ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಕೀರ್ ನಾಯಕ್ ಎನ್ ಜಿಒ 5 ವರ್ಷಗಳ ಕಾಲ ನಿಷೇಧ

ಇಸ್ಲಾಂ ಧಾರ್ಮಿಕ ಭಾಷಣಗಾರ ಜಾಕಿರ್ ನಾಯಕ್ ಅವರ ಎನ್​ಜಿಒ ನಿಷೇಧಿಸಲಾಗಿದೆ. ಭಯೋತ್ಪಾದನಾ ವಿರೋಧಿ ಕಾನೂನಿನಡಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ಎನ್​ಜಿಒ 5 ವರ್ಷಗಳ ಕಾಲಕ್ಕೆ ನಿಷೇಧಿಸಿ ಆದೇಶ.

By Mahesh
|
Google Oneindia Kannada News

ನವದೆಹಲಿ, ನವೆಂಬರ್ 15: ಇಸ್ಲಾಂ ಧಾರ್ಮಿಕ ಭಾಷಣಗಾರ ಜಾಕಿರ್ ನಾಯಕ್ ಅವರ ಎನ್​ಜಿಒ ನಿಷೇಧಿಸಲಾಗಿದೆ. ಭಯೋತ್ಪಾದನಾ ವಿರೋಧಿ ಕಾನೂನಿನಡಿ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ಎನ್​ಜಿಒ 5 ವರ್ಷಗಳ ಕಾಲಕ್ಕೆ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಆದೇಶ ಹೊರಡಿಸಿದೆ.

ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಹಾಗೂ ಜಾಕೀರ್ ನಾಯ್ಕ್ ಅವರ ಪೀಸ್ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಗೆ ಉತ್ತೇಜನ ನೀಡಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಕ್ರಮ ಜರುಗಿಸಲು ಗೃಹ ಸಚಿವಾಲಯ ಮುಂದಾಗಿದೆ.

Zakir Naik's NGO banned for five years

ಧರ್ಮ ಪ್ರಚಾರಕ ಜಾಕಿರ್ ನಾಯಕ್ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕ್ರಿಮಿನಲ್ ಕೇಸ್ ಗಳನ್ನು ದಾಖಲಿಸಿದ್ದಾರೆ. ಜಾಕಿರ್ ನಾಯಕ್ ಅವರ ಎರಡು ವಿದ್ಯಾ ಸಂಸ್ಥೆ, ಎನ್ಜಿಒ, ಟಿವಿ ವಾಹಿನಿ ವಿರುದ್ಧವೂ ಪ್ರಕರಣಗಳಿವೆ.

ಮುಖ್ಯವಾಗಿ ಸರ್ಕಾರೇತರ ಸಂಸ್ಥೆಯಾದ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್(ಐಆರ್ ಎಫ್) ನಿಂದ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ(ಎಫ್ ಸಿಆರ್ ಎ) 2010ರ ಉಲ್ಲಂಘನೆಯಾಗಿದೆ. ಕಾನೂನು ಉಲ್ಲಂಘನೆ, ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು, ಮುಂತಾದ ಆರೋಪಗಳು ಐಆರ್ಎಫ್ ಮೇಲಿದೆ.

English summary
The government has banned controversial preacher Dr Zakir Naik's NGO the Islamic Research Foundation (IRF) for five years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X