ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮ್ಯಾನ್‌ಹೋಲ್‌ಗೆ ಬಿದ್ದ ಮಹಿಳೆಯ ದೇಹ ಸಿಕ್ಕಿದ್ದು 22 ಕಿ.ಮೀ. ದೂರದಲ್ಲಿ

|
Google Oneindia Kannada News

ಮುಂಬೈ, ಅಕ್ಟೋಬರ್ 7: ಮ್ಯಾನ್‌ಹೋಲ್ ಒಂದರೊಳಗೆ ಬಿದ್ದ ಮಹಿಳೆಯೊಬ್ಬರ ದೇಹ 22 ಕಿ.ಮೀ. ದೂರದಲ್ಲಿ ಪತ್ತೆಯಾದ ಘಟನೆ ಮುಂಬೈನ ಘಾಟ್ಕೋಪರ್ ಎಂಬಲ್ಲಿ ನಡೆದಿದೆ.

ಈ ಭಾಗದಲ್ಲಿ ಶನಿವಾರ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿತ್ತು. 32 ವರ್ಷದ ಮಹಿಳೆ ಘಾಟ್ಕೋಪರ್ ಪೂರ್ವ ಭಾಗದ ಗ್ಲೋಬಲ್ ಆಸ್ಪತ್ರೆ ಸಮೀಪ ಶನಿವಾರ ಸಂಜೆ ನಡೆದುಕೊಂಡು ಹೋಗುತ್ತಿರುವಾಗ ರಸ್ತೆ ಕಾಣಿಸದೆ ತೆರೆದ ಮ್ಯಾನ್‌ಹೋಲ್ ಒಳಗೆ ಬಿದ್ದಿದ್ದರು. ಅವರ ಮೃತದೇಹ ಸೋಮವಾರ ಬೆಳಿಗ್ಗೆ ವರ್ಲಿಯ ಹಾಜಿ ಅಲಿ ಸಮೀಪ ಸ್ಥಳೀಯರ ಕಣ್ಣಿಗೆ ಕಂಡಿದೆ.

ಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಕ್ರೂರ ಹಲ್ಲೆಮಹಿಳೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರ, ಕ್ರೂರ ಹಲ್ಲೆ

ದಿನಸಿ ಖರೀದಿ ನಿಮಿತ್ತ ಹೊರಬಂದಿದ್ದ ಶೀತಲ್ ದಾಮಾ ಎಂಬ ಮಹಿಳೆ ಮಳೆ ಜೋರಾಗಿ ಸುರಿದಿದ್ದರಿಂದ ತಮ್ಮ ಮಗನನ್ನು ಮನೆಗೆ ಹೋಗುವಂತೆ ಮೊದಲೇ ಕಳುಹಿಸಿದ್ದರು. ಆದರೆ ಎಷ್ಟು ಸಮಯ ಕಳೆದರೂ ಅವರು ಮನೆಗೆ ಮರಳಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬದವರು ಆಕೆಯ ಹುಡುಕಾಟ ಆರಂಭಿಸಿದ್ದರು. ಶೀತಲ್ ಕೊಂಡೊಯ್ದಿದ್ದ ಬ್ಯಾಗ್ ಘಾಟ್ಕೋಪರ್‌ನಲ್ಲಿ ಮ್ಯಾನ್ ಹೋಲ್ ಒಂದರ ಸಮೀಪ ಪತ್ತೆಯಾಗಿತ್ತು.

ಹತ್ರಾಸ್: ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾಗಿದ್ದ 4 ವರ್ಷದ ಬಾಲಕಿ ಸಾವುಹತ್ರಾಸ್: ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾಗಿದ್ದ 4 ವರ್ಷದ ಬಾಲಕಿ ಸಾವು

ಶೀತಲ್ ಅವರು ಮ್ಯಾನ್‌ಹೋಲ್‌ಗೆ ಬಿದ್ದರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಮಹಿಮ್, ತಂಡೆಯೊ, ಬಾಂದ್ರಾ-ಕುರ್ಲಾ ಪ್ರದೇಶಗಳಲ್ಲಿ ಹುಡುಕಾಟ ಆರಂಭಿಸಿದ್ದರು. 33 ಗಂಟೆಗಳ ಬಳಿಕ ಹಾಜಿ ಅಲಿ ಸಮೀಪ ಮೃತದೇಹ ಸಿಕ್ಕಿದೆ. ಮುಂದೆ ಓದಿ...

ಬಿಎಂಸಿ ಪತ್ತೆ ಕಾರ್ಯಾಚರಣೆ

ಬಿಎಂಸಿ ಪತ್ತೆ ಕಾರ್ಯಾಚರಣೆ

ಗ್ಲೋಬಲ್ ಆಸ್ಪತ್ರೆಯ ಅಸಾಲ್ಫಾ ಮೆಟ್ರೋ ಸೇತುವೆ ಅಡಿಯಲ್ಲಿರುವ ಮ್ಯಾನ್‌ಹೋಲ್‌ನಲ್ಲಿ ಶೀತಲ್ ದಾಮಾ ಬಿದ್ದಿದ್ದಾರೆ ಎಂಬ ಮಾಹಿತಿ ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮಾಹಿತಿ ದೊರಕಿತು. ಕೂಡಲೇ ಬಿಎಂಸಿ ಅಗ್ನಿಶಾಮಕ ದಳವನ್ನು ನಿಯೋಜಿಸಿ ರಕ್ಷಣೆ ಹಾಗೂ ಪತ್ತೆ ಕಾರ್ಯಾಚರಣೆ ಆರಂಭಿಸಿತು. ಭಾನುವಾರ ಸಂಜೆಯವರೆಗೂ ನಿರಂತರ ಹುಡುಕಾಟ ನಡೆಸಿದರೂ ಆಕೆ ಪತ್ತೆಯಾಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಮನೆಗೆ ಬಾರದ ಶೀತಲ್

ಮನೆಗೆ ಬಾರದ ಶೀತಲ್

ಶೀತಲ್ ಅವರು ಶನಿವಾರ ಸಂಜೆ 6 ಗಂಟೆ ಸುಮಾರಿಗೆ 12 ವರ್ಷದ ಮಗನ ಜತೆ ದಿನ ಖರೀದಿಗೆ ಹೊರಗೆ ಬಂದಿದ್ದರು. ಮಳೆ ಜೋರಾದ ಕಾರಣ ಮಧ್ಯದಲ್ಲಿಯೇ ಮಗನನ್ನು ವಾಪಸ್ ಕಳುಹಿಸಿದ್ದರು. ತಾನು ದಿನಸಿ ಖರೀದಿ ಮಾಡಿ ಮನೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಶನಿವಾರ ರಾತ್ರಿಯಾದರೂ ಶೀತಲ್ ಅವರು ಮನೆಗೆ ಬಂದಿರಲಿಲ್ಲ. ಬಳಿಕ ಕುಟುಂಬದವರು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ನೀಡಿದ್ದರು.

ಸುಳಿವು ನೀಡಿದ ಚೀಲ

ಸುಳಿವು ನೀಡಿದ ಚೀಲ

ಶೀತಲ್ ಅವರು ಎರಡು ಕೆಜಿ ಗೋಧಿ ಖರೀದಿಸಿ ಮನೆಗೆ ವಾಪಸಾಗುತ್ತಿದ್ದರು. ಗ್ಲೋಬಲ್ ಆಸ್ಪತ್ರೆ ಎದುರಿನ ಮುಂದಿನ ಚರಂಡಿ ತೆರೆದುಕೊಂಡಿದ್ದು, ಅಲ್ಲಿ ಗೋಧಿ ಚೀಲ ಬಿದ್ದಿದೆ ಎಂಬ ಮಾಹಿತಿ ಭಾನುವಾರ ಬೆಳಿಗ್ಗೆ ದೊರಕಿತು. ಅದು ಆಕೆಯದೇ ಬ್ಯಾಗ್ ಎನ್ನುವುದು ಗೊತ್ತಾಯಿತು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆವು ಎಂದು ಕುಟುಂಬದ ಸ್ನೇಹಿತ ಕಮಲೇಶ್ ಭಾನುಶಾಲಿ ತಿಳಿಸಿದ್ದಾರೆ.

ಕುಟುಂಬದವರು ನೀಡಿದ ಮಾಹಿತಿಗೆ ಹೋಲಿಕೆಯಾಗುವ ಬಟ್ಟೆ, ಆಭರಣ ಇರುವ ಮಹಿಳೆಯ ದೇಹವೊಂದು ಸಿಕ್ಕಿದೆ ಎಂದು ತಾರ್ಡೆಯೊ ಪೊಲೀಸರು ಸೋಮವಾರ ಮಾಹಿತಿ ನೀಡಿದ್ದರು. ಹಾಜಿ ಅಲಿಯ ಸ್ಥಳಕ್ಕೆ ತೆರಳಿದ ಕುಟುಂಬದವರು ಶೀತಲ್ ಅವರ ದೇಹವನ್ನು ಗುರುತಿಸಿದ್ದಾರೆ. ಮ್ಯಾನ್‌ಹೋಲ್‌ಗೂ ಮೃತದೇಹ ಸಿಕ್ಕ ಸ್ಥಳಕ್ಕೂ ಸುಮಾರು 22 ಕಿ.ಮೀ. ದೂರವಿದೆ.

ಅನುಮಾನ ವ್ಯಕ್ತಪಡಿಸಿದ ಬಿಎಂಸಿ

ಅನುಮಾನ ವ್ಯಕ್ತಪಡಿಸಿದ ಬಿಎಂಸಿ

ಆದರೆ ಈ ಘಟನೆ ಬಗ್ಗೆ ಬಿಎಂಸಿ ಅಧಿಕಾರಿಗಳು ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಮಹಿಳೆ ಬಿದ್ದಿದ್ದರು ಎನ್ನಲಾದ ಮ್ಯಾನ್‌ಹೋಲ್‌ನಿಂದ ಒಳ ಚರಂಡಿಯ ಸಾಲು ಮೂರು ಚೆಕ್‌ಪಾಯಿಂಟ್‌ಗಳನ್ನು ಹೊಂದಿದೆ. ಇಲ್ಲಿ ಎಲ್ಲಿಯೂ ಮೃತದೇಹ ಸಿಕ್ಕಿಹಾಕಿಕೊಳ್ಳದೆ ಅಷ್ಟು ದೂರದ ಹಾಜಿ ಅಲಿಗೆ ಹೋಗಿದ್ದು ಹೇಗೆ? ಅಲ್ಲದೆ, ಚರಂಡಿಯ ಹರಿವು ಇರುವುದು ಮಾಹಿಮ್‌ಗೆ ಇದೆಯೇ ಹೊರತು ವರ್ಲಿ ಕಡೆಗೆ ಅಲ್ಲ. ಹಾಗೆಯೇ ಮನುಷ್ಯರ ದೇಹ ತೂರಿಕೊಂಡು ಹೋಗುವಷ್ಟು ಚರಂಡಿ ಮಾರ್ಗ ದೊಡ್ಡದಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶೀತಲ್ ಅವರು ಮುಳುಗಿ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ವರದಿ ಹೇಳಿದೆ. ಆದರೂ ಬಿಎಂಸಿ ಅಧಿಕಾರಿಗಳು ಈ ಘಟನೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ. ಅವರು ಮ್ಯಾನ್‌ಹೋಲ್‌ನಲ್ಲಿ ಜಾರಿ ಬಿದ್ದಿರುವುದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ. ಹೀಗಾಗಿ ಪೊಲೀಸರು ಸ್ಥಳೀಯರನ್ನು ಪ್ರಶ್ನೆಗೆ ಒಳಪಡಿಸುತ್ತಿದ್ದಾರೆ.

English summary
A Mumbai woman falls into open manhole at Ghatkopar area and her body found in Haji ali, 22 KM away from the place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X