ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆಯ ಸಾಹಸಿ ಮಹಿಳಾ ಪೊಲೀಸ್ ಕಥೆ ಈಗ ಶಾಲಾ ಪಠ್ಯ

|
Google Oneindia Kannada News

ಮುಂಬೈ, ಜೂನ್ 13: ರೈಲ್ವೆ ಸುರಕ್ಷಾ ಪಡೆಯ (ಆರ್‌ಪಿಎಫ್) ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಸಾಹಸದ ಸಾಧನೆಗಳ ಕಾರಣ ಮಹಾರಾಷ್ಟ್ರದ ಎಸ್‌ಎಸ್‌ಸಿ ಪಠ್ಯಪುಸ್ತಕದಲ್ಲಿ ಪಾಠವಾಗಿ ಪರಿಚಯವಾಗುತ್ತಿದ್ದಾರೆ.

32 ವರ್ಷದ ರೇಖಾ ಮಿಶ್ರಾ ಅವರು ನಿರ್ಗತಿಕ ಮತ್ತು ಸಂಕಷ್ಟದಲ್ಲಿರುವ ಮಕ್ಕಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಮನೆಮಾತಾಗಿದ್ದರು. ಅವರ ಸಾಹಸಗಾಥೆಯನ್ನು ಮಹಾರಾಷ್ಟ್ರ ರಾಜ್ಯ ಶಿಕ್ಷಣ ಮಂಡಳಿಯು 10ನೇ ತರಗತಿ ಮರಾಠಿ ಪಠ್ಯದಲ್ಲಿ ಅಳವಡಿಸಿದೆ.

ಮಾನವೀಯತೆ ಮೆರೆದ ಪೇದೆ ಅರ್ಚನಾಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆಯ ಮಹಾಪೂರಮಾನವೀಯತೆ ಮೆರೆದ ಪೇದೆ ಅರ್ಚನಾಗೆ ಟ್ವಿಟ್ಟರ್‌ನಲ್ಲಿ ಪ್ರಶಂಸೆಯ ಮಹಾಪೂರ

ರೇಖಾ ಅವರು ಉತ್ತರ ಪ್ರದೇಶದ ಅಲಹಾಬಾದ್ ಮೂಲದವರು.

'ಮನೆ ಬಿಟ್ಟು ಓಡಿಹೋದ, ಕಳೆದುಹೋದ ಮತ್ತು ಅಪಹರಣಕ್ಕೆ ಒಳಗಾದ ಮಕ್ಕಳನ್ನು ನಾನು ರಕ್ಷಿಸಿದ್ದೇನೆ. ಅವರ ಉಜ್ವಲ ಭವಿಷ್ಯಕ್ಕಾಗಿ ಅವರ ಕಾಳಜಿ ವಹಿಸಿದ್ದೇನೆ. ಅವರನ್ನು ರಕ್ಷಿಸುವುದರಲ್ಲಿ ನನ್ನ ತಂಡ ನನಗೆ ಸಾಕಷ್ಟು ನೆರವಾಗಿದೆ.

woman police who rescued children featured in textbook

ನಾವು ಪೋಷಕರಿಗೆ ಮಾಹಿತಿ ನೀಡುತ್ತೇವೆ ಅಥವಾ ಅವರನ್ನು ಬಾಲಾಶ್ರಯಕ್ಕೆ ಒಪ್ಪಿಸುತ್ತೇವೆ. ಪೋಷಕರು ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಹೊಂದಿರಬೇಕು. ಮಕ್ಕಳ ಮೇಲೆ ಅವರು ಅನವಶ್ಯಕ ಒತ್ತಡಗಳನ್ನು ಹೇರಬಾರದು ಎಂದು ರೇಖಾ ಹೇಳಿದ್ದಾರೆ.

ನಾವು ಎಂದಿನಂತೆ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ಮಾಡುವ ಕೆಲಸಗಳನ್ನು ಗುರುತಿಸುತ್ತಿರುವುದನ್ನು ಕಂಡು ತುಂಬಾ ಖುಷಿಯಾಗಿದೆ. ಈ ಪಾಠದಿಂದ ಮಕ್ಕಳೂ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದರ ತಿಳಿವಳಿಕೆ ಪಡೆದುಕೊಳ್ಳುತ್ತಾರೆ. ನಾವು ಇದುವರೆಗೂ 953 ಮಕ್ಕಳಿಗೆ ನೆರವಾಗಿದ್ದೇವೆ ಎಂದಿದ್ದಾರೆ.

ರೇಖಾ ಅವರು 2014ರಲ್ಲಿ ಆರ್‌ಪಿಎಫ್ ಸೇರಿಕೊಂಡಿದ್ದರು. ಪ್ರಸ್ತುತ ಅವರು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

English summary
A woman police of Railway Protection force, who rescued 953 children is now featured in Maharashtra's 10th class Marathi textbook.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X