ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 28ಕ್ಕೆ ಯೆಸ್ ಬ್ಯಾಂಕ್ ರಾಣಾ ಪತ್ನಿ, ಪುತ್ರಿಯರ ಜಾಮೀನು ಅರ್ಜಿ ತೀರ್ಪು

|
Google Oneindia Kannada News

ಮುಂಬೈ, ಸೆಪ್ಟೆಂಬರ್ 23: ದಿವಾನ್ ಹೌಸಿಂಗ್ ಫೈನಾನ್ಶಿಯಲ್ ಲಿಮಿಟೆಡ್ (DHFL) ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರ ಪತ್ನಿ ಬಿಂದು ಕಪೂರ್ ಮತ್ತು ಪುತ್ರಿಯರಾದ ರಾಧಾ ಕಪೂರ್ ಮತ್ತು ರೋಶಿನಿ ಕಪೂರ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಇದರ ಬೆನ್ನಲ್ಲೇ ಬಾಂಬೆ ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದು ತಿಳಿದಿರಬಹುದು. ಇದರ ಜೊತೆಗೆ ಸಿಬಿಐ ತಮ್ಮನ್ನು ವಶಕ್ಕೆ ಪಡೆಯುವುದರ ವಿರುದ್ಧ ಕೂಡಾ ಮೇಲ್ಮನವಿ ಸಲ್ಲಿಸಲಾಗಿದೆ.

ಮೊದಲ ಆರೋಪಪಟ್ಟಿಯಲ್ಲಿ ಕಪೂರ್ ಜೊತೆಗೆ ರೋಶಿನಿ ಅವರನ್ನು ಆರೋಪಿಯೆಂದು ಹೆಸರಿಸಲಾಗಿತ್ತು. ಇತರ ಆರೋಪಿಗಳೊಂದಿಗೆ ಶಾಮೀಲಾಗಿರುವುದನ್ನು ಈ ಮಹಿಳೆಯರ ವಿರುದ್ಧದ ಆರೋಪಗಳು ಸಾಬೀತುಪಡಿಸಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶ ಎಸ್‌ ಯು ವಡಗಾಂವ್ಕರ್ ಅವರು ಸೆಪ್ಟೆಂಬರ್ 18 ರಂದು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದರು.

ಯೆಸ್‌ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣ: ಮೊದಲ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐಯೆಸ್‌ ಬ್ಯಾಂಕ್ ಹಣಕಾಸು ಅವ್ಯವಹಾರ ಪ್ರಕರಣ: ಮೊದಲ ಚಾರ್ಜ್‌ಶೀಟ್ ಸಲ್ಲಿಸಿದ ಸಿಬಿಐ

ಸೆಪ್ಟೆಂಬರ್ 18ರಂದು ರಾಣಾ ಕಪೂರ್ ಕುಟುಂಬ ಸದಸ್ಯರನ್ನು ಸಿಬಿಐ ಕಸ್ಟಡಿಗೆ ತೆಗೆದುಕೊಂಡಿದೆ. ಕುಟುಂಬಸ್ಥರ ಜಾಮೀನು ಅರ್ಜಿ ತೀರ್ಪನ್ನು ಸೆಪ್ಟೆಂಬರ್ 28ರಂದು ಜಸ್ಟೀಸ್ ಭಾರತಿ ಡಾಂಗ್ರೆ ನೀಡಲಿದ್ದಾರೆ. DHFL ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಬಾಕಿ ಇರುವುದರಿಂದ ಜಾಮೀನು ನೀಡಬಾರದು ಎಂದು ಸಿಬಿಐ ಹೈಕೋರ್ಟಿಗೆ ಮನವಿ ಸಲ್ಲಿಸಿದೆ.

Yes Bank’s founder Rana Kapoors wife and daughters bail plea on September 28

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ತಂಡಗಳಾದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯ ತನಿಖೆ ನಡೆಸಿವೆ. ಸಿಬಿಐ ಇತ್ತೀಚೆಗೆ ಪೂರಕ ಆರೋಪಪಟ್ಟಿ ಸಲ್ಲಿಸಿದ್ದು, ಬಿಂದು ಮತ್ತು ರಾಧಾ ಕಪೂರ್ ಅವರನ್ನು ಆರೋಪಿಗಳೆಂದು ಹೆಸರಿಸಿತ್ತು. ಸಿಬಿಐ ಕಸ್ಟಡಿ ಬದಲಿಗೆ ನ್ಯಾಯಾಂಗ ಬಂಧನ ವಿಧಿಸಿ, ಜಾಮೀನು ಅರ್ಜಿ ಪುರಸ್ಕರಿಸಿ ಎಂದು ಕಪೂರ್ ಪತ್ನಿ, ಪುತ್ರಿಯರು ಹೈಕೋರ್ಟಿನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಈ ಮಧ್ಯೆ ಪ್ರತ್ಯೇಕ ಅರ್ಜಿ ಸಲ್ಲಿಸಿರುವ ಕಪೂರ್‌ ಪುತ್ರಿ ರಾಖಿ ಕಪೂರ್‌ ಟಂಡನ್‌ ಅವರು ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಯೆಸ್‌ ಬ್ಯಾಂಕ್‌ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಅನಿವಾಸಿ ಭಾರತೀಯರಾದ ತಾವು ಇಂಗ್ಲೆಂಡ್‌ನಲ್ಲಿದ್ದು ಕೋವಿಡ್‌ ಹಿನ್ನೆಲೆಯಲ್ಲಿ ಅಲ್ಲಿಂದ ಬರಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಖುದ್ದು ಹಾಜರಿಯಿಂದ ಶಾಶ್ವತವಾಗಿ ವಿನಾಯಿತಿ ನೀಡಿ, ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.

"ಅಪರಾಧದ ಗಹನತೆ ಮತ್ತು ಸ್ವರೂಪ ಪರಿಗಣಿಸಿ ಮತ್ತು ಸಮಾಜದ ದೊಡ್ಡ ಹಿತಾಸಕ್ತಿಯನ್ನು ಪರಿಗಣಿಸಿ, ಆರೋಪಿಗಳು/ ಅರ್ಜಿದಾರರು ರೂ 4000 ಕೋಟಿಗಳಷ್ಟು ದೊಡ್ಡ ಮೊತ್ತದ ಸಾರ್ವಜನಿಕ ಹಣ ನಷ್ಟ ಉಂಟಾಗಿರುವ ಪ್ರಕರಣದಲ್ಲಿ ಪಾಲುಗೊಂಡಿರುವುದರಿಂದ ಅರ್ಜಿಗಳು ತಿರಸ್ಕರಿಸಲು ಅರ್ಹವಾಗಿವೆ" ಎಂದು ವಿಶೇಷ ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಅರ್ಜಿದಾರರು ಮಹಿಳೆಯರು ಹಾಗೂ ಅವರಲ್ಲಿ ಒಬ್ಬರು ಚಿಕ್ಕ ಮಕ್ಕಳ ತಾಯಿ ಎಂಬ ವಾದವನ್ನು ನ್ಯಾಯಾಲಯ ಜಾಮೀನು ನೀಡುವ ವೇಳೆ ಒಪ್ಪಲಿಲ್ಲ. ಬದಲಿಗೆ ಸೆಪ್ಟೆಂಬರ್ 23ರವರೆಗೆ ಮಹಿಳೆಯರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಯೆಸ್ ಬ್ಯಾಂಕ್ ಮತ್ತು ಡಿಎಚ್‌ಎಫ್‌ಎಲ್‌ಗೆ ಮೋಸ ಮತ್ತು ವಂಚನೆ ಮಾಡುವ ಸಾಮಾನ್ಯ ಉದ್ದೇಶದೊಂದಿಗೆ 14 ಆರೋಪಿಗಳು ಕ್ರಿಮಿನಲ್ ಪಿತೂರಿ ನಡೆಸಿದ್ದರು ಎಂಬುದು ಸಿಬಿಐ ವಾದಿಸಿದೆ.

ಹಗರಣ ಪೀಡಿತ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಗೆ ಸಂಬಂಧಿಸಿರುವ ಒಂದು ಸಂಸ್ಥೆಯಿಂದ ಕಪೂರ್, ಅವರ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳಿಂದ 600 ಕೋಟಿ ರುಪಾಯಿ ಪಡೆದಿದ್ದರು. ಕಪೂರ್, ಅವರ ಕುಟುಂಬ ಸದಸ್ಯರು ಮತ್ತು ಇತರರು ಬೃಹತ್ ಸಾಲಗಳನ್ನು ಮಂಜೂರು ಮಾಡಲು ಕಿಕ್‌ಬ್ಯಾಕ್ ಆಗಿ ನಿಯಂತ್ರಿಸುತ್ತಿರುವ ಕಂಪನಿಗಳ ಮೂಲಕ 4,300 ಕೋಟಿ ರುಪಾಯಿ ಪಡೆದಿದ್ದರು. ನ್ಯೂಯಾರ್ಕ್, ಲಂಡನ್ ಹಾಗೂ ಮುಂಬೈನಲ್ಲಿರುವ ರಾಣಾ ಕಪೂರ್ ಹಾಗೂ ಕುಟುಂಬಸ್ಥರಿಗೆ ಸೇರಿದ ಸರಿ ಸುಮಾರು 2,200 ಕೋಟಿ ರು ಆಸ್ತಿ ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಮೂಲಗಳಿಂದ ತಿಳಿದು ಬಂದಿದೆ. ಇನ್ನೊಂದೆಡೆ, ಯೆಸ್ ಬ್ಯಾಂಕ್ ರಾಣಾ ಕಪೂರ್, ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ಮತ್ತು ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಚಾರ್ಜ್‌ಶೀಟ್ ದಾಖಲಿಸಿ, ತನಿಖೆ ಮುಂದುವರೆಸಿದೆ.

English summary
The Bombay High Court has reserved order in the bail pleas filed by Yes Bank founder, Rana Kapoor’s wife Bindu Kapoor and daughters Roshni Kapoor, and Radha Kapoor Khanna who were taken in custody on September 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X