ಮೈಸೂರಿನಲ್ಲಿ 20 ಸಾವಿರ ಜನರಿಂದ ಯೋಗಾಭ್ಯಾಸ

Posted By:
Subscribe to Oneindia Kannada

ಮೈಸೂರು, ಜೂನ್ 18 : ಇದೇ ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ವಿಶ್ವ ಯೋಗ ದಿನದಂದು ವಿಶ್ವದಾಖಲೆ ನಿರ್ಮಿಸುವ ಹಿನ್ನಲೆಯಲ್ಲಿ ಮೈಸೂರಿನಲ್ಲಿ ಭಾನುವಾರ ಬೆಳಗ್ಗೆ ರೇಸ್ ಕೋರ್ಸ್ ಗೆ ಸಾಗರೋಪಾದಿಯಲ್ಲಿ ಹರಿದು ಬಂದ ಯೋಗ ಪಟುಗಳು ಯೋಗಾಭ್ಯಾಸ ನಡೆಸಿದರು.

ಮೈಸೂರಿನ ರೇಸ್ ಕೋರ್ಸ್ ಮೈದಾನದಲ್ಲಿ ಭಾನುವಾರ ನಡೆದ ಪೂರ್ವ ತಾಲೀಮಿನ ಯೋಗ ಪ್ರದರ್ಶನದಲ್ಲಿ 20 ಸಾವಿರಕ್ಕೂ ಹೆಚ್ಚು ಯೋಗ ಪಟುಗಳು ಪಾಲ್ಗೊಂಡಿದ್ದರು.

ಅಂತಾರಾಷ್ಟ್ರೀಯ ಯೋಗದಿನದಂದು ಗಿನ್ನಿಸ್ ಪಟ್ಟಿ ಸೇರಲಿದೆಯೇ ಮೈಸೂರು?

ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ, ಅವರ ಪತ್ನಿ ಅರ್ಪಿತ, ಶಾಸಕ ಎಂ.ಕೆ ಸೋಮಶೇಖರ್, ಜಿಲ್ಲಾಧಿಕಾರಿ ಡಿ. ರಂದೀಪ್, ಪಾಲಿಕೆ ಆಯುಕ್ತ ಜಿ. ಜಗದೀಶ್, ಮುಡಾ ಆಯುಕ್ತ ಡಾ. ಮಹೇಶ್ ಸೇರಿದಂತೆ ಹಿರಿಯ ಸರ್ಕಾರಿ ಅಧಿಕಾರಿಗಳು ಸಾಮೂಹಿಕ ಯೋಗ ಪ್ರದರ್ಶನದ ಪೂರ್ವ ತಾಲೀಮಿನಲ್ಲಿ ಪಾಲ್ಗೊಂಡಿದ್ದರು.

20 thousand peoples performed yoga at race course Mysuru on Sunday

ರೇಸ್ ಕೋರ್ಸ್ ಮೈದಾನ ಸೇರಿದಂತೆ ಆಸುಪಾಸಿನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಜಿಲ್ಲಾಧಿಕಾರಿ ಡಿ.ರಂದೀಪ್ ಮಾತನಾಡಿ ಇಂದು ನಡೆದ ಪೂರ್ವಭಾವಿ ಯೋಗ ಪ್ರದರ್ಶನಕ್ಕೆ ಹತ್ತು ಸಾವಿರ ಯೋಗ ಪಟುಗಳು ಆಗಮಿಸುವ ನಿರೀಕ್ಷೆಯಿತ್ತು.

ಆದರೆ, ನಿರೀಕ್ಷೆಗೂ ಮೀರಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಯೋಗ ಪಟುಗಳು ಆಗಮಿಸಿದ್ದಾರೆ. ಜೂನ್ 21ರಂದು ನಡೆಯುವ ವಿಶ್ವಯೋಗ ದಿನಾಚರಣೆಗೆ 45 ಸಾವಿರಕ್ಕೂ ಹೆಚ್ಚು ಯೋಗಪಟುಗಳು ಆಗಮಿಸುವ ನಿರೀಕ್ಷೆಯಿದೆ. ಆ ಮೂಲಕ ಹೊಸ ದಾಖಲೆ ನಿರ್ಮಾಣವಾಗುವ ವಿಶ್ವಾಸವಿದೆ ಎಂದರು.

20 thousand peoples performed yoga at race course Mysuru on Sunday

ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮಾತನಾಡಿ ಮೈಸೂರಿನಲ್ಲಿ ಜೂನ್ 21ರಂದು ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ ಮಹದೇವಪ್ಪ ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರಿಗೂ ಆಹ್ವಾನ ನೀಡಲಾಗಿತ್ತು. ಕಾರಣಾಂತರಗಳಿಂದ ಅವರು ಆಗಮಿಸುತ್ತಿಲ್ಲ. ಈ ಬಾರಿ ಮೈಸೂರಿನಲ್ಲಿ ವಿಶ್ವದಾಖಲೆಯ ಯೋಗ ಪ್ರದರ್ಶನ ನಡೆಯುವ ಪರಿಣಾಮ ಮುಂದಿನ ವರ್ಷ ಖಂಡತವಾಗಿಯೂ ನರೇಂದ್ರ ಮೋದಿ ಮೈಸೂರಿಗೆ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Thousands of yoga students are preparing to build a world record in Mysuru, the state capital city on the eve of International World Yoga Day on June 21. On Sunday morning, the yoga practitioner performed in the race course.
Please Wait while comments are loading...