ಮೈಸೂರಿನಲ್ಲಿ ಕಾರು ಪಲ್ಟಿ: ದಂತ ವೈದ್ಯ ಸ್ಥಳದಲ್ಲೇ ಸಾವು

By: ಮೈಸೂರು ಪ್ರತಿನಿಧಿ
Subscribe to Oneindia Kannada

ಮೈಸೂರು, ಡಿಸೆಂಬರ್ 28 : ಮಳವಳ್ಳಿ ತಾಲೂಕಿನ ನೆಲಮಾಕನಹಳ್ಳಿ ಬಳಿ ಕಾರು ಪಲ್ಟಿಯಾಗಿ ದಂತ ವೈದ್ಯರೊಬ್ಬರು ಮೃತಪಟ್ಟ ಘಟನೆ ಜರುಗಿದೆ.

ಮಳವಳ್ಳಿಯ ನೆಲಕಾಮನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಕಾರಿನೊಳಗಿದ್ದ ಡಾ. ಸದಾಶಿವ(42) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಡಾ.ಸದಾಶಿವ ಅವರು ಮಳವಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿ ಹರ್ಷಿತಾ ಕ್ಲಿನಿಕ್ ಅನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಾಗಿದೆ[ಮೈಸೂರು ಉಸ್ತುವಾರಿ ಸಚಿವರ ಕಾರಿನ ಟೈರ್ ಸ್ಫೋಟ]

2 Crime: accident doctor death, woman committed suicide

ಮಕ್ಕಳಾಗಿಲ್ಲವೆಂಬ ಕೊರಗು, ಮಹಿಳೆ ಆತ್ಮಹತ್ಯೆ

ಮೈಸೂರು :ನಂಜನಗೂಡಿನ ದೇವಿರಮ್ಮ ಬಡಾವಣೆಯಲ್ಲಿ ಮಕ್ಕಳಾಗಿಲ್ಲವೆಂಬ ಕೊರಗಿನಿಂದ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.[ಧಾರವಾಡ-ಹುಬ್ಬಳ್ಳಿಯಲ್ಲಿ ನಡೆದ ಕ್ರೈಂ ಸುದ್ದಿಗಳು]

ಸೌಮ್ಯಶ್ರೀ(24), ಮೃತ ಗೃಹಿಣಿ. ದೇವಿರಮ್ಮನಹಳ್ಳಿ ನಿವಾಸಿಯಾಗಿರುವ ಸೌಮ್ಯ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂಜನಗೂಡು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Two crime in Mysore, one is Car topple dead the doctor , The children being no born a woman committed suicide.
Please Wait while comments are loading...