ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರದಲ್ಲಿ ಝಿಕಾ ವೈರಸ್ ನಿಯಂತ್ರಣಕ್ಕೆ ಕೇಂದ್ರದಿಂದ ತಜ್ಞರ ತಂಡ

|
Google Oneindia Kannada News

ಮುಂಬೈ, ಆಗಸ್ಟ್ 2: ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಝಿಕಾ ವೈರಸ್ ಸೋಂಕಿತ ಪ್ರಕರಣ ಪತ್ತೆಯಾಗಿರುವುದರ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯವು ಉನ್ನತ ಮಟ್ಟದ ಶಿಸ್ತು ಸಮಿತಿಯೊಂದನ್ನು ರಾಜ್ಯಕ್ಕೆ ಕಳುಹಿಸಿ ಕೊಟ್ಟಿದೆ. ಈ ಸಮಿತಿಯು ಝಿಕಾ ವೈರಸ್ ಸೋಂಕಿನ ಹರಡುವಿಕೆ ಮತ್ತು ನಿರ್ವಹಣೆಯಲ್ಲಿ ರಾಜ್ಯ ಸರ್ಕಾರಕ್ಕೆ ನೆರವಾಗಲಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಆತಂಕದ ನಡುವೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಝಿಕಾ ವೈರಸ್ ಭೀತಿ ಶುರುವಾಗಿದೆ. ಕೇರಳದಲ್ಲಿ ಕಾಣಿಸಿಕೊಂಡಿರುವ ಝಿಕಾ ವೈರಸ್ ತಮಿಳುನಾಡು ಹಾಗೂ ಕರ್ನಾಟಕಕ್ಕೆ ಹರಡುವ ಅಪಾಯ ಹೆಚ್ಚಾಗಿದೆ.

ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?ಮಹಾರಾಷ್ಟ್ರ, ಕೇರಳದಲ್ಲಿ ಝಿಕಾ ವೈರಸ್‌ ಭೀತಿ: ಕೋವಿಡ್‌ ಸೋಂಕಿಗೂ ಝಿಕಾಗೂ ಏನಿದೆ ನಂಟು?

ಇತ್ತೀಚಿಗಷ್ಟೇ ಪುಣೆ ಜಿಲ್ಲೆಯಲ್ಲಿ ಝಿಕಾ ವೈರಸ್ ಸೋಂಕಿತ ಪ್ರಕರಣವೊಂದು ಪತ್ತೆಯಾಗಿರುವ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಿತ್ತು. ಪುಣೆಯ ಪುರಂದರ ಪ್ರದೇಶದ ಬೆಲ್ಸಾರ್ ಗ್ರಾಮದಲ್ಲಿ 50 ವರ್ಷದ ವೃದ್ಧೆಗೆ ಝಿಕಾ ವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಮೆಯಲ್ಲಿ ದೃಢಪಟ್ಟಿತ್ತು. ಝಿಕಾ ವೈರಸ್ ಅಲ್ಲದೇ ಅದೇ ಮಹಿಳೆಯು ಚಿಕುನ್ ಗುನ್ಯಾ ರೋಗದಿಂದಲೂ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ.

 Zika Virus in Maharashtra : Centre Ministry Sended High-level Team After First Case Report in Pune

ಕುಟುಂಬ ಸದಸ್ಯರಲ್ಲಿ ಇಲ್ಲ ರೋಗದ ಆತಂಕ:

ಝಿಕಾ ವೈರಸ್ ಮತ್ತು ಚಿಕುನ್ ಗುನ್ಯಾದಿಂದ ಬಳಲುತ್ತಿರುವ 50 ವರ್ಷದ ವೃದ್ಧೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ. ಅಲ್ಲದೇ ಈ ಕುಟುಂಬದ ಯಾವುದೇ ಸದಸ್ಯರಿಗೆ ಝಿಕಾ ವೈರಸ್ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಮಹಾರಾಷ್ಟ್ರಕ್ಕೆ ಮೂವರು ಸದಸ್ಯರ ತಜ್ಞರ ತಂಡ:

ಕೇಂದ್ರ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವಾಲಯ ಕಳುಹಿಸಿದ ಮೂರು ಸದಸ್ಯರ ತಂಡದಲ್ಲಿ ಪುಣೆಯ ಪ್ರಾದೇಶಿಕ ನಿರ್ದೇಶಕರ ಕಚೇರಿಯ ಸಾರ್ವಜನಿಕ ಆರೋಗ್ಯ ತಜ್ಞ, ನವದೆಹಲಿ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ಸ್ತ್ರೀರೋಗ ತಜ್ಞರು ಮತ್ತು ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆಯ ಕೀಟಶಾಸ್ತ್ರಜ್ಞರನ್ನು ಒಳಗೊಂಡಿದೆ. ಈ ಉನ್ನತ ಸಮಿತಿಯು ಮಹಾರಾಷ್ಟ್ರ ಆರೋಗ್ಯ ಇಲಾಖೆ ಜೊತೆಗೂಡಿ ಕೆಲಸ ಮಾಡುತ್ತದೆ. ಝಿಕಾ ವೈರಸ್ ನಿರ್ವಹಣೆ ಮತ್ತು ನಿಯಂತ್ರಣಕ್ಕೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕ್ರಮಗಳನ್ನು ಶಿಸ್ತುಬದ್ಧವಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ. ಅದಾಗ್ಯೂ, ಝಿಕಾ ವೈರಸ್ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯವಾಗಿತ್ತದೆ.

ಝಿಕಾ ವೈರಸ್ ಎಂದರೇನು, ರೋಗ ಹರಡುವುದು ಹೇಗೆ?

ಡೆಂಘೀ ಹಾಗೂ ಚಿಕುನ್ ಗುನ್ಯಾ ರೋಗದ ರೀತಿಯಲ್ಲೇ ಝಿಕಾ ವೈರಸ್ ಕೂಡಾ ಸೊಳ್ಳೆ ಕಚ್ಚುವಿಕೆಯಿಂದ ಹರಡುತ್ತದೆ. ಏಡೆಸ್ ಜೆನಸ್ ಎಂಬ ಸೊಳ್ಳೆ ಕಚ್ಚುವುದರಿಂದ ಈ ಸೋಂಕು ಹರಡುತ್ತದೆ ಎಂದು ತಿಳಿದು ಬಂದಿದೆ. ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ಈ ಏಡೆಸ್ ಜೆನಸ್ ಎಂಬ ಸೊಳ್ಳೆಗಳು ಹೆಚ್ಚು ಕ್ರೀಯಾಶೀಲವಾಗಿರುತ್ತವೆ. ಈ ಸೊಳ್ಳೆ ಕಚ್ಚುವುದರಿಂದ ಮನುಷ್ಯರಿಗೆ ಝಿಕಾ ವೈರಸ್ ಸೋಂಕು ತಗುಲುತ್ತದೆ ಎಂದು ತಿಳಿದು ಬಂದಿದೆ.

ಝಿಕಾ ವೈರಸ್ ರೋಗದ ಲಕ್ಷಣಗಳು ಏನೇನು?:

ಕೊರೊನಾವೈರಸ್ ರೀತಿಯಲ್ಲಿ ಝಿಕಾ ವೈರಸ್ ಜೀವ ತೆಗೆಯುವಷ್ಟು ಅಪಾಯಕಾರಿ ವೈರಸ್ ಅಲ್ಲ ಎಂದು ಹೇಳಲಾಗುತ್ತಿದೆ. ಎರಡರಿಂದ ಏಳು ದಿನಗಳವರೆಗೆ ಈ ರೋಗಕ್ಕೆ ಸಂಬಂಧಿಸಿದ ಹಲವು ಲಕ್ಷಣಗಳು ಗೋಚರಿಸುತ್ತವೆ. ಈ ಸೋಂಕಿನಿಂದ ಸಾವು ಸಂಭವಿಸುವ ಅಪಾಯ ಕಡಿಮೆಯಾಗಿರುತ್ತದೆ. ಹಾಗಿದ್ದಲ್ಲಿ ಝಿಕಾ ವೈರಸ್ ರೋಗದ ಲಕ್ಷಣಗಳು ಹೇಗಿರುತ್ತವೆ ಎಂಬುದರ ಕುರಿತು ತಿಳಿದುಕೊಳ್ಳೋಣ.

* ಜಾಂಡಿಸ್ ಬಗೆಯ ಲಕ್ಷಣಗಳು ಕಾಣಿಸಿಕೊಳ್ಳುವುದು

* ಕಣ್ಣು ಕೆಂಪಗಾಗುವುದು,

* ಜ್ವರ,

* ಗಂಟು ನೋವು,

* ಕೀಲು ಮತ್ತು ಸ್ನಾಯು ನೋವು

* ತಲೆನೋವು,

* ಕೆಂಪು ಕಲೆ ಕಾಣಿಸಿಕೊಳ್ಳುವುದು

ಝಿಕಾ ವೈರಸ್ ಸೋಂಕಿತರಲ್ಲಿ ಸಾವಿನ ಭೀತಿ ಕಡಿಮೆ?:

ಕೇರಳದಲ್ಲಿ ಅತಿಯಾಗಿ ಹರಡುತ್ತಿರುವ ಝಿಕಾ ವೈರಸ್ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ತೀರಾ ವಿರಳವಾಗಿರುತ್ತದೆ. ಝಿಕಾ ವೈರಸ್ ಸೋಂಕಿನ ಲಕ್ಷಣಗಳು ಗೋಚರಿಸಿದ ಐವರಲ್ಲಿ ಒಬ್ಬರು ಮಾತ್ರ ಸಾವಿನ ಅಪಾಯವನ್ನು ಎದುರಿಸುತ್ತಾರೆ ಎಂದು ಹೇಳಲಾಗುತ್ತದೆ. 1947ರಲ್ಲಿ ಮೊದಲ ಬಾರಿಗೆ ಉಗಾಂಡಾದ ಕೋತಿಗಳಲ್ಲಿ ಈ ಝಿಕಾ ವೈರಸ್ ಕಾಣಿಸಿಕೊಂಡಿತ್ತು. 1954ರಲ್ಲಿ ಮೊದಲ ಬಾರಿಗೆ ನೈಜೀರಿಯಾದಲ್ಲಿ ಮನುಷ್ಯನಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು ಎಂದು ತಿಳಿದು ಬಂದಿದೆ.

English summary
Zika Virus in Maharashtra : Centre Ministry Sended High-level Team After First Case Report in Pune.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X