ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏರ್‌ಪೋರ್ಟ್‌ನಲ್ಲಿ ಯೆಸ್ ಬ್ಯಾಂಕ್ ಸಂಸ್ಥಾಪಕರ ಮಗಳ ತಡೆದ ಅಧಿಕಾರಿಗಳು

|
Google Oneindia Kannada News

ಮುಂಬೈ, ಮಾರ್ಚ್ 9: ಯೆಸ್‌ಬ್ಯಾಂಕ್ ಸಂಸ್ಥಾಪಕರ ಮಗಳು ರೋಷನಿ ಕಪೂರ್ ಅವರನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ತಡೆದಿದ್ದಾರೆ.

ಯೆಸ್ ಬ್ಯಾಂಕ್ ಭ್ರಷ್ಟಾಚಾರದ ಕುರಿತು ತನಿಖೆ ನಡೆಯುತ್ತಿರುವಾಗಲೇ ಲಂಡನ್‌ಗೆ ಹೊರಟಿದ್ದ ರೋಷನಿಯನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ತಡೆದಿದ್ದಾರೆ.

ಯೆಸ್ ಬ್ಯಾಂಕ್; ರಾಣಾ ಕಪೂರ್‌ ಮಾ.11ರ ತನಕ ಇಡಿ ಕಸ್ಟಡಿಗೆಯೆಸ್ ಬ್ಯಾಂಕ್; ರಾಣಾ ಕಪೂರ್‌ ಮಾ.11ರ ತನಕ ಇಡಿ ಕಸ್ಟಡಿಗೆ

ಇಡಿ ಈಗಾಗಲೇ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಅವರನ್ನು ವಶಕ್ಕೆ ಪಡೆದಿದ್ದು ಮಾರ್ಚ್ 11ರವರೆಗೆ ಇಡಿ ಕಸ್ಟಡಿಯಲ್ಲಿಯೇ ಇರಬೇಕು. ಹಾಗೂ ರೋಷನಿ ವಿರುದ್ಧವೂ ಆರೋಪಗಳಿರುವ ಕಾರಣ ಅವರು ದೇಶವನ್ನು ಬಿಟ್ಟು ಹೋಗುವಂತಿಲ್ಲ.

Yes Bank Founders Daughter Roshni Kapoor Stopped At Mumbai Airport

ದಕ್ಷಿಣ ಮುಂಬೈನಲ್ಲಿರುವ ಇಡಿ ಕಚೇರಿಗೆ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾಕಪೂರ್ ಅವರನ್ನು ಕರೆತಂದು ತೀವ್ರ ವಿಚಾರಣೆಗೊಳಪಡಿಸಲಾಗಿದೆ.

ಕಾಳಧನ ಸಕ್ರಮ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಕಪೂರ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ. ರಾಣಾ ಕಪೂರ್ ದೇಶ ಬಿಟ್ಟು ಹೋಗದಂತೆ ತಡೆಯಲು ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ.

ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೋರೇಷನ್ (ಡಿಎಚ್ಎಫ್ಎಲ್) ಜತೆ ಯೆಸ್ ಬ್ಯಾಂಕ್ ವ್ಯವಹಾರಕ್ಕೆ ಸಂಬಂಧಿಸಿದಂತೆ ರಾಣಾ ಕಪೂರ್ ಅವರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.

ಡಿಎಚ್ಎಫ್ಎಲ್ ಸಂಸ್ಥೆಗೆ ಯೆಸ್ ಬ್ಯಾಂಕ್ ಭಾರಿ ಮೊತ್ತದ ಸಾಲ ನೀಡಿದೆ ಎನ್ನಲಾಗಿದೆ. ಈ ಸಂಬಂಧ ರಾಣಾ ಕಪೂರ್ ಅವರನ್ನು ಇಡಿ ಅಧಿಕಾರಿಗಳು ಪ್ರಶ್ನೆ ಮಾಡಿದರು.

English summary
Roshni Kapoor, daughter of Yes Bank founder Rana Kapoor, was stopped at the Mumbai airport before boarding a flight to London amid a corruption investigation into the massive crisis that has hit India's fourth-largest private lender.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X