• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವದ ದಢೂತಿ ಮಹಿಳೆ ಇಮಾನ್ ದುಬೈನಲ್ಲಿ ನಿಧನ

|

ನವದೆಹಲಿ, ಸೆಪ್ಟೆಂಬರ್ 25: ವಿಶ್ವದ ಅತಿ ದಢೂದಿ ಮಹಿಳೆಯೆಂದೇ ಖ್ಯಾತಿ ಗಳಿಸಿದ್ದ, ಈಜಿಪ್ಟ್ ನ ಇಮಾನ್ ಅಹ್ಮದ್ (36) ಅವರು ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾಗಿದ್ದಾರೆ.

ಈಜಿಪ್ಟ್ ನ ದಢೂತಿ ಮಹಿಳೆ, ಆಪರೇಷನ್ ನಂತರ ತೊಂದರೆಯಲ್ಲಿ?ಈಜಿಪ್ಟ್ ನ ದಢೂತಿ ಮಹಿಳೆ, ಆಪರೇಷನ್ ನಂತರ ತೊಂದರೆಯಲ್ಲಿ?

ಸುಮಾರು 500 ಕೆಜಿ ತೂಕ ಇದ್ದ ಇಮಾನ್, ತೂಕ ಇಳಿಸಿಕೊಳ್ಳುವ ಚಿಕಿತ್ಸೆಗಾಗಿ ಮುಂಬೈಗೆ ಆಗಮಿಸಿದ್ದರು. ಈಜಿಪ್ಟ್ ನ ಅಲೆಕ್ಸಾಂಡ್ರಿಯಾದಿಂದ ಮುಂಬೈಗೆ ಆಗಮಿಸಿದ್ದ ಅವರು, ಆನಂತರ ಅಬುಧಾಬಿಯ ಬುರ್ಜೀಲ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದ ಅವರು, 300 ಕೆಜಿಯಷ್ಟು ತೂಕ ಕಳೆದುಕೊಂಡಿದ್ದಾಗಿ ಹೇಳಲಾಗಿತ್ತು.

262 ಕೆಜಿ ತೂಕ ಕಳೆದುಕೊಂಡು ಹಗುರಾದ ಈಜಿಪ್ಟ್ ನ ಇಮಾನ್ ಅಹ್ಮದ್262 ಕೆಜಿ ತೂಕ ಕಳೆದುಕೊಂಡು ಹಗುರಾದ ಈಜಿಪ್ಟ್ ನ ಇಮಾನ್ ಅಹ್ಮದ್

ಆದರೆ, ಭಾರತೀಯ ಕಾಲಮಾನದ ಪ್ರಕಾರ, ಸೋಮವಾರ ಬೆಳಗಿನ ಜಾವ ಸುಮಾರು 4:35ರ ಸುಮಾರಿಗೆ ಅವರು ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ದೇಹದ ತೂಕದ ಜತೆಯಲ್ಲೇ ಅವರು ಹೃದಯ, ಕಿಡ್ನಿಗಳ ಸಮಸ್ಯೆಯನ್ನೂ ಹೊಂದಿದ್ದರಿಂದಾಗಿ ಸಾವು ಸಂಭವಿಸಿದೆ ಎಂದು ಹೇಳಲಾಗಿದೆ.

15 ತಜ್ಞರ ತಂಡದಿಂದ ಚಿಕಿತ್ಸೆ

15 ತಜ್ಞರ ತಂಡದಿಂದ ಚಿಕಿತ್ಸೆ

ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಇದೇ ವರ್ಷ ಫೆಬ್ರವರಿಗೆ ಬಂದು ದಾಖಲಾಗಿದ್ದ ಅವರು, ಅಲ್ಲಿ ತಜ್ಞ ವೈದ್ಯರಾದ ಮುಫಾಜಲ್ ಲಾಕ್ಡಾವಾಲಾ ಅವರ ನೇತೃತ್ವದ 15 ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು

ಎಚ್ಚರಿಕೆಯ ಚಿಕಿತ್ಸೆ

ಎಚ್ಚರಿಕೆಯ ಚಿಕಿತ್ಸೆ

ಇಮಾನ್ ಅವರನ್ನು ತೂಕ ಇಳಿಸುವ ಶಸ್ತ್ರಚಿಕಿತ್ಸೆಗೆ ಒಳಪಡಿಸಬೇಕಿದ್ದರಿಂದಾಗಿ ಅವರಿಗೆ ಮೊದಲು ದ್ರವ್ಯ ಆಹಾರವನ್ನೇ ನೀಡಲಾಗುತ್ತಿತ್ತು. ಅಲ್ಲದೆ, ಅವರ ಹೃದಯ ಬಡಿತ ಹಾಗೂ ಇತರ ಅಂಗಾಂಗಳ ಮೇಲೆ ದ್ರವ್ಯ ಆಹಾರದ ಯಾವುದೇ ಪರಿಣಾಮ ಬೀರದಂತೆ ಎಚ್ಚರ ವಹಿಸಲಾಗಿತ್ತು.

324 ಕೆಜಿ ತೂಕ ಕಳೆದುಕೊಂಡಿದ್ದ ಯುವತಿ

324 ಕೆಜಿ ತೂಕ ಕಳೆದುಕೊಂಡಿದ್ದ ಯುವತಿ

ಆನಂತರ, ಏಪ್ರಿಲ್ ನಲ್ಲಿ ನಡೆದ ಶಸ್ತ್ರ ಚಿಕಿತ್ಸೆಯಲ್ಲಿ ಅವರು ದೇಹದ ತೂಕವನ್ನು ಗಣನೀಯವಾಗಿ ಕಳೆದುಕೊಂಡಿದ್ದರು ಎಂದು ಹೇಳಲಾಗಿತ್ತು. ಆಗ, ಬಂದ ವರದಿಗಳ ಪ್ರಕಾರ, ಇಮಾನ್ ಅವರು, 324 ಕೆಜಿ ತೂಕವನ್ನು ಕಳೆದುಕೊಂಡಿದ್ದರು.

ಅಬಧಾಬಿಗೆ ಶಿಫ್ಟ್ ಆಗಿದ್ದ ಇಮಾನ್

ಅಬಧಾಬಿಗೆ ಶಿಫ್ಟ್ ಆಗಿದ್ದ ಇಮಾನ್

ಆದರೆ, ಕಾಲ ಕ್ರಮೇಣ ಈಕೆಯ ಚಿಕಿತ್ಸೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಅಲ್ಲದೆ, ಮುಂಬೈ ವೈದ್ಯರು ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಆರೋಪಿಸಿದ ಈಕೆಯ ಸಂಬಂಧಿಗಳು ಇಮಾನ್ ಅವರನ್ನು ಇದೇ ವರ್ಷ ಮೇ ತಿಂಗಳಿನಲ್ಲಿ ಅಬು ಧಾಬಿಯ ವರ್ಗಾವಣೆಗೊಂಡಿದ್ದರು. ಆದರೆ, ಸೈಫಿ ಆಸ್ಪತ್ರೆಯ ತಜ್ಞರು ಈ ಆರೋಪಗಳನ್ನು ತಳ್ಳಿಹಾಕಿದ್ದರು.

English summary
Eman Ahmed, formerly the 'heaviest' woman in the world, passed away at 4.35am on Sep 25, 2017, due to comorbid conditions, including heart disease and kidney dysfunction, according to medical experts at the Burjeel Hospital in Abu Dhabi, The National reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X