• search
  • Live TV
ಮುಂಬೈ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

15 ದಿನದ ಶಿಶು ಕಸದ ತೊಟ್ಟಿ ಬಳಿ ಎಸೆದಿದ್ದ ತಾಯಿ ಬಂಧನ

|
Google Oneindia Kannada News

ಮುಂಬೈ, ಮೇ 18: 15 ದಿನದ ನವಜಾತ ಶಿಶುವನ್ನು ಕಸದ ತೊಟ್ಟಿಯ ಸಮೀಪ ಬಿಟ್ಟುಹೋದ ಆರೋಪದ ಮೇಲೆ 22 ವರ್ಷದ ಮಹಿಳೆಯನ್ನು ಥಾಣೆ ಸಮೀಪದ ಖಡವಲಿ ಎಂಬಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನ ಮರೀನ್ ಡ್ರೈವ್‌ನಲ್ಲಿ 15 ದಿನದ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದು, ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತಾಯಿಗಾಗಿ ಹುಡುಕಾಟ ಆರಂಭಿಸಿದ್ದರು.

12 ದಿನಗಳ ಹುಡುಕಾಟದ ನಂತರ ಮುಂಬೈನ ಮಹಿಳೆ ಮನೆಯಿಂದ 75 ಕಿ. ಮೀ. ಮೀಟರ್ ದೂರದಲ್ಲಿರುವ ಖಡವಲಿಯಲ್ಲಿ ಸಿಕ್ಕಿಬಿದ್ದಿದ್ದಾಳೆ. ಮಹಿಳೆಗೆ ಸಹಕಾರ ನೀಡಿದ ಆರೋಪದ ಮೇಲೆ 28 ವರ್ಷದ ಮಹಿಳೆಯ ಸಹೋದರನನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಹಿಳೆಗೆ ಬಲವಂತದ ಮದುವೆ; ವಿಚಾರಣೆ ವೇಳೆ ಮಹಿಳೆ, ಬಿಹಾರದ ತನ್ನ ಹಳ್ಳಿಯಲ್ಲಿ ತನಗಿಂತ ಎರಡು ಪಟ್ಟು ಹೆಚ್ಚು ವಯಸ್ಸಿನ ವ್ಯಕ್ತಿಯನ್ನು ವಿವಾಹವಾಗಲು ಒತ್ತಾಯಿಸಲಾಯಿತು ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಮದುವೆಯಾದ ಕೆಲವು ತಿಂಗಳ ನಂತರ, ಆಕೆ ತನ್ನ ಸಹೋದರನ ಸಹಾಯದಿಂದ ಗಂಡನ ಮನೆಯಿಂದ ಓಡಿಬಂದು ಮಹಾರಾಷ್ಟ್ರದ ಖಡವಲಿಯಲ್ಲಿ ವಾಸಿಸುತ್ತಿದ್ದಳು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಾದ ಹಲವು ಸಮಯದ ಬಳಿಕ ಆಕೆ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಆದರೆ, ಹೊಸ ಜೀವನ ಪ್ರಾರಂಭಿಸಲು ಮತ್ತು ಮಹಾರಾಷ್ಟ್ರದಲ್ಲಿ ತನ್ನದೇ ವಯಸ್ಸಿನ ಯಾರೊಂದಿಗಾದರೂ ನೆಲೆಸಲು ಬಯಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Woman Arrested on Charges of Abandoning Her Baby

ಘಟನೆ ಸಂಬಂಧ ಇಬ್ಬರನ್ನು ಬುಧವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಶ್ಯೂರಿಟಿಯಾಗಿ ತಲಾ 10,000 ನಗದು ಠೇವಣಿ ಇಡುವ ಷರತ್ತಿನ ಮೇಲೆ ಜಾಮೀನು ನೀಡಲಾಗಿದೆ. ಆದರೆ ಆರೋಪಿಗಳ ಬಳಿ ಹಣವಿಲ್ಲದಿರುವುದರಿಂದ ಬೇರೆ ಯಾರಾದರೂ ಹಣವನ್ನು ಪಾವತಿಸುವವರೆಗೆ ಅವರು ಜೈಲಿನಲ್ಲೇ ಇರಬೇಕಾಗುತ್ತದೆ.

ಮಗುವನ್ನು ರಕ್ಷಿಸಿದ ಪೌರಕಾರ್ಮಿಕರು; ಏಪ್ರಿಲ್ 17 ರಂದು ಉಲ್ಹಾಸ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶುವನ್ನು ಬಿಸಾಡಲು ನಿರ್ಧರಿಸಿದ್ದಾಳೆ. ಮಹಿಳೆಯ ಈ ನಿರ್ಧಾರವನ್ನು ಆಕೆಯ ಸಹೋದರ ಕೂಡ ಬೆಂಬಲಿಸಿದ್ದು, ಅವಳನ್ನು ಮರೀನ್ ಡ್ರೈವ್‌ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರು ಮೇಘದೂತ ಫ್ಲೈಓವರ್ ಅಡಿಯಲ್ಲಿ ಇದ್ದ ಕಸದ ತೊಟ್ಟಿಯ ಬಳಿ ಮಗುವನ್ನು ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೇ 6 ರಂದು ಬೆಳಗ್ಗೆ 7 ಗಂಟೆಗೆ ಮರೀನ್ ಡ್ರೈವ್‌ನ ಎನ್‌ಎಸ್ ರಸ್ತೆಯ ಕಸದತೊಟ್ಟಿಯೊಂದರ ಬಳಿ ಅನಾಥವಾಗಿದ್ದ ಮಗುವನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಪೌರ ಕಾರ್ಮಿಕರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದರಿಂದಾಗಿ ಮಗು ಬದುಕುಳಿದಿದೆ. ಮಗುವನ್ನು ಡೋಂಗ್ರಿಯಲ್ಲಿರುವ ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿಶುವನ್ನು ಬಿಟ್ಟು ಹೋಗಿದ್ದಕ್ಕಾಗಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮರೀನ್ ಡ್ರೈವ್ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಪರಾಧಿಗಳ ಪತ್ತೆಗೆ ಹಲವು ಸಿಸಿಟಿವಿ ಕ್ಯಾಮೆರಾಗಳ ವೀಡಿಯೊ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ಪೈಕಿ ಒಂದರಲ್ಲಿ ಮಹಿಳೆಯು ಮಗುವಿನೊಂದಿಗೆ ಇದ್ದದ್ದು ಕಂಡುಬಂದಿತ್ತು ಎಂದು ಮರೀನ್ ಡ್ರೈವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಶ್ವನಾಥ ಕೋಲೇಕಾರ್ ತಿಳಿಸಿದ್ದಾರೆ.

ಆರೋಪಿಗಳ ಪತ್ತೆಗೆ ಇನ್ಸ್‌ಪೆಕ್ಟರ್ ಸಂತೋಷ್ ಅಹ್ವಾದ್, ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್ (ಎಪಿಐ) ರಾಹುಲ್ ಭಂಡಾರೆ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ರಾಹುಲ್ ಕದಮ್ ನೇತೃತ್ವದಲ್ಲಿ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು.

ಪೊಲೀಸರು ಮರೀನ್ ಡ್ರೈವ್ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಅದಾದ ಬಳಿಕ ಆ ಮಾರ್ಗದುದ್ದಕ್ಕೂ ಇದ್ದ ಪ್ರತಿ ರೈಲು ನಿಲ್ಧಾಣದಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಮಹಿಳೆ ಮತ್ತು ಆಕೆಯ ಸೋದರ ಖಡವಲಿಯಲ್ಲಿ ಇಳಿದಿರುವುದು ಪತ್ತೆಯಾಯಿತು.

ಈ ಸಂಬಂಧ ಖಡವಲ್ಲಿ ಪ್ರದೇಶದಲ್ಲಿ ವಿಚಾರಣೆ ನಡೆಸಿದ ನಂತರ, ಅಂತಿಮವಾಗಿ ಮಗುವಿನ ತಾಯಿ ಮತ್ತು ಆಕೆಯ ಸೋದರನನ್ನು ಪತ್ತೆಹಚ್ಚಿ ಮುಂಬೈಗೆ ಕರೆತಂದಿದ್ದೇವೆ ಎಂದು ಮರೀನ್ ಡ್ರೈವ್ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಶ್ವನಾಥ್ ಕೋಲೇಕರ್ ಹೇಳಿದರು.

English summary
Woman arrested on charges of abandoning her baby in Mumbai. She has been arrested by police from Thane district Khadavli locality house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X