ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹೋರಾಟಕ್ಕೆ ಮತ್ತೆ ಬಲ ತುಂಬಿದ ವಿಪ್ರೋ ಮುಖ್ಯಸ್ಥ

|
Google Oneindia Kannada News

ಪುಣೆ, ಮೇ 5: ಮಹಾರಾಷ್ಟ್ರದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಸುಮಾರು 14 ಸಾವಿರ ಸೋಂಕು ವರದಿಯಾಗಿದೆ. ದೇಶದ ಪ್ರಮುಖ ಹಾಟ್‌ಸ್ಪಾಟ್ ಆಗಿರುವ ರಾಜ್ಯಕ್ಕೆ ಈಗ ವಿಪ್ರೋ ಸಂಸ್ಥೆ ನೆರವು ನೀಡಿದೆ.

450 ಬೆಡ್‌ಗಳನ್ನು ಹೊಂದಿರುವಂತೆ ಕೊವಿಡ್ ಆಸ್ಪತ್ರೆ ನಿರ್ಮಿಸಲು ವಿಪ್ರೋ ಸಂಸ್ಥೆ ಮಹಾರಾಷ್ಟ್ರ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರ ಅಡಿಯಲ್ಲಿ ಪುಣೆಯ ಹಿಂಜೇವಾಡಿಯಲ್ಲಿರುವ ತನ್ನ ಐಟಿ ಕ್ಯಾಂಪಸ್‌ಗಳಲ್ಲಿ ಒಂದನ್ನು 450 ಹಾಸಿಗೆಗಳ ಆಸ್ಪತ್ರೆಯಾಗಿ ಪರಿವರ್ತಿಸಿ ಮೇ 30 ರೊಳಗೆ ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಲು ತೀರ್ಮಾನಿಸಿದೆ.

ವಲಸೆ ಕಾರ್ಮಿಕರಿಗೆ ನಗರ ಬಿಟ್ಟು ಹೋಗದಂತೆ ಯಡಿಯೂರಪ್ಪ ಮನವಿವಲಸೆ ಕಾರ್ಮಿಕರಿಗೆ ನಗರ ಬಿಟ್ಟು ಹೋಗದಂತೆ ಯಡಿಯೂರಪ್ಪ ಮನವಿ

ನಾಲ್ಕು ವಾರದಲ್ಲಿ ಐಟಿ ಕ್ಯಾಂಪಸ್‌ನ್ನು ಆಸ್ಪತ್ರೆಯಾಗಿ ಬದಲಾಯಿಸುತ್ತೇವೆ ಎಂದು ತಿಳಿಸಿರುವ ವಿಪ್ರೋ ಸಂಸ್ಥೆ ಒಂದು ವರ್ಷದ ಬಳಿಕ ಮತ್ತೆ ಆಸ್ಪತ್ರೆಯನ್ನು ಐಟಿ ಕ್ಯಾಂಪಸ್‌ ಆಗಿ ಮಾರ್ಪಟ್ಟು ಮಾಡುತ್ತೇವೆ ಎಂದಿದ್ದಾರೆ.

450 ಹಾಸಿಗೆಗಳ ಜೊತೆ ವೈದ್ಯರಿಗೆ ಮತ್ತು ವೈದ್ಯಕೀಯ ಸಿಬ್ಬಂದಿಗಾಗಿ 24 ಉತ್ತಮವಾದ ಕೊಠಡಿ ವ್ಯಸಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದೆ. ಇದರ ಜೊತೆ ಆಸ್ಪತ್ರೆಗೆ ಅಗತ್ಯವಿರುವ ಮೂಲ ಸೌಕರ್ಯ, ವೈದ್ಯಕೀಯ ಪೀಠೋಪಕರಣಗಳು, ಸಲಕರಣೆಗಳು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದು ತಿಳಿಸಿದೆ.

Wipro Signs MoU To Repurpose Pune IT Facility To COVID 19 Hospital

ವಿಪ್ರೋ ಸಂಸ್ಥೆಯ ಮಾನವೀಯ ಕೊಡುಗೆಯ ಕುರಿತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸ್ವಾಗತಿಸಿದ್ದು, ಕೊವಿಡ್ ವಿರುದ್ಧದ ಹೋರಾಟಕ್ಕೆ ವಿಪ್ರೋ ಸಂಸ್ಥೆ ನೀಡಿರುವ ಸಹಾಯ ಬಲ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೊರೊನಾ ವಿರುದ್ಧ ಹೋರಾಟಕ್ಕಾಗಿ ವಿಪ್ರೋ ಎಂಟರ್‌ಪ್ರೈಸಸ್ ಮತ್ತು ಅಜೀಮ್ ಪ್ರೇಮ್‌ಜಿ ಫೌಂಡೇಶನ್ ಒಟ್ಟಾಗಿ 1,125 ಕೋಟಿ ಹಣವನ್ನು ಮೀಸಲಿಟ್ಟಿದೆ. ಈವರೆಗೆ ಭಾರತದಾದ್ಯಂತ 34 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳನ್ನು ಮುಟ್ಟಿದೆ ಎಂದು ವಿಪ್ರೋ ಹೇಳಿಕೆಯಲ್ಲಿ ತಿಳಿಸಿದೆ.

English summary
Wipro Limited signs Memorandum of Understanding with maharashtra to repurpose pune IT facility to 450 Bed COVID 19 hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X