ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ನಾಡಹಬ್ಬಕ್ಕೆ ಗಜಪಡೆ ಸಿದ್ಧ: ಈ ಬಾರಿ ಹೆಣ್ಣಾನೆಯ ಕೊರತೆ!

By Yashaswini
|
Google Oneindia Kannada News

ಮೈಸೂರು, ಜುಲೈ 14 : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ 16 ಆನೆಗಳ ಸಂಭಾವ್ಯ ಪಟ್ಟಿ ಸಿದ್ಧವಾಗಿದೆ. ಗಜಪಡೆಗೆ ಹೊಸದಾಗಿ 3 ಆನೆಗಳ ಸೇರ್ಪಡೆಗೆ ಒಪ್ಪಿಗೆ ನೀಡಿ, 16 ಆನೆ ಹೆಸರನ್ನು ಶಿಫಾರಸು ಮಾಡಿ ಪಿಸಿಸಿಎಫ್ ಗೆ ರವಾನಿಸಲಾಗಿದೆ.

ನಾಡಹಬ್ಬ ದಸರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ದಸರಾ ಮೆರವಣಿಗೆಗೆ ಗಜಪಡೆಯನ್ನು ಸಿದ್ಧಗೊಳಿಸಲು ಸದ್ದಿಲ್ಲದೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಹೆಚ್ಚುವರಿಯಾಗಿ 4 ಆನೆಗಳನ್ನು ಸೇರಿಸುವ ತೀರ್ಮಾನ ಮಾಡಿದೆ.

ಮೊದಲ ಪತ್ನಿಗೆ ಕೈ ಕೊಟ್ಟು ಎರಡನೇ ಮದುವೆಗೆ ಮುಂದಾದ ಮಹಾಶಯಮೊದಲ ಪತ್ನಿಗೆ ಕೈ ಕೊಟ್ಟು ಎರಡನೇ ಮದುವೆಗೆ ಮುಂದಾದ ಮಹಾಶಯ

ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದ ಸಭಾಂಗಣದಲ್ಲಿ ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರುಣಾಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ವೈದ್ಯರು ಸಿದ್ಧಪಡಿಸಿದ್ದ ಆನೆಗಳ ಪಟ್ಟಿಯನ್ನು ಪರಿಶೀಲಿಸಿ, 16 ಆನೆಗಳನ್ನು ಅವುಗಳ ಸಾಮರ್ಥ್ಯದ ಮೇಲೆ ಆಯ್ಕೆ ಮಾಡಲಾಯಿತು.

16 jumbos, including , 4 new ones, shortlisted for Dasara

ಪಟ್ಟಿಯಲ್ಲಿರುವ ಆನೆಗಳಿವು...
ಜಂಬೂ ಪಡೆಯ ನಾಯಕ, ಚಿನ್ನದ ಅಂಬಾರಿ ಹೊರುವ ಅರ್ಜುನ (ಬಳ್ಳೆ), ಬಲರಾಮ, ಗೋಪಾಲ ಸ್ವಾಮಿ (ಮತ್ತಿಗೂಡು), ಕಾವೇರಿ, ವಿಕ್ರಮ, ಗೋಪಿ, ಹರ್ಷ, ಪ್ರಶಾಂತ, ಅಜೇಯ (ದುಬಾರೆ), ವಿಜಯ (ಆನೆಕಾಡು), ಗಜೇಂದ್ರ (ಕೆ.ಗುಡಿ) ಹಾಗೂ ಸರಳಾ ಜತೆಗೆ ವರಲಕ್ಷ್ಮಿ, ಕೃಷ್ಣ, ದೋಣ, ಭೀಮ ಆನೆಗಳು ಸೇರಿವೆ. ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಆನೆಗಳ ಪಟ್ಟಿಯನ್ನು ಕಳುಹಿಸಿಕೊಡಲಾಗಿದ್ದು, ಅವರು ಯಾವ ಆನೆಗಳು ಭಾಗವಹಿಸಲು ಅರ್ಹ ಎಂಬುದನ್ನು ಅಂತಿಮಗೊಳಿಸಲಿದ್ದಾರೆ 15-16 ವರ್ಷದಿಂದ ಮೆರವಣಿಗೆಯಲ್ಲಿ ಭಾಗವಹಿಸಿ ಅನುಭವವಿರುವ ವರಲಕ್ಷ್ಮಿಯನ್ನು ಮತ್ತೆ ದಸರಾ ಗಜಪಡೆಗೆ ಸೇರಿಸಲಾಗಿದೆ. ವರಲಕ್ಷ್ಮಿ ಹೆಣ್ಣು ಆನೆಮರಿಗೆ ಜನ್ಮ ನೀಡಿದ್ದ ಹಿನ್ನೆಲೆಯಲ್ಲಿ ಕಳೆದೆರಡು ವರ್ಷಗಳಿಂದ ದಸರಾದಲ್ಲಿ ಭಾಗವಹಿಸಿರಲಿಲ್ಲ. ಗರ್ಭಿಣಿಯಾಗಿರುವ ದುರ್ಗಾಪರಮೇಶ್ವರಿ ಬದಲಿಗೆ ಅನುಭವಿಯಾದ ಆನೆ ಸರಳಾಳನ್ನು ಆಯ್ಕೆ ಮಾಡಲಾಗಿದೆ. ಉಳಿದಂತೆ ಕೃಷ್ಣ, ದ್ರೋಣ, ಭೀಮ ಹೊಸ ಸೇರ್ಪಡೆ.

ಚಾಮುಂಡಿ ಬೆಟ್ಟ ಕಾಲ್ನಡಿಗೆಯಲ್ಲಿ ಹತ್ತಿದ ಕರಂದ್ಲಾಜೆ, ಸಿದ್ದು ವಿರುದ್ಧ ಸಿಟ್ಟುಚಾಮುಂಡಿ ಬೆಟ್ಟ ಕಾಲ್ನಡಿಗೆಯಲ್ಲಿ ಹತ್ತಿದ ಕರಂದ್ಲಾಜೆ, ಸಿದ್ದು ವಿರುದ್ಧ ಸಿಟ್ಟು

ಆಗಸ್ಟ್ 10 ಕ್ಕೆ ಮೈಸೂರಿಗೆ ಗಜಪಡೆ
ಈ ಸಾಲಿನ ದಸರಾ ಮಹೋತ್ಸವ ಸೆ.21ರಿಂದ 30ರವರೆಗೆ ನಡೆಯಲಿದೆ. ಮೊದಲ ತಂಡದ ಗಜಪಡೆ ವಿವಿಧ ಆನೆ ಶಿಬಿರಗಳಿಂದ ಮೈಸೂರಿಗೆ ಆಗಸ್ಟ್ 10ಕ್ಕೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸ್ಥಿತಿ, ಸದೃಢತೆ ಸೇರಿದಂತೆ ಆನೆಗಳನ್ನು ವಿವಿಧ ಆಯಾಮಗಳಲಿ ಪರೀಕ್ಷೆಗೊಳಪಡಿಸಲಾಗಿದೆ. ಪ್ರತಿ ಬಾರಿಯೂ ದಸರಾ ಮಹೋತ್ಸವದಲ್ಲಿ 12 ಆನೆಗಳು ಪಾಲ್ಗೊಳ್ಳುವುದು ವಾಡಿಕೆ.

ಈ ಬಾರಿ 2ರಿಂದ 4 ಆನೆಗಳನ್ನು ಹೆಚ್ಚುವರಿಯಾಗಿ ಸೇರಿಸುವ ಇರಾದೆ ಅರಣ್ಯ ಇಲಾಖೆಗೆ ಇದೆ. ಕುಮ್ಕಿ ಆನೆ ವಿಜಯ ಬದಲಿಗೆ ವರಲಕ್ಷ್ಮಿ ಮತ್ತೆ ಸ್ಥಾನ ಪಡೆಯುವ ಸಾಧ್ಯತೆ ಇದೆ. ಕಳೆದ 2-3 ವರ್ಷದಿಂದ ಸಿಡಿಮದ್ದಿನ ತಾಲೀಮು ನಡೆಸುವ ವೇಳೆ ಬೆದರುವುದು ಹಾಗೂ ಜಂಬೂಸವಾರಿಯ ಮುನ್ನಾ ದಿನ ಅನಾರೋಗ್ಯಕ್ಕೀಡಾಗುವುದು ಸೇರಿದಂತೆ ಕೆಲ ಕಾರಣಗಳಿಂದ ಎರಡು ಆನೆಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಕಳೆದ ಬಾರಿ ಕೇವಲ 10 ಆನೆಗಳು ಭಾಗವಹಿಸಿದ್ದವು. ಎರಡು ವರ್ಷದ ಹಿಂದೆ ಕೆಂಚಾಂಬ ಆನೆ ಸಿಡಿಮದ್ದಿನ ಶಬ್ದಕ್ಕೆ ಹೆದರಿದ್ದ ಕಾರಣ ಆ ಆನೆಯನ್ನು ಮೆರವಣಿಗೆಯಿಂದ ದೂರ ಇಡಲಾಗಿತ್ತು.

ಕಳೆದ ವರ್ಷ ಗೋಪಾಲಸ್ವಾಮಿ ಆನೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆ ಗಳಿಗೆಯಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿಲ್ಲ. ಹೀಗಾಗಿ ಅರಣ್ಯ ಇಲಾಖೆ ಈ ಬಾರಿ ಎರಡು ಅಥವಾ ನಾಲ್ಕು ಹೆಚ್ಚುವರಿ ಆನೆಗಳನ್ನು ಕರೆತರಲು ನಿರ್ಧರಿಸಿದೆ. ಆದರೆ ಮೆರವಣಿಗೆಯಲ್ಲಿ 12 ಆನೆಗಳು ಮಾತ ಪಾಲ್ಗೊಳ್ಳಲಿವೆ. ಆನೆಗಳ ಆರೋಗ್ಯ ಸ್ಥಿತಿ, ದೈಹಿಕ ಸದೃಡತೆ, ವಯಸ್ಸು, ದೃಷ್ಟಿ, ನಡವಳಿಕೆ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡಿರುವ ಅನುಭವ, ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಆನೆಗಳನ್ನು ಆಯ್ಕೆ ಮಾಡಲಾಗಿದೆ ಎನ್ನುತ್ತಾರೆ ಆನೆಗಳ ಆರೋಗ್ಯದ ಉಸ್ತುವಾರಿ ಡಾ. ನಾಗರಾಜು.

ದಸರೆಗೆ ಹೆಣ್ಣಾನೆಯದ್ದೇ ಕೊರತೆ :
ಇನ್ನು ಜಂಬೂಸವಾರಿಗೆ ಪಾಲ್ಗೊಳ್ಳುವ ಆನೆಗಳ ಆಯ್ಕೆಗೆ ಹೆಣ್ಣಾನೆಗಳ ಕೊರತೆ ತೀವ್ರ ಕಾಡಿದೆ. 74 ವರುಷದ ಸರಳಾ ಹಾಗೂ 64 ವರುಷದ ವರಲಕ್ಷ್ಮೀ ಆನೆಯನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ, ಅಂತಿಮ ಒಪ್ಪಿಗೆಗೆ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿಗೆ ಸಲ್ಲಿಸಲಾಗಿದೆ. ದಸರೆಯಲ್ಲಿ ಗಂಡಾನೆಗಳು ಸರಾಗವಾಗಿ ಹೆಜ್ಜೆ ಹಾಕಲು ಹೆಣ್ಣಾನೆಗಳು ಇರಲೇಬೇಕು. ಇಲ್ಲದಿದ್ದರೆ ಕಷ್ಟಸಾಧ್ಯವೇ ಸರಿ. ಬಳ್ಳೆ, ಮತ್ತಿಗೋಡು, ದುಬಾರೆ, ಕೆ ಗುಡಿ ಸೇರಿದಂತೆ ಮೊದಲಾದ ಆನೆ ಶಿಬಿರಗಳಲ್ಲಿ ಹೆಣ್ಣಾನೆಗಳ ಸಂಖ್ಯೆ ಕಡಿಮೆ ಇದೆ. ಇರುವ ಹೆಣ್ಣಾನೆಗಳ ಪೈಕಿ ಹಲವು ಗರ್ಭಿಣಿಯಾಗಿದ್ದರೆ, ಮತ್ತೆ ಕೆಲವು ಮರಿಗಳಿಗೆ ಜನ್ಮ ನೀಡಿದೆ.

ಮರಿಗಳಿಗೆ ಜನ್ಮ ನೀಡಿದ ಕನಿಷ್ಠ 2 ವರುಷಗಳ ಕಾಲ ಮರಿಯಿಂದ ತಾಯಿಯನ್ನು ಬೇರ್ಪಡಿಸುವಂತಿಲ್ಲ. ಇದರಿಂದ ಹೆಣ್ಣಾನೆಗಳನ್ನು ಹುಡುಕುವುದೇ ದುಸ್ತರವಾಗಿದೆ. ಇದರಿಂದ ವಯೋವೃದ್ಧ ಆನೆಗಳನ್ನೇ ಬಳಸಲೇಬೇಕಾದ ಸ್ಥಿತಿ ಎದುರಾಗಿದೆ ಎಂದು ಬಲ್ಲಮೂಲಗಳು 'ಒನ್ ಇಂಡಿಯಾ'ಗೆ ತಿಳಿಸಿದೆ.

English summary
2017 Dasara celebrations, authorities have shortlisted 16 elephants, including five new ones, to get approval from the Principal Chief Conservator of Forest, Bengaluru. The Dasara is scheduled from September 21 to 30. Last year, 12 elephants had taken part in the celebrations. This year, the Forest Department has decided to increase the number of elephants.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X