ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈನಲ್ಲಿ ಮದುವೆಗೆ ಹೋಗಿದ್ದ ಮಹಿಳೆಗೆ ಕೊರೊನಾ ಸೋಂಕು

|
Google Oneindia Kannada News

ಪುಣೆ, ಮಾರ್ಚ್ 21 : ಮಹಾರಾಷ್ಟ್ರದಲ್ಲಿ ಸುಮಾರು 40 ವರ್ಷದ ಮಹಿಳೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಹೊಸದಾಗಿ 3 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 52ಕ್ಕೆ ಏರಿಕೆಯಾಗಿದೆ.

ಪುಣೆ ಮೂಲದ ಮಹಿಳೆಗೆ ಕೊರೊನಾ ಸೋಂಕು ತಗುಲಿದೆ. ಆಕೆಗೆ ಗಂಟಲು ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ರಕ್ತ ಮತ್ತು ಕಫದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಪುಣೆಯ ಭಾರತಿ ಆಸ್ಪತ್ರೆಯಲ್ಲಿ ಮಹಿಳೆ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಕೊರೊನಾ ವೈರಸ್: ಏರ್ ಪೋರ್ಟ್ ಗಳಲ್ಲಿ ಹೇಗಿರುತ್ತೆ ಟ್ರೀಟ್ ಮೆಂಟ್? ಕೊರೊನಾ ವೈರಸ್: ಏರ್ ಪೋರ್ಟ್ ಗಳಲ್ಲಿ ಹೇಗಿರುತ್ತೆ ಟ್ರೀಟ್ ಮೆಂಟ್?

40 ವರ್ಷದ ಮಹಿಳೆ ಯಾವುದೇ ವಿದೇಶದ ಪ್ರವಾಸ ಕೈಗೊಂಡಿರಲಿಲ್ಲ. ಆದರೆ. ಮುಂಬೈನಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಂಡಿದ್ದಳು. ಮಾರ್ಚ್ 2ರಂದು ಮುಂಬೈಗೆ ಹೋಗಿದ್ದ ಆಕೆ ವಿವಾಹದಲ್ಲಿ ಭಾಗಿಯಾಗಿದ್ದಳು.

ಭಾರತೀಯರು ಬೆಚ್ಚುವ ಕೊರೊನಾ ಪ್ರಕರಣವೊಂದು ಪುಣೆಯಲ್ಲಿ ದಾಖಲು!ಭಾರತೀಯರು ಬೆಚ್ಚುವ ಕೊರೊನಾ ಪ್ರಕರಣವೊಂದು ಪುಣೆಯಲ್ಲಿ ದಾಖಲು!

Woman Who Attend Wedding In Mumbai Tested Positive For Coronavirus

ಆರೋಗ್ಯ ಇಲಾಖೆಯ ಕಿಶೋರ್ ರಾಮ್ ಎಂಬ ಅಧಿಕಾರಿ ಈ ಕುರಿತು ಮಾಹಿತಿ ನೀಡಿದ್ದಾರೆ. "ನಾವು ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆಕೆ ವಿದೇಶ ಪ್ರವಾಸ ಕೈಗೊಂಡಿರಲಿಲ್ಲ. ವಿದೇಶದಿಂದ ಆಗಮಿಸಿದ ವ್ಯಕ್ತಿಯ ಸಂಪರ್ಕಕ್ಕೆ ಆಕೆ ಬಂದಿರಬೇಕು" ಎಂದು ಹೇಳಿದ್ದಾರೆ.

ರೈಲಿನಲ್ಲಿ ಪ್ರಯಾಣಿಸಿದ್ದ ನಾಲ್ವರಿಗೆ ಕೊರೊನಾ ಸೋಂಕು ರೈಲಿನಲ್ಲಿ ಪ್ರಯಾಣಿಸಿದ್ದ ನಾಲ್ವರಿಗೆ ಕೊರೊನಾ ಸೋಂಕು

"ಮಹಿಳೆ ಮುಂಬೈನಲ್ಲಿ ಸಂಚಾರ ನಡೆಸಿದ ಕ್ಯಾಬ್‌ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ತುರ್ತಾಗಿ ತನಿಖೆ ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ" ಎಂದು ಕಿಶೋರ್ ರಾಮ್ ತಿಳಿಸಿದ್ದಾರೆ.

ಶುಕ್ರವಾರ ಪುಣೆಯಲ್ಲಿ 25 ವರ್ಷದ ಯುವಕನಿಗೆ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿತ್ತು. ಯುವಕ ಕೆಲವು ದಿನಗಳ ಹಿಂದೆ ಐರ್ಲೆಂಡ್‌ಗೆ ಭೇಟಿ ನೀಡಿದ್ದ. ನಾಯ್ಡು ಆಸ್ಪತ್ರೆಗೆ ಆತನನ್ನು ದಾಖಲು ಮಾಡಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

English summary
40 year old woman tested positive for coronavirus in Maharashtra's Pune city. The woman does not have travel history to a foreign country, but visited Navi Mumbai to attend a wedding on March 3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X