ಹಸಿರು ಬೆಳೆಸಿ, ನೀರು ಉಳಿಸಿ : ಇದು ಮೈಸೂರು ದಸರಾ ಥೀಮ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮೈಸೂರು, ಆಗಸ್ಟ್ 10: ವಿಶ್ವವಿಖ್ಯಾತ ಮೈಸೂರು ದಸರಾವನ್ನು ಅಕ್ಟೋಬರ್ 1 ರಿಂದ 11 ರ ವರೆಗೆ ಒಟ್ಟು ಹನ್ನೊಂದು ದಿನ ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 21ರಂದು ಹುಣಸೂರಿನ ವೀರನಹೊಸಳ್ಳಿಯಿಂದ ಹೊರಡುವ ಗಜಪಯಣ ಅಶೋಕಪುರಂನಲ್ಲಿರುವ ಅರಣ್ಯಭವನಕ್ಕೆ ಆಗಮಿಸಲಿದೆ. ಆಗಸ್ಟ್ 26ರಂದು ಆನೆಗಳನ್ನು ಅರಮನೆಯಲ್ಲಿ ಸ್ವಾಗತಿಸಲಾಗುವುದು ಎಂದರು.

14.25 crore estimation submited for Dasara, Mysore

ನಾಡೋಜ, ಕವಿ ಚೆನ್ನವೀರ ಕಣವಿ ಅವರು ದಸರಾ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಆಗಸ್ಟ್ 16ರಂದು ದಸರಾ ವೆಬ್‍ಸೈಟಿಗೆ ಚಾಲನೆ ನೀಡಲಾಗುವುದು. ಈ ಬಾರಿ ದಸರಾವನ್ನು ವಿಷಯಾಧಾರಿತವಾಗಿ ಆಚರಿಸಲು ಯೋಜಿಸಿದ್ದು, ಹಸಿರು ಹಾಗೂ ನೀರಿನ ಸಂರಕ್ಷಣೆ ಮುಖ್ಯ ವಿಷಯವಾಗಿರಲಿದೆ.

ನಗರದಲ್ಲಿರುವ ಅರಮನೆ ಸೇರಿದಂತೆ ಮೈಸೂರಿನ ಸುತ್ತಮುತ್ತ 7 ರಿಂದ 8 ಅರಮನೆಗಳಿದ್ದು, ಇವುಗಳನ್ನೂ ಜನಾಕರ್ಷಿತ ಪ್ರದೇಶವಾಗಿ ಅಭಿವೃದ್ಧಿಗೊಳಿಸಲಾಗುವುದು. ಇದರಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ.

ದಸರೆ ಆಚರಣೆಗಾಗಿ ಜಿಲ್ಲಾಡಳಿತದಿಂದ 14.25 ಕೋಟಿ ರು. ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಇದರಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ದಸರೆ ಆಚರಣೆಗೆ 1 ಕೋಟಿ ಹಾಗೂ ಶ್ರೀರಂಗಪಟ್ಟಣದಲ್ಲಿ ದಸರಾ ಆಚರಣೆಗೆ 50 ಲಕ್ಷ ವೆಚ್ಚವೂ ಸೇರಿದೆ ಎಂದರು.

14.25 crore estimation submited for Dasara, Mysore

ಆಹಾರ ಮೇಳದಲ್ಲಿ ಹೆಚ್ಚಿನ ಜನರು ಭಾಗವಹಿಸುವುದರಿಂದ ಈ ಬಾರಿ 2 ಸ್ಥಳದಲ್ಲಿ ಆಹಾರ ಮೇಳ ಆಯೋಜಿಸಲಾಗುವುದು. ಆಹಾರ ಉಪಸಮಿತಿಯವರು ಚರ್ಚಿಸಿ, ಸಾರ್ವಜನಿಕರಿಗೆ ಉಪಯುಕ್ತವಾಗುವ ಸ್ಥಳಗಳನ್ನು ಗುರುತಿಸಲಿದ್ದಾರೆ ಎಂದರು.

ಸಣ್ಣ ವಿಮಾನ, ಹೆಲಿಕಾಪ್ಟರ್ ವ್ಯವಸ್ಥೆ: ದೇಶ- ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ದಸರಾ ಸಂದರ್ಭದಲ್ಲಿ ಸಣ್ಣ ವಿಮಾನ ಹಾಗೂ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗುವುದು. ಮುಖ್ಯ ಸ್ಥಳಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆದು ದಸರಾ ಹಾಗೂ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ನೀಡಲಾಗುವುದು ಎಂದರು.

ಸ್ವಾಗತ ಮತ್ತು ಆಮಂತ್ರಣ, ಮೆರವಣಿಗೆ, ಪಂಜಿನ ಕವಾಯತು, ಸ್ತಬ್ಧಚಿತ್ರ, ರೈತ ಮತ್ತು ಗ್ರಾಮೀಣ ದಸರಾ, ಕ್ರೀಡಾ, ಸಾಂಸ್ಕೃತಿಕ, ಲಲಿತಕಲೆ ಮತ್ತು ಕರಕುಶಲ ಕಲೆ, ಯುವ ದಸರಾ, ಮಹಿಳಾ ಮತ್ತು ಮಕ್ಕಳ ದಸರಾ, ಆಹಾರ ಮೇಳ, ಸ್ವಚ್ಛತಾ ಸಮಿತಿ, ಯೋಗ ದಸರಾ, ಚಲನಚಿತ್ರ ದಸರಾ ದರ್ಶನ, ಕುಸ್ತಿ, ದೀಪಾಲಂಕಾರ ಹಾಗೂ ಕವಿಗೋಷ್ಠಿ ಸೇರಿದಂತೆ ಇತರ ಕಾರ್ಯಕ್ರಮಗಳ ಅಯೋಜನೆಗೆ ಉಪಸಮಿತಿಗಳನ್ನು ರಚಿಸಿ, ಜವಾಬ್ದಾರಿ ವಹಿಸಲಾಗುವುದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mysore District administration submited 14.25 crore estimation for Dasara celbration. Karnataka government decided to celebrate Dasara hugely.
Please Wait while comments are loading...