ಮೈಸೂರಿನ ಜಾಂಬೂರಿ ಉತ್ಸವದಲ್ಲಿ ಮೈನವಿರೇಳಿಸುವ ಸಾಹಸ

By: ಯಶಸ್ವಿನಿ ಎಂ.ಕೆ
Subscribe to Oneindia Kannada

ಮೈಸೂರು, ಜನವರಿ 2 : ಮೈಸೂರಿನ ನಂಜನಗೂಡು ರಸ್ತೆಯಲ್ಲಿರುವ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿರುವ ಭಾರತ್‌ ಸ್ಕೌಟ್ಸ್ ಅಂಡ್‌ ಗೈಡ್ಸ್ ನ 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವದಲ್ಲಿ ವಿದ್ಯಾರ್ಥಿಗಳ ಸಾಹಸ ದೃಶ್ಯಗಳು ಮೈನವಿರೇಳಿಸುತ್ತಿವೆ.

ವಿವಿಧ ರಾಜ್ಯಗಳಿಂದಾಗಮಿಸಿದ ವಿದ್ಯಾರ್ಥಿಗಳು ವಿವಿಧ ರೀತಿಯ ಸಾಹಸಗಳನ್ನು ಮೆರೆದು ಜನರನ್ನು ಚಕಿತಗೊಳಿಸಿದರು. ಸಾಹಸ ಕ್ರೀಡೆಗಳ ಸಮುಚ್ಛಯವು ಇಡೀ ಜಾಂಬೂರಿಯಲ್ಲೇ ಆಕರ್ಷಣೆಯ ಕೇಂದ್ರವಾಗಿದೆ. ಜಾಂಬೂರಿಯ ಇತರ ವಿಶೇಷಗಳಾದ ವಸ್ತುಪ್ರದರ್ಶನ, ಜಾಗತಿಕ ಅಭಿವೃದ್ಧಿ ಗ್ರಾಮಗಳು ಮಕ್ಕಳಿಲ್ಲದೇ ಭಣಗುಡುತ್ತಿದ್ದರೆ, ಸಾಹಸ ಸಮುಚ್ಛಯದಲ್ಲಿ ಕಾಲಿಡಲೂ ಜಾಗವಿಲ್ಲದಂತೆ ತುಂಬಿಹೋಗಿದ್ದವು. ಜಾಂಬೂರಿ ಆವರಣದ ನಾಲ್ಕು ಭಾಗಗಳಲ್ಲಿ ಸಾಹಸ ಸಮುಚ್ಛಯಗಳನ್ನು ನಿರ್ಮಿಸಿ. ನಾಲ್ಕೂ ಭಾಗಗಳಲ್ಲಿ 18 ವಿವಿಧ ಸಾಹಸ ಕ್ರೀಡೆಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.[ಚಿತ್ರಗಳಲ್ಲಿ: 17ನೇ ರಾಷ್ಟ್ರೀಯ ಜಾಂಬೂರಿ ಉತ್ಸವದ ಸಂಭ್ರಮ]

ಒಟ್ಟು 52 ತಂಡಗಳು ಜಾಂಬೂರಿಯಲ್ಲಿ ಭಾಗವಹಿಸಿದ್ದು, ಪ್ರತಿ ತಂಡಕ್ಕೂ ಪ್ರತ್ಯೇಕ ಆಹಾರ ತಯಾರಿಗೆ ಅವಕಾಶ ಮಾಡಿಕೊಡಲಾಗಿದೆ. ಅಡುಗೆಗಾಗಿ ನಿಯೋಜಿಸಿರುವ ತಂಡಗಳಲ್ಲಿ ತಲಾ 8 ಸದಸ್ಯರಿರುವರು.

ಸೈನಿಕರ ಉಪಕರಣಗಳ ಬಗ್ಗೆ ಮಾಹಿತಿ

ಸೈನಿಕರ ಉಪಕರಣಗಳ ಬಗ್ಗೆ ಮಾಹಿತಿ

ಮೊದಲ ನೋಟಕ್ಕೆ ಇಲ್ಲಿ ನೆನಪಾಗುವುದು ಸೈನ್ಯದ ತರಬೇತಿ. ಸ್ಕೌಟ್ ಮತ್ತು ಗೌಡಿನ ವಿದ್ಯಾರ್ಥಿಗಳಿಗೆ ತರಬೇತಿ ದಾರರು ವಿವಿಧ ಮಾದರಿಯ ಸೌಟ್ ಮತ್ತು ಗೈಡ್ ನ ಉಪಕರಣಗಳ ಪ್ರದರ್ಶನ ಮತ್ತು ಮಾಹಿತಿಯನ್ನು ನೀಡಿದರು. ಭೂಸೇನೆಯ ಅತ್ಯಾಧುನಿಕ ಗನ್ ಗಳು, ರಣಾಂಗಣದಲ್ಲಿ ಸಂಚರಿಸುವ ಬಾಂಬ್, ಸ್ಫೋಟನಿರೋಧಿ ಟ್ರಕ್ಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

ಸಾಂಸ್ಕೃತಿಕವಾಗಿ ಉಡುಗೆಯಲ್ಲಿ ವಿದ್ಯಾರ್ಥಿಗಳು

ಸಾಂಸ್ಕೃತಿಕವಾಗಿ ಉಡುಗೆಯಲ್ಲಿ ವಿದ್ಯಾರ್ಥಿಗಳು

ಸ್ಕೌಟ್ ಮತ್ತು ಗೈಡಿನ ವಿದ್ಯಾರ್ಥಿಗಳು ಸಾಂಸ್ಕೃತಿಕ ಉಡುಗೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿದರು. ಅದರಲ್ಲಿ ಸೀರೆಯನ್ನುಟ್ಟ ವಿದ್ಯಾರ್ಥಿಗಳು ಫೋಟೋಗೆ ಪೋಸ್ ಕೊಟ್ಟಿದ್ದು ಹೀಗೆ.

ಹಗ್ಗ ಜಗ್ಗಾಟದಲ್ಲಿ ಸಮತೋಲನ

ಹಗ್ಗ ಜಗ್ಗಾಟದಲ್ಲಿ ಸಮತೋಲನ

ಸುತ್ತಲೂ ಹಗ್ಗದಲ್ಲಿ ಕಟ್ಟಿದ ಹಲಗೆಯ ಮೇಲೆ ಸಮತೋಲನ ಮಾಡಿಕೊಂಡು ಸ್ಕೌಟಿನ ವಿದ್ಯಾರ್ಥಿನಿ ಎಷ್ಟು ಕಾಲ ನಿಲ್ಲಳು ಸಾಧ್ಯ, ಹಗ್ಗ ಅಲುಗಾಡಿದರೂ ಅವರ ಸಮತೊಲನ ಕಾಯ್ದುಕೊಳ್ಳುವ ಪರಿಯನ್ನು ದೇಹ ಮತ್ತು ಮನಸ್ಸನ್ನು ದೃಢಗೊಳಿಸುವ ಚಾಣಕ್ಷತೆಯ ಪರೀಕ್ಷೆ ಹೀಗಿದೆ.

ಹಗ್ಗದ ಸಹಾಯ ಮೇಲೆರುವುದೇ ಸಾಹಸ

ಹಗ್ಗದ ಸಹಾಯ ಮೇಲೆರುವುದೇ ಸಾಹಸ

ಕೇವಲ ಹಗ್ಗದ ಸಹಾಯದಿಂದ ಭದ್ರವಾಗಿ ಹಾಕಿರುವ ಪ್ಲೇವುಡ್ ಮೇಲೇರಿ ಬರುವ ಸಾಹಸವನ್ನು ವಿದ್ಯಾರ್ಥಿಗಳು ಯಾವುದೇ ಅಳುಕಿಲ್ಲದೆ ಮಾಡಿ ಮುಗಿಸಿದರು. ಸಹಾಯಕ್ಕೆ ತರಬೇತಿ ದಾರರೂ ಜೊತೆಗಿದ್ದರು.

ಬೇಲಿ ತಾಗದಂತೆ ತೆವಳುತ್ತಾ ಸೈನಿಕನ ಸಾಹಸ

ಬೇಲಿ ತಾಗದಂತೆ ತೆವಳುತ್ತಾ ಸೈನಿಕನ ಸಾಹಸ

ನೆಲದ ಮೇಲೆ ತೆವಳುತ್ತ, ಬೆನ್ನ ಮೇಲಿನ ಮುಳ್ಳಿನ ಬೇಲಿ ತಾಗದಂತೆ ವಿದ್ಯಾರ್ಥಿಗಳು ವಿಶೇಷ ಸಾಹಸವನ್ನು ಪ್ರದರ್ಶಿಸಿದರು. ಒಮ್ಮೆಲೆ ದೇಶದ ಸೈನಿಕರು ದೇಶಕ್ಕಾಗಿ ಹೋರಾಡುವಂತೆ ಭಾಸವಾಯಿತು.

ಮೇಲಕ್ಕೇರಲು ಹಗ್ಗವೇ ಸಹಾಯ

ಮೇಲಕ್ಕೇರಲು ಹಗ್ಗವೇ ಸಹಾಯ

10-15 ಅಡಿ ಎತ್ತರಕ್ಕೆ ಹಾಕಿರುವ ಕಂಬದ ಸೇತುವೆ ಮೇಲಿಂದ ಇಳೆ ಬಿಟ್ಟಿರುವ ಹಗ್ಗದಲ್ಲಿ ಇರುವ ಗಂಟುಗಳನ್ನೇ ಮೇಟ್ಟಲಾಗಿಸಿಕೊಂಡು ವಿದ್ಯಾರ್ಥಿಗಳು ಚಕಚಕನೆ ಏರಿದರು ಈ ಮಾದರಿಯಲ್ಲಿ ಹಲವು ವಿದ್ಯಾರ್ಥಿಗಳು ಒಬ್ಬರ ನಂತರ ಒಬ್ಬರಂತೆ ಏರಿ ಇಳಿದು ಸಾಹಸ ಮೆರೆದರು.

ಒಂದೇ ಹಗ್ಗದ ಮೇಲೆ ನಡೆಯುವ ಪರಿ

ಒಂದೇ ಹಗ್ಗದ ಮೇಲೆ ನಡೆಯುವ ಪರಿ

ಕಮ್ಯಾಂಡೊ ಸೇತುವೆ ಮೇಲೆ ನಡಿಗೆ ಯಾವ ಭಯವೂ ಇಲ್ಲದೆ ನಿರಾತಂಕವಾಗಿ ಹಗ್ಗದ ಸಹಾಯದಿಂದ ನಡೆದು ಚಕಿತವನ್ನು ಮೂಡಿಸುತ್ತಿರುವ ವಿದ್ಯಾರ್ಥಿನಿ.

ಕೆಳಗೆ ಬೀಳದೆ ಸಾಗಿದರೆ ದಾರಿ ಸುಗಮ

ಕೆಳಗೆ ಬೀಳದೆ ಸಾಗಿದರೆ ದಾರಿ ಸುಗಮ

ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಒಂದೊಂದು ಅಡಿ ಎತ್ತರ ಮರದ ಕಂಬಗಳ ಮೇಲೆ ನಡೆದುಕೊಂಡು 24 ಕಂಬಗಳ ಮೇಲೆ ಕಾಲೂರಿ ಕೆಳಗೆ ಪಾದವನ್ನು ಸ್ಪರ್ಶಮಾಡದೇ ಸಾಗುವ ಸಾಹಸ ನೋಡಲು ಮಾತ್ರ ಸುಲಭ, ಮಾಡಲು ನೋಡಿ ಎಷ್ಟು ಕಷ್ಟ.

ಟೈರಿನೊಳಗಿಂದ ತೂರಿ ಹೊರಬಂದ ಸಾಹಸಿ

ಟೈರಿನೊಳಗಿಂದ ತೂರಿ ಹೊರಬಂದ ಸಾಹಸಿ

ಎರಡು ಅಡಿ ಅಂತರದಲ್ಲಿ ಹಾರಕಿರುವ ಇಪ್ಪತ್ತಕ್ಕೂ ಹೆಚ್ಚು ಟೈರಗಳನ್ನು ಒಂದಾದ ಮೇಲೊಂದರಂತೆ ತೆವಳುತ್ತಾ ಒಂದೊಂದು ಟೈರನ್ನು ತೂರುತ್ತಾ ಸಾಗಿ ವಿದ್ಯಾರ್ಥಿಗಳು ನೊಡುಗರಿಗೆ ಚಕಿತವನ್ನುಂಟು ಮಾಡಿದರು.

ಗುರಿ ಸಾಧಿಸಿದ ಬಿಲ್ಲು ಪರಿಣತರು

ಗುರಿ ಸಾಧಿಸಿದ ಬಿಲ್ಲು ಪರಿಣತರು

ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ದೇಶಿಯ ಬಿಲ್ಲು- ಬಾಣ ಸ್ಪರ್ಧೆಯನ್ನು ಮಾಡಲಾಯಿತು. ವಿದ್ಯಾರ್ಥಿಯೊಬ್ಬ ಬಿಲ್ಲನ್ನು ಹಿಡಿದು ಬಾಣವನ್ನು ಏರಿಸಿ ಗುರಿಯನ್ನು ಸಾಧಿಸಲು ಹವಣಿಸುತ್ತಿರುವುದು ಹೀಗೆ.

ಬಂದೂಕಿನ ಗುರಿ ಸಾಧನೆಯ ಕೌಶಲ

ಬಂದೂಕಿನ ಗುರಿ ಸಾಧನೆಯ ಕೌಶಲ

ವಿದ್ಯಾರ್ಥಿಗಳಿಗೆ ಐವತ್ತು ಅಡಿ ಅಳತೆಯಲ್ಲಿ ಇರುವ ಗುರಿಪಟದಲ್ಲಿ ಬಂದೂಕಿನ ಗುಂಡು ಮಧ್ಯಕ್ಕೆ ತಲುಗಲುವಂತೆ ಗುರಿಯಿಡಲು ಸಹಾಯ ಮಾಡಿದ ತರಬೇತಿ ದಾರರ ಆಣತಿಯಂತೆ ಬಂದೂಕು ಹಿಡಿದು ಗುರಿಯಿಡುತ್ತಿರುವ ವಿದ್ಯಾರ್ಥಿ.

ನಿಲುವು ಕಂಬದ ಸಾಹಸಿಗರು

ನಿಲುವು ಕಂಬದ ಸಾಹಸಿಗರು

ಹದಿನೈದು ಅಡಿ ಎತ್ತರದ ನಿಲುವು ಕಂಬದ ಮೇಲೆ ಸ್ಕೌಟ್ ವಿದ್ಯಾರ್ಥಿಗಳು ಸರಾಗವಾಗಿ ಹತ್ತಿ ಹಲವು ರೀತಿಯ ಸಾಹಸ ಬಂಗಿಗಳನ್ನು ತೋರತ್ತಾ ಧೈರ್ಯವನ್ನು ಮೆರೆದರು.

ಮಾನವ ಪರಿಮಿಡ್ ನಲ್ಲಿ ವಿದ್ಯಾರ್ಥಿಗಳು

ಮಾನವ ಪರಿಮಿಡ್ ನಲ್ಲಿ ವಿದ್ಯಾರ್ಥಿಗಳು

ಸ್ಕೌಟ್ಸ್ ಮತ್ತು ಗೈಡ್ ನ ಅನೇಕ ವಿದ್ಯಾರ್ಥಿಗಳು ಸೇರಿ ಅನೇಕ ಮಾದರಿಯ ಪಿರಮಿಡ್ ನಿರ್ಮಿಸಿ ಜನರಲ್ಲಿ ಅಚ್ಚರಿ ಮೂಡಿಸಿಡಿದರು. ಪ್ರತಿಯೊಂದು ಪಿರಮಿಡ್ ನಲ್ಲಿಯೂ ಕೊನೆಗೆ ದೇಶಕ್ಕೆ ಗೌರವ ಅರ್ಪಿಸುತ್ತಿದ್ದರು.

ಪಾರದರ್ಶಕ ಚೆಂಡಿನೊಂದಿಗೆ ಸುತ್ತಾಟ

ಪಾರದರ್ಶಕ ಚೆಂಡಿನೊಂದಿಗೆ ಸುತ್ತಾಟ

ದೊಡ್ಡ ಗಾತ್ರದ ಚೆಂಡಿನೊಳಗೆ ಇಬ್ಬರು ವಿದ್ಯಾರ್ಥಿಗಳನ್ನು ಇರಿಸಿ ಹಿಂದಿನಿಂದ ಅನೇಕ ವಿದ್ಯಾರ್ಥಿಗಳು ಆ ಚೆಂಡನ್ನು ಮುಂದೆ ಮುಂದೆ ನೂಕುತ್ತಿದ್ದರೆ ಒಳಗಿರುವ ವಿದ್ಯಾರ್ಥಿಗಳಿಗೆ ಪ್ರಪಂಚವೇ ತಿರುಗಿದಂತೆ ಭಾಸವಾಗುತ್ತಿತ್ತು. ತರಬೇತಿ ದಾರರು ಜೊತೆಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
17th National Festival of jamburi, in the Festival have special stunt show, various types of exhibitions, sports, adventure.
Please Wait while comments are loading...