ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ತಾಯಿ –ಮಗಳ ಶವ ಪತ್ತೆ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 19: ಬುಧವಾರ(ಆ.16) ರಾತ್ರಿ ನಾಪತ್ತೆಯಾಗಿದ್ದರು ಎಂದು ದೂರಲಾಗಿದ್ದ ತಾಯಿ, ಮಗಳ ಮೃತದೇಹಗಳು ನಗರದ ಕುಕ್ಕರ ಹಳ್ಳಿ ಕೆರೆಯಲ್ಲಿ ಆ.17ರ ಸಂಜೆ ಪತ್ತೆಯಾಗಿವೆ.

ನಗರದ ಕುವೆಂಪುನಗರ ನಿವಾಸಿ ಯೋಗಾ ನಂದ ಎಂಬವರ ಪತ್ನಿ ಸ್ಫೂರ್ತಿ(29) ಹಾಗೂ ಮಗಳು ಹೇಮಾನಿ(8) ಎಂಬವರೇ ಮೃತರು. ಪೊಲೀಸರು ಎಲ್ಲಾ ಠಾಣೆಗಳಿಗೆ ತಾಯಿ, ಮಗಳ ಭಾವಚಿತ್ರ ಕಳುಹಿಸಿ ತನಿಖೆ ಆರಂಭಿಸಿದ್ದರು. ಈ ನಡುವೆ ಗುರುವಾರ ಸಂಜೆ ಕುಕ್ಕರ ಹಳ್ಳಿ ಕೆರೆಯ ಕಾವಲುಗಾರ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಕರೆಮಾಡಿ ಮಹಿಳೆ ಹಾಗೂ ಮಗುವಿನ ಶವ ಕೆರೆಯಲ್ಲಿ ತೇಲುತ್ತಿರುವ ಬಗ್ಗೆ ಮಾಹಿತಿ ನೀಡಿದ್ದರು.

2 dead bodies found at Kukkarahalli lake Mysuru

ಕುವೆಂಪು ನಗರ ಠಾಣೆಯಲ್ಲಿ ತಾಯಿ- ಮಗಳ ನಾಪತ್ತೆ ದೂರು ದಾಖಲಾಗಿರುವುದನ್ನು ತಿಳಿದಿದ್ದ ಪೊಲೀಸರು, ಅಲ್ಲಿನ ಠಾಣೆಗೆ ಮಾಹಿತಿ ನೀಡಿದರು. ಪರಿಶೀಲನೆ ವೇಳೆ ಶವಗಳು ಸ್ಫೂರ್ತಿ ಹಾಗೂ ಹೇಮಾನಿ ಅವರದ್ದೇ ಎಂಬುದು ಖಚಿತವಾಯಿತು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಕುವೆಂಪುನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.

ಇಬ್ಬರಿಗೂ 2ನೇ ವಿವಾಹ:
ಚಿಕ್ಕಮಗಳೂರು ಜಿಲ್ಲೆ ಹಾಂದಿ ಗ್ರಾಮದ ನಿವಾಸಿ ಸ್ಫೂರ್ತಿಗೆ ಈ ಹಿಂದೆಯೇ ವಿವಾಹವಾಗಿತ್ತು. ಕೆಲ ಸಮಯದಲ್ಲಿಯೇ ಪತಿ ಅಕಾಲ ಮರಣಕ್ಕೆ ತುತ್ತಾಗಿದ್ದರು. ಆ ದಂಪತಿಗೆ ಜನಿಸಿದ ಮಗಳೇ ಹೇಮಾನಿ. ಚಿಕ್ಕ ವಯಸ್ಸಿನಲ್ಲಿಯೇ ಪತಿಯನ್ನು ಕಳೆದುಕೊಂಡ ಮಗಳು ಸ್ಫೂರ್ತಿಗೆ ಮತ್ತೆ ವಿವಾಹ ಮಾಡಲು ಪೋಷಕರು ನಿರ್ಧರಿಸಿದ್ದರು. ಇದೇ ವೇಳೆ ಪತ್ನಿಯಿಂದ ದೂರವಾಗಿದ್ದ ಹಾಗೂ ಒಂದು ಮಗುವನ್ನು ಹೊಂದಿದ್ದ ಯೋಗಾನಂದ ಅವರನ್ನು ಪರಶಿವ ಅವರಿಗೆ ನೆಂಟರೊಬ್ಬರು ಪರಿಚಯಿಸಿದ್ದರು. ಎರಡೂ ಕುಟುಂಬದವರು ಒಪ್ಪಿ ಸಕಲೇಶಪುರದ ದೇವಸ್ಥಾನವೊಂದರಲ್ಲಿ 2016ರ ಫೆ.28ರಂದು ಇಬ್ಬರಿಗೂ ಮದುವೆ ಮಾಡಿದ್ದರು.

2 dead bodies found at Kukkarahalli lake Mysuru

ವಿನಾಯಕ ಆಗ್ರಿ ಮಾರ್ರ್ಟ್ ಎಂಬ ಮಳಿಗೆ ಹೊಂದಿದ್ದ ಯೋಗಾನಂದ, ಪತ್ನಿಯೊಂದಿಗೆ ಕುವೆಂಪುನಗರದಲ್ಲಿ ವಾಸವಾಗಿದ್ದರು. ಇನ್ನು ನನ್ನ ಮಗಳು, ಮೊಮ್ಮಗಳನ್ನು ಅಳಿಯನೇ ಕೊಲೆ ಮಾಡಿದ್ದಾನೆ ಎಂದು ಮೃತ ಸ್ಫೂರ್ತಿ ಅವರ ತಾಯಿ ಪ್ರಭಾವತಿ ಆರೋಪಿಸಿದ್ದಾರೆ. ನನ್ನ ಮಗಳನ್ನು ವಿವಾಹವಾದ ಆತ ಒಂದು ದಿನವೂ ಚೆನ್ನಾಗಿ ನೋಡಿಕೊಳ್ಳಲಿಲ್ಲ. ಮೈಸೂರಿನಲ್ಲಿ ನಿವೇಶನ ಖರೀದಿಸಿಕೊಡುವಂತೆ ಆಗ್ಗಾಗ್ಗೆ ಒತ್ತಡ ಹೇರುತ್ತಿದ್ದ. ಕೆಲಬಾರಿ ನ್ಯಾಯ ಪಂಚಾಯ್ತಿ ಕೂಡ ನಡೆದಿತ್ತು ಎಂದು ಮೃತ ಸ್ಫೂರ್ತಿ ಪೋಷಕರು ಆರೋಪಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dead bodies of a woman and her daughter who went missing from their Kuvempunagar residence were found at the Kukkarahalli lake on Aug 17th

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ