ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಲಿಗೆ ವಿಷ ಹಾಕಿದ ಟೊಮ್ಯಾಟೊವನ್ನು ಮ್ಯಾಗಿಗೆ ಹಾಕಿ ತಿಂದ ಮಹಿಳೆ

|
Google Oneindia Kannada News

ಮುಂಬೈ ಜುಲೈ 30: ದೇಶದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಮ್ಯಾಗಿ ತಿಂದ ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟು ಸಾವನ್ನಪ್ಪಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮ್ಯಾಗಿಯಲ್ಲಿ ಏನೋ ತಪ್ಪಾಗಿದೆ ಎಂದು ಎಲ್ಲರಿಗೂ ಅನಿಸಿತ್ತಾದರೂ ನಂತರ ಮಹಿಳೆ ಹಾಕಿದ್ದ ಟೊಮೇಟೊ ವಿಷಕಾರಿ ಎಂದು ತಿಳಿದುಬಂದಿದೆ. ಇದರಿಂದಾಗಿ ಅವರು ಸಾವನ್ನಪ್ಪಿರುವುದು ತಿಳಿದು ಬಂದಿದೆ.

ಈ ಪ್ರಕರಣ ಮುಂಬೈನ ಮಲಾಡ್ ಪ್ರದೇಶದಲ್ಲಿ ನಡೆದಿದೆ. ಅಲ್ಲಿ 35 ವರ್ಷದ ರೇಖಾ ನಿಶಾದ್ ತನ್ನ ಪತಿ ಮತ್ತು ಸೋದರ ಮಾವನೊಂದಿಗೆ ವಾಸಿಸುತ್ತಿದ್ದರು. ಜುಲೈ 20 ರಂದು ಇಬ್ಬರೂ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ರೇಖಾ ಮನೆಯಲ್ಲಿ ಒಬ್ಬರೇ ಇದ್ದರು. ಈ ವೇಳೆ ಅವರಿಗೆ ಮ್ಯಾಗಿ ತಿನ್ನಬೇಕು ಅನಿಸಿದೆ. ಟಿವಿ ನೋಡುತ್ತಿದ್ದ ರೇಖಾ ಅವರಿಗೆ ಮನೆಯಲ್ಲಿ ಸಾಕಷ್ಟು ಭಯ ಹುಟ್ಟಿಸುವಷ್ಟು ಇಲಿಯಿದೆ. ಅವುಗಳನ್ನು ನಾಶಪಡಿಸಲು ಟೊಮೆಟೊದಲ್ಲಿ ಇಲಿ ಕಿಲ್ಲರ್ (ಇಲಿ ವಿಷ) ಇಟ್ಟಿದ್ದಾರೆ.

Woman Dies After Eating Instant Noodles With Rat Poison

ಬಳಿಕ ರೇಖಾ ಟಿವಿ ನೋಡುವುದರಲ್ಲಿ ನಿರತಳಾಗಿದ್ದರು. ವಿಷಪೂರಿತ ಟೊಮೆಟೊಗೆ ಗಮನ ಕೊಡದೆ ಅದನ್ನು ಕತ್ತರಿಸಿ ಮ್ಯಾಗಿ ಮಾಡಿದ್ದಾರೆ. ಆಮೇಲೆ ಆರಾಮವಾಗಿ ಕೂತು ತಿನ್ನತೊಡಗಿದ್ದಾರೆ. ಸ್ವಲ್ಪ ಸಮಯದಲ್ಲೇ ಅವರ ಸ್ಥಿತಿ ಹದಗೆಟ್ಟಿದೆ. ಮನೆಗೆ ಬಂದ ಪತಿ ಮತ್ತು ಸೋದರ ಮಾವ ಆಕೆಯನ್ನು ಅವಸರದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿ ಒಂದು ವಾರ ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲ್ಲಿಲ್ಲ.

Woman Dies After Eating Instant Noodles With Rat Poison

ಘಟನೆಯ ಸುದ್ದಿ ತಿಳಿದ ತಕ್ಷಣ ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ಮಾಲ್ವಾನಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಶೇಖರ್ ಭಲೇರಾವ್ ತಿಳಿಸಿದ್ದಾರೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದಾಗ ಆಕೆಯ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿತ್ತು. ಮನೆಯಲ್ಲಿ ಇಲಿಗಳನ್ನು ಕೊಲ್ಲುವ ಸಲುವಾಗಿ ಟೊಮೆಟೊದಲ್ಲಿ ವಿಷವನ್ನು ಇಡಲಾಗಿತ್ತು ಎಂದು ಮಹಿಳೆ ಹೇಳಿದ್ದಾಳೆ. ಗಮನ ಹರಿಸದೇ ಅದೇ ಟೊಮೇಟೊವನ್ನು ಕತ್ತರಿಸಿ ಮ್ಯಾಗಿಯಲ್ಲಿ ಹಾಕಿ ತಿಂದಿದಿರುವುದಾಗಿ ಆಕೆ ಹೇಳಿದ್ದಾರೆ. ಅವರ ಸ್ಥಿತಿ ಹದಗೆಟ್ಟಾಗ, ಅವರು ಇದನ್ನು ಅರಿತುಕೊಂಡರು. ಆದರೆ ಅಷ್ಟು ಹೊತ್ತಿಗೆ ಅದು ತುಂಬಾ ತಡವಾಗಿತ್ತು.

English summary
A 27-year-old woman died in Mumbai after accidentally consuming food laced with rat poison.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X