ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರ್ಸ್‌ಗಳಿಗೆ ಸೋಂಕು; ಮುಂಬೈ ಆಸ್ಪತ್ರೆಯೇ ಕಂಟೇನ್‍ಮೆಂಟ್ ಝೋನ್

|
Google Oneindia Kannada News

ಮುಂಬೈ, ಏಪ್ರಿಲ್ 06 : ಕೊರೊನಾ ಸೋಂಕು ತಗುಲಿದೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಯನ್ನೇ ಕಂಟೇನ್‍ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ನರ್ಸ್,ವೈದ್ಯರಿಗೆ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಹೌದು, ಅಚ್ಚರಿಯಾದರೂ ಇದರು ಸತ್ಯ. ಮುಂಬೈನ ವೊಕಾರ್ಡ್ ಆಸ್ಪತ್ರೆಯನ್ನು ಕಂಟೇನ್‌ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ 26 ನರ್ಸ್, 3 ವೈದ್ಯರಿಗೆ ಕೊರೊನಾ ಸೋಂಕು ತಗುಲಿದೆ.

ಕಲಬುರಗಿಯಲ್ಲಿ ಮತ್ತೊಂದು ಕಂಟೇನ್‍ಮೆಂಟ್ ಝೋನ್ಕಲಬುರಗಿಯಲ್ಲಿ ಮತ್ತೊಂದು ಕಂಟೇನ್‍ಮೆಂಟ್ ಝೋನ್

ಮುಂಬೈನ ಮಹಾನಗರ ಪಾಲಿಕೆ ವೊಕಾರ್ಡ್ ಆಸ್ಪತ್ರೆಗೆ ಯಾರೂ ಹೋಗಬಾರದು, ಆಸ್ಪತ್ರೆಯಿಂದ ಯಾರೂ ಬರಬಾರದು ಎಂದು ಸೂಚನೆ ನೀಡಿದೆ. ಒಂದೇ ವಾರದಲ್ಲಿ 26 ನರ್ಸ್, ಮೂವರು ವೈದ್ಯರಿಗೆ ಸೋಂಕು ತಗುಲಿದ್ದು, ಈ ಪ್ರದೇಶವನ್ನು ಕಂಟೇನ್‌ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

ಮುಂಬೈ ಕೊಳಗೇರಿ ಪ್ರದೇಶದಲ್ಲಿ ಮತ್ತೊಂದು ಕೊರೊನಾ ಪ್ರಕರಣ ದಾಖಲು!ಮುಂಬೈ ಕೊಳಗೇರಿ ಪ್ರದೇಶದಲ್ಲಿ ಮತ್ತೊಂದು ಕೊರೊನಾ ಪ್ರಕರಣ ದಾಖಲು!

Wockhardt Hospital Declared As Containment Zone

ಕೇಂದ್ರ ಆರೋಗ್ಯ ಸಚಿವಾಲಯದ ಮಾರ್ಗಸೂಚಿ ಅನ್ವಯ ಕೋವಿಡ್ -19 ಪ್ರಕರಣ ಕಂಡು ಬಂದರೆ ಆ
ಪ್ರದೇಶವನ್ನು ಕಂಟೇನ್‍ಮೆಂಟ್ ಝೋನ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿಂದ ಬೇರೆ ಪ್ರದೇಶಕ್ಕೆ ಸೋಂಕು ಹರಡದಂತೆ ತಡೆಯಲು ಕ್ರಮ ಕೈಗೊಳ್ಳಲಾಗುತ್ತದೆ.

ಮುಂಬೈ: ಡಬ್ಬಾವಾಲಗಳಿಗೂ ತಟ್ಟಿದ ಕೊರೊನಾ ಭೀತಿ ಮುಂಬೈ: ಡಬ್ಬಾವಾಲಗಳಿಗೂ ತಟ್ಟಿದ ಕೊರೊನಾ ಭೀತಿ

ಕಾರ್ಯಕಾರಿ ಆರೋಗ್ಯ ಸಹಾಯಕರ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿದ್ದು, ಸೋಂಕು ಹೇಗೆ ಹಬ್ಬಿತು ಎಂದು ತನಿಖೆ ನಡೆಸಲು ಸೂಚನೆ ನೀಡಲಾಗಿದೆ. ಮಾರ್ಚ್ 27ರಂದು 70 ವರ್ಷದ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದ.

ಹೃದಯ ಸಂಬಂಧಿ ಕಾಯಿಲೆ ಎಂದು ಆಸ್ಪತ್ರೆಗೆ ಬಂದಿದ್ದ ವೃದ್ಧನಿಗೆ ಕೋವಿಡ್ -19 ಸೋಂಕು ಇರುವುದು ಪತ್ತೆಯಾಗಿತ್ತು. ಈ ವೃದ್ಧನಿಂದಾಗಿಯೇ ನರ್ಸ್, ವೈದ್ಯರಿಗೆ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ.

ಸೋಂಕು ತಗುಲಿರುವ ಇಬ್ಬರು ವೈದ್ಯರನ್ನು ಬೇರೆ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಆಸ್ಪತ್ರೆಯ ಕೆಲವ ನರ್ಸ್‌ಗಳು ರೂಂ ಮೇಟ್‌ಗಳಾಗಿದ್ದು, ಅವರಿಂದಾಗಿ ಸೋಂಕು ಹೆಚ್ಚಾಗಿ ಹಬ್ಬಿರಬಹುದು ಎಂದು ಅಂದಾಜಿಸಲಾಗಿದೆ.

ಇದುವರೆಗೂ ಮಹಾರಾಷ್ಟ್ರದಲ್ಲಿ 748 ಕೊರೊನಾ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ 113 ಹೊಸ ಪ್ರಕರಣಗಳಾಗಿವೆ. ಇದರಲ್ಲಿ ಮುಂಬೈ ನಗರದಲ್ಲಿಯೇ 81 ಸೋಂಕಿತರು ಇದ್ದಾರೆ.

English summary
Wockhardt hospital in Mumbai has been declared a containment zone. After 26 nurses and three doctors tested positive for COVID-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X