನ್ಯು, ಹರ್ಷ, ಪ್ರಶಾಂತ, ವಿಕ್ರಮ, ಕಾವೇರಿ, ಚೈತ್ರಾ, ಕೆಂಚಾಂಬ, ದುರ್ಗಪರಮೇಶ್ವರಿ, ಗೋಪಾಲಸ್ವಾಮಿ ಮತ್ತು ಗೋಪಿ ಆನೆಗಳು ದಸರಾದಲ್ಲಿ ಪಾಲ್ಗೊಳ್ಳಲಿದ್ದು, 4 ಆನೆಗಳನ್ನು ಈ ಬಾರಿ ಹೊಸದಾಗಿ ದಸರಾ ಗಜಪಡೆಗೆ ಸೇರ್ಪಡೆ ಮಾಡಲಾಗಿದೆ.

ಭೀಮಾ, ಶ್ರೀನಿವಾಸ ಮತ್ತು ಜಯಪ್ರಕಾಶ ಆನೆಗಳು ಅರಣ್ಯ ಇಲಾಖೆ ಒಪ್ಪಿಗೆ ಪಡೆಯುವಲ್ಲಿ ವಿಫಲವಾಗಿವೆ. ಆನೆ ಶಿಬಿರದಲ್ಲಿ ಮದವೇರಿ ಕಾವಾಡಿ ಗಣಪತಿ ಮತ್ತು ಶ್ರೀರಾಮ ಆನೆಯನ್ನು ಕೊಂದು ಹಾಕಿದ್ದ ಗಜೇಂದ್ರನನ್ನು ಈ ಬಾರಿಯ ದಸರಾಕ್ಕೆ ಕರೆತರಲಾಗುತ್ತಿಲ್ಲ.

ಬಲರಾಮ ಪಟ್ಟದ ಆನೆ : 12 ಬಾರಿ ಚಿನ್ನದ ಅಂಬಾರಿ ಹೊತ್ತ ಬಲರಾಮನಿಗೆ ಈ ಬಾರಿ ಪಟ್ಟದ ಆನೆಯ ಜವಾಬ್ದಾರಿಯನ್ನು ನೀಡಲಾಗುತ್ತದೆ. 2012ರ ತನಕ 750 ಕೆಜಿ ಚಿನ್ನದ ಅಂಬಾರಿಯನ್ನು ಬಲರಾಮ ಹೊತ್ತಿದ್ದು, ನಂತರ ಅರ್ಜುನ ಅಂಬಾರಿ ಹೊರುವ ಕೆಲಸ ನಿರ್ವಹಿಸುತ್ತಿದೆ.

English summary
Dasara elephants 2015 jamboo savari have been finalized. The 12-member jumbo team will arrive here in two batches from their respective jungle camps to Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X