ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1953: ಶ್ರೀಕಂಠದತ್ತ ಒಡೆಯರ್ ಲವ್ ಸ್ಟೋರಿ

By Mahesh
|
Google Oneindia Kannada News

ಮೈಸೂರು, ಡಿ.10: ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ಅವರು ಸರಳ ಸಜ್ಜನ ವ್ಯಕ್ತಿಯಾಗಿದ್ದರು. ಮಹಾರಾಜರಾದರೂ ನಮ್ಮ ಜತೆ ತುಂಬಾ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು. ಅವರಿಲ್ಲದೆ ಈಗ ವಾಹನ ಚಲಿಸುವುದು ಹೇಗೆ ಎಂಬುದು ತಿಳಿಯುತ್ತಿಲ್ಲ ಎಂದು ಅವರ ಆತ್ಮೀಯ ಚಾಲಕ ಸುರೇಶ್ ಎಂ ಗೋಳಿಟ್ಟಿದ್ದಾರೆ.

ಮೈಸೂರು ವಿವಿಯ ಟಾಪ್ ವಿದ್ಯಾರ್ಥಿ, ಲಂಡನ್ ವಿವಿಯಿಂದ ಮ್ಯೂಸಿಕ್ ಕಲಿತ, ಕ್ರೀಡೆಗಳಲ್ಲಿ ಆಸಕ್ತಿ ಬೆಳೆಸಿಕೊಂಡು ಹತ್ತು ಹಲವು ಸಂಸ್ಥೆಗಳ ಒಡೆತನ ಹೊಂದಿದ್ದ ಒಡೆಯರ್ ಅವರಿಗೆ ಕಾರುಗಳ ಮೇಲೆ ವಿಪರೀತ ಮೋಹ ಇತ್ತು. ಅವರ ಬಳಿ ಇದ್ದ ಕಾರುಗಳ ನೋಂದಣಿ ಸಂಖ್ಯೆ ಎಲ್ಲವೂ 1953 ಎಂದಿದೆ.

1953ರ ಫೆಬ್ರವರಿ 20 ರಂದು ಜನಿಸಿದ ಒಡೆಯರ್ ಅವರು ತಮ್ಮ ಜನ್ಮ ವರ್ಷವನ್ನು ಕಾರುಗಳ ನೋಂದಣಿ ಸಂಖ್ಯೆಯನ್ನಾಗಿಸಿಕೊಂಡಿದ್ದರು. ಮೈಸೂರಿನ ಯದು ವಂಶದ ಒಡೆಯರ್ ಅವರ ಬಳಿ ಸರಿ ಸುಮಾರು 20 ಕ್ಕೂ ಅಧಿಕ ಐಷಾರಾಮಿ ಕಾರುಗಳಿವೆ. [ಮೈಸೂರು ಮಹಾರಾಜ ಶ್ರೀಕಂಠದತ್ತ ಒಡೆಯರ್ ವಿಧಿವಶ]

ಪ್ರತಿ ಬಾರಿ ಕಾರು ಖರೀದಿಸಿದ ನಂತರ 1953 ಸಂಖ್ಯೆ ನೋಂದಣಿ ಸಿಗಬೇಕು ಎಂದು ಒತ್ತಾಯಿಸುತ್ತಿದ್ದರು. ಅವರಿಗೆ ತಮ್ಮ ಜನ್ಮ ವರ್ಷದ ಬಗ್ಗೆ ಅಪಾರ ಆಪ್ತತೆ ಬೆಳೆದಿತ್ತು. ಈ ಬಗ್ಗೆ ಅವರಿಗೆ ಯಾವ ಜ್ಯೋತಿಷಿಗಳು ಹೇಳಿದ್ದರೋ ಗೊತ್ತಿಲ್ಲ. ಆದರೆ, ಪ್ರತಿ ಕಾರಿಗೂ ಅದೇ ಸಂಖ್ಯೆ ಇರಬೇಕು ಎಂದು ಆದೇಶ ನೀಡಿದ್ದರು ಎಂದು ಅರಮನೆ ಹಾಗೂ ಒಡೆಯರ್ ಅವರ ಆಪ್ತ ಕಾರ್ಯದರ್ಶಿ ಲಕ್ಷ್ಮಿ ನಾರಾಯಣ ಸ್ಮರಿಸಿಕೊಳ್ಳುತ್ತಾರೆ.

1953 A love story, Srikanta Datta Narasimharaja Wodeyar Car Craze

ಐಷಾರಾಮಿ ಕಾರುಗಳ ಬಗ್ಗೆ ಕ್ರೇಜ್ ಅಷ್ಟೇ ಅಲ್ಲ. ಕಾರುಗಳ ಬಗ್ಗೆ ವಿಶೇಷ ಜ್ಞಾನ ಕೂಡಾ ಇತ್ತು. ಹೆಚ್ಚಾಗಿ ಬಿಎಂಡಬ್ಲ್ಯೂ ಕಾರಿನ ಮೇಲೆ ವಿಶೇಷ ಮೋಹವಿತ್ತು. ಕೋಟಿಗಟ್ಟಲೆ ಬೆಲೆ ಬಾಳುವ BMW ಸರಣಿ ಕಾರುಗಳನ್ನು ಹೊಂದಿದ್ದರು. ಆದರೆ, ಕುತೂಹಲದ ಸಂಗತಿ ಎಂದರೆ 2004ರಲ್ಲಿ ಸಂಸದರಾಗಿ ಆಸ್ತಿ ಘೋಷಣೆ ಮಾಡಿದಾಗ ನನ್ನ ಬಳಿ 1.5 ಲಕ್ಷ ರು ಬೆಲೆ ಬಾಳುವ ಮಾರುತಿ ಜೆನ್ ಮಾತ್ರ ಇದೆ ಎಂದು ಹೇಳಿದ್ದರು.

ಬಿಎಂಡಬ್ಲ್ಯೂ ಪ್ರತಿ ಸರಣಿ ಕಾರುಗಳನ್ನು ಮಾರುಕಟ್ಟೆಗೆ ಬಂದ ದಿನವೇ ಖರೀದಿಸುತ್ತಿದ್ದರಲ್ಲದೆ ಅದರ ಟೆಸ್ಟ್ ಡ್ರೈವ್ ಮಾಡುತ್ತಿದ್ದರು. ಮೊದಲಿಗೆ ಲಕ್ಷಾಂತರ ರು ಬೆಲೆ ಬಾಳುವ ಮರ್ಸೀಡೀಸ್ ಸರಣಿ ಕೊಳ್ಳುತ್ತಿದ್ದ ಒಡೆಯರ್ ಅವರು ನಂತರ ಬಿಎಂಡಬ್ಲ್ಯೂಗೆ ಮನಸೋತಿದ್ದರು. ಐದಾರು ಮರ್ಸೀಡೀಸ್ ಬೆಂಜ್ ಸರಣಿ ಕಾರು ಕೊಂಡ ಮೇಲೆ ಬಿಎಂಡಬ್ಲ್ಯೂಗೆ ತಮ್ಮ ಪ್ರೀತಿ ನಿಷ್ಠೆ ಬದಲಾಯಿಸಿದ್ದರು.

ವೇಗದ ಚಾಲನೆ: ಅಶೋಕ್ ಖೇಣಿ ಅವರು ಬೆಂಗಳೂರು ಮೈಸೂರು ನಡುವೆ NICE ರಸ್ತೆ ನಿರ್ಮಿಸಿದ್ದು ಶ್ರೀಕಂಠದತ್ತ ಒಡೆಯರ್ ಅವರಿಗೆ ಭಾರಿ ಖುಷಿ ಕೊಟ್ಟಿತ್ತಂತೆ. ಕಾರಣ, ಐಷಾರಾಮಿ ಕಾರುಗಳನ್ನು ಅತ್ಯಂತ ವೇಗವಾಗಿ ಚಾಲನೆ ಮಾಡಲು ಸೂಕ್ತ ರಸ್ತೆ ನಿರ್ಮಾಣವಾಗಿದೆ ಎಂದು ಸಂತಸ ಪಟ್ಟಿದ್ದರಂತೆ.

ಹೊಸ ಕಾರು ಬಂದ ತಕ್ಷಣ ಒಡೆಯರ್ ಅವರು ಮೊದಲಿಗೆ ಡ್ರೈವರ್ ಸೀಟು ಏರುತ್ತಿದ್ದರು. ಸಂಚಾರಿ ನಿಯಮ ಪಾಲಿಸಿ ತ್ವರಿತ ಗತಿಯಲ್ಲಿ ಕಾರು ಚಾಲನೆ ಮಾಡುವಲ್ಲಿ ನಿಷ್ಣಾತರಾಗಿದ್ದರು. ಲಾಂಗ್ ಡ್ರೈವ್ ಹೋಗುವುದು ಅವರಿಗೆ ತುಂಬಾ ಇಷ್ಟವಾಗಿತ್ತು ಎಂದು ಅವರ ವಾಹನ ಚಾಲಕ ಸುರೇಶ್ ಎಂ ಹೇಳಿದ್ದಾರೆ. (ಶ್ರೀಕಂಠದತ್ತ ಒಡೆಯರ್ ಅವರಿಗೆ ಚಿತ್ರನಮನ)

ಕೆಲವೊಮ್ಮೆ ಮೇಡಂ(ಮಹಾರಾಣಿ ಪ್ರಮೋದಾದೇವಿ) ಅವರನ್ನು ಮುಂದಿನ ಸೀಟಿನಲ್ಲಿ ಕೂರಿಸಿಕೊಳ್ಳುತ್ತಾರೆ ನಾನು ಹಿಂಬದಿ ಕೂರುತ್ತಿದ್ದೆ. ಅವರಷ್ಟು ವೇಗವಾಗಿ ಸುರಕ್ಷಿತವಾಗಿ ಓಡಿಸಲು ನನಗೂ ಸಾಧ್ಯವಿಲ್ಲ ಎಂದು ಸುರೇಶ್ ನೆನಪಿಸಿಕೊಂಡಿದ್ದಾರೆ.

ಮೇಡಂ ಅವರಿಗೆ ಮರ್ಸಿಡೀಸ್ ಬೆಂಜ್ ಇಷ್ಟ. ಮಹಾಸ್ವಾಮಿ ಅವರು ಗಿಫ್ಟ್ ನೀಡಿದ್ದಾರೆ. ಫೋರ್ಡ್ ಕಂಪನಿಯಲ್ಲಿ ದಂಪತಿಗಳು ಷೇರು ಹೊಂದಿದ್ದರು. ಈ ಕಾರಣಕ್ಕಾಗಿ ಫೋರ್ಡ್ ಎಂಡವರ್ ವಾಹನ ಕೂಡಾ ಹೊಂದಿದ್ದರು ಎಂದು ತಿಳಿದು ಬಂದಿದೆ. ಒಡೆಯರ್ ಅವರ ಕಾರು ಪ್ರೀತಿ ಬಗ್ಗೆ ಅನೇಕ ಕಥೆಗಳೂ ಇವೆ. ಅವರು ಕಾರು ಓಡಿಸುತ್ತಿದ್ದರೆ ಪಕ್ಕದಲ್ಲಿದ್ದ ಡ್ರೈವರ್ ಗಳು ನಡಕುತ್ತಾರೆ. ಒಡೆಯರ್ ಅವರು ಕಾರುಗಳಿಗೆ ಸ್ವಲ್ಪ ಜಖಂ ಆದರೆ ಮತ್ತೆ ಆ ಕಾರು ಬಳಸುವುದಿಲ್ಲ ಎಂಬ ಮಾತಿದೆ. ಒಡೆಯರ್ ಅವರದ್ದು ವರ್ಣರಂಜಿತ ವ್ಯಕ್ತಿತ್ವ ಎಂಬುದನ್ನು ಮಾತ್ರ ಎಲ್ಲರೂ ಒಪ್ಪಿಕೊಳ್ಳುತ್ತಾರೆ.

English summary
The last scion of Mysore royal family, Srikanta Datta Narasimharaja Wodeyar had craze for fancy car registration number and also like to go for long drive. Srikanta Datta Narasimharaja Wodeyar passed away today(Dec.10)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X