ಮರಕ್ಕೆ ಡಿಕ್ಕಿ ಹೊಡೆದ ಟಾಟಾ ಎಸ್: ಇಬ್ಬರ ದುರ್ಮರಣ

Posted By:
Subscribe to Oneindia Kannada

ಮೈಸೂರು, ಅಕ್ಟೋಬರ್ 25 : ಚಾಲಕನ ನಿಯಂತ್ರಣ ತಪ್ಪಿದ ಟಾಟಾ ಏಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ತಿ.ನರಸೀಪುರ-ಮೈಸೂರು ರಸ್ತೆಯ ಕೆಂಪಯ್ಯನಹುಂಡಿ ಬಳಿ ನಡೆದಿದೆ.

ತಲಕಾಡಿನಿಂದ ಮೈಸೂರಿಗೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಐವರಿಗೆ ಗಂಭೀರ ಗಾಯಾಗಳಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ತಿ ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2 men died after the met a tragic accident in T Narasipur in Mysuru

ಬಸ್ ನಿಂದ ಬಾಲಕನನ್ನು ತಳ್ಳಿದ ಪ್ರಕರಣ : ಶಿಸ್ತುಕ್ರಮಕ್ಕೆ ಸಚಿವರ ಆದೇಶ
ಮೈಸೂರಿನಲ್ಲಿ ಶಾಲಾ ಬಾಲಕನನ್ನು ಬಸ್ ಬಾಗಿಲಿಂದ ಹೊರದೂಡಿ ಅಮಾನವೀಯ ವರ್ತನೆ ತೋರಿದ್ದ ಕಂಡಕ್ಟರ್ ಹಾಗೂ ಚಾಲಕನ ವಿರುದ್ದ ಕೂಡಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಸಾರಿಗೆ ಸಚಿವ ಹೆಚ್.ಎಂ. ರೇವಣ್ಣ ಅವರು ಆದೇಶ ನೀಡಿದ್ದಾರೆ.

ಘಟನೆ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿರುವ ಸಚಿವ ಹೆಚ್ ಎಂ ರೇವಣ್ಣ, ಬಾಲಕನ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ಭರಿಸುವಂತೆ ಕೆಎಸ್ ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ. ಘಟನೆ ಕುರಿತು ಕೂಡಲೆ ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಅದೇಶ ನೀಡಿದ್ದಾರೆ.

ಮೈಸೂರಿನ ಸಿಟಿ ಬಸ್ ನಿಲ್ದಾಣದಲ್ಲಿ ಬನ್ನೂರಿನ ಉಲ್ಲೇಖ್ ಪುಟ್ಟಸ್ವಾಮಿ ಬಸ್ ಹತ್ತಿದ್ದಾನೆ. ಆದರೆ ಕಂಡಕ್ಟರ್ ಪಾಸ್ ಇಲ್ಲ ಅಂತಾ ಉಲ್ಲೇಖ್ ಪುಟ್ಟಸ್ವಾಮಿ ಬಸ್ ನಿಂದ ಹೊರ ದಬ್ಬಿದ್ದು,ಈ ವೇಳೆ ಬಸ್ ಚಕ್ರ ಹರಿದು ಉಲ್ಲೇಖ್ ಪುಟ್ಟಸ್ವಾಮಿ ಕಾಲು ಕಳೆದು ಕೊಂಡಿದ್ದಾನೆ. ಈ ಘಟನೆ ನಿನ್ನೆ ಸಂಜೆ ನಡೆದಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
2 men died after the met a tragic accident in T Narasipur in Mysuru. The incident took place on Oct 25th.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ