ಮೈಸೂರು ದಸರೆ ವೀಕ್ಷಣೆಗೆ ಚಾಮುಂಡಿ ಬೆಟ್ಟದಲ್ಲಿ ಬೈನಾಕ್ಯುಲರ್!

Posted By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 15: ನಾಡಹಬ್ಬ ದಸರಾ ಮಹೋತ್ಸವದ ವೇಳೆ ಚಾಮುಂಡಿ ಬೆಟ್ಟದಿಂದ ಸಾಂಸ್ಕೃತಿಕ ನಗರಿ ಮೈಸೂರಿನ ಸೌಂದರ್ಯ ಸವಿಯಲು 2 ವ್ಯೂ ಪಾಯಿಂಟ್ ಗಳು ಸಿದ್ಧಗೊಳ್ಳುತ್ತಿದ್ದು ವಿದೇಶಿ ಬೈನಾಕ್ಯುಲರ್ ಅಳವಡಿಸಲಾಗುತ್ತಿದೆ.

ಸೆ. 21ರಂದು ಆರಂಭವಾಗುವ ನವರಾತ್ರಿಗೂ ಮುನ್ನವೇ ಸಾರ್ವಜನಿಕರಿಗೆ ಪ್ರಕೃತಿ ಸೌಂದರ್ಯ ವೀಕ್ಷಿಸುವ ಅವಕಾಶ ಮಾಡಿಕೊಡಬೇಕೆಂದು ಜಿಲ್ಲಾಡಳಿತ ಪಣ ತೊಟ್ಟಿದ್ದು, ನಿರ್ಮಿತಿ ಕೇಂದ್ರದ ವತಿಯಿಂದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಎರಡು ಕೇಂದ್ರ ಊಟಿಯ ದೊಡ್ಡಬೆಟ್ಟ ಸೇರಿದಂತೆ ವಿವಿಧೆಡೆ ಗಿರಿಕಂದರಗಳಲ್ಲಿ ವ್ಯೂ ಪಾಯಿಂಟ್ ನಿರ್ಮಾಣ ಮಾಡಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಿ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಚಾಮುಂಡಿ ಬೆಟ್ಟದಲ್ಲೂ 2 ಆಯ್ದ ಸ್ಥಳಗಳಲ್ಲಿ , ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗುತ್ತಿದೆ.

2 view points in Chamundi hills to watch Mysuru Dasara through telescope

ಚಾಮುಂಡಿ ಬೆಟ್ಟಕ್ಕೆ ಹೋಗುವ ಹಾಗೂ ಬೆಟ್ಟದಿಂದ ನಂದಿಮೂರ್ತಿಗೆ ಹೋಗುವ ರಸ್ತೆಯ ಜಂಕ್ಷನ್ ಮತ್ತು ನಂದಿ ಮೂರ್ತಿಯತ್ತ ಸಾಗುವ ರಸ್ತೆಯಲ್ಲಿ 'ಸುಸ್ವಾಗತ ಬೋರ್ಡ್' ಸಮೀಪದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗುತ್ತಿದೆ. ಸುಮಾರು 8 ಅಡಿ ಅಗಲ ಹಾಗೂ 6 ಅಡಿ ಉದ್ದ ನೆಲಮಟ್ಟದಿಂದ ೩ ಅಡಿ ಎತ್ತರದ ಗೋಡೆಯಲ್ಲಿ ಗೋಪುರ ನಿರ್ಮಾಣ ಮಾಡುತ್ತಿದ್ದು, ಅದರಲ್ಲಿ ಸುಮಾರು ಐದು ಅಡಿ ಎತ್ತರದಲ್ಲಿ ಬೈನಾಕ್ಯುಲರ್ ಅಳವಡಿಸಲಾಗುತ್ತಿದೆ.

ಮೈಸೂರು ದಸರಾ ವೈಭವ ಸವಿಯಲು ಚಾಮುಂಡಿಬೆಟ್ಟದಲ್ಲಿ ಟೆಲಿಸ್ಕೋಪ್

ವೀಕ್ಷಣೆಗೆ ಅನುಕೂಲ: ಚಾಮುಂಡಿ ಬೆಟ್ಟದಿಂದ ಮೈಸೂರು ಅರಮನೆ ಸೇರಿದಂತೆ ನಗರದ ಪಾರಂಪರಿಕ ಕಟ್ಟಡಗಳನ್ನು ನೋಡಲು ಪ್ರವಾಸಿಗರಿಲ್ಲದೆ ಮೈಸೂರಿನ ಜನರು ಮುಗಿಬೀಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಮಾರು 6 ರಿಂದ 7 ಕಿಲೋ ಮೀಟರ್ ದೂರದವರೆಗೂ ಸ್ಪಷ್ಟವಾಗಿ ವೀಕ್ಷಿಸಬಹುದಾದ ಸಾಮರ್ಥ್ಯವುಳ್ಳ ವಿದೇಶಿ ನಿರ್ಮಾಣದ ಬೈನಾಕ್ಯುಲರ್ ಅಳವಡಿಸಲಾಗುತ್ತಿದೆ. ಒಂದು ಬೈನಾಕ್ಯುಲರ್ ಗೆ ಹದಿನೈದು ಲಕ್ಷ ರೂ ಪಾವತಿಸಲಾಗುತ್ತಿದ್ದು, ಎರಡು ಬೈನಾಕ್ಯುಲರ್ ಗಳಿಂದ ಮೂವತ್ತು ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಉಳಿದಂತೆ ಗೋಪುರ ನಿರ್ಮಾಣಕ್ಕೆ 10 ಲಕ್ಷ ರೂಪಾಯಿ, ವ್ಯಯವಾದರೆ ಒಟ್ಟಾರೆ ಎರಡು ವೀಕ್ಷಣಾ ಗೋಪುರ ನಿರ್ಮಾಣಕ್ಕೆ 40 ಲಕ್ಷ ರೂಪಾಯಿ ವಿನಿಯೋಗಿಸಲಾಗುತ್ತಿದೆ.

ಭದ್ರತೆಗೆ ಕ್ರಮ
ಬೈನಾಕುಲರ್ ಉಳ್ಳಂತಹ ವೀಕ್ಷಣಾ ಗೋಪುರದಲ್ಲಿ ಒಮ್ಮೆ 10 ರಿಂದ 12 ಮಂದಿ ನಿಲ್ಲಬಹುದಾಗಿದೆ. ಆದರೆ ಒಬ್ಬರಾದ ನಂತರ ಒಬ್ಬರು ವೀಕ್ಷಿಸಬೇಕಾಗಿದೆ. ಬೆಟ್ಟದಿಂದ ಮೈಸೂರು ನಗರವನ್ನು ವೀಕ್ಷಿಸಲು ಬರುವ ಪ್ರವಾಸಿಗರ ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದೆ. ವೀಕ್ಷಣಾ ಗೋಪುರ ನಿರ್ಮಾಣಕ್ಕೆ ಐದು ಇಂಚು ಅಗಲ, ಐದು ಇಂಚು ಎತ್ತರವುಳ್ಳ ಕಬ್ಬಿಣದ ಬೀಮ್ ಬಳಸಲಾಗಿದೆ.

ಅದು ನೆಲಮಟ್ಟದಿಂದ ಸುಮಾರು 6 ಅಡಿಪಾಯ ತೋಡಿ ಕಬ್ಬಿಣದ ಬೀಮ್ ಅಳವಡಿಸಲಾಗಿದ್ದು, ವೀಕ್ಷಕರು ನಿಲ್ಲುವುದಕ್ಕೆ ಕಬ್ಬಿಣದ ತಗಡನ್ನು ನೆಲಹಾಸಿಗೆಯಲ್ಲಿ ಅಳವಡಿಸಿ ನಂತರ ಸರಳನ್ನು ಹಾಕಲಾಗುತ್ತಿದೆ. ಅಲ್ಲದೆ ಮುಗ್ಗರಿಸಿ ಬೀಳದಂತೆ ಕಬ್ಬಿಣ ಹಾಗೂ ಗಾಜನ್ನು ಅಳವಡಿಸುವುದರೊಂದಿಗೆ ಹಿಡಿದುಕೊಳ್ಳಲು ವ್ಯವಸ್ಥೆ ಸಹ ಮಾಡಲಾಗುತ್ತಿದೆ. ಇದರೊಂದಿಗೆ ಓರ್ವ ಭದ್ರತಾ ಸಿಬ್ಬಂದಿ ನಿಯೋಜಿಸಿ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗುತ್ತಿದೆ.

ದಸರೆ ವೇಳೆಗೆ ವೀಕ್ಷಣಾ ಗೋಪುರ ಸಿದ್ಧವಾಗಲಿದ್ದು, ಪ್ರವಾಸೋದ್ಯಮದ ಬೆಳವಣಿಗೆಗೆ ಇದು ಪೂರಕವಾಗಲಿದೆ. ಹತ್ತಾರು ವರ್ಷಗಳ ಬೇಡಿಕೆ ಇದೀಗ ಸಾಕಾರಗೊಳ್ಳುತ್ತಿದ್ದು, ಮೈಸೂರಿನ ಜನತೆ ಬೆಟ್ಟದಿಂದ ನಿಂತು ಮೈಸೂರಿನ ಸಂಭ್ರಮವನ್ನು ಹಾಗೂ ಸೌಂದರ್ಯವನ್ನು ಕಣ್ತುಂಬಿಕೊಂಡು ಈ ಬಾರಿ ದಸರೆ ವೈಭವವನ್ನು ಆಸ್ವಾದಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mysuru district administration is constructing 2 view points in Chamundi hills and fixing telescope there to watch Mysuru Dasara Fest from Chamundi hills.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ