ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀನಾ ಬೋರಾ ಹತ್ಯೆ ಕೇಸ್ ತನಿಖಾಧಿಕಾರಿ ಪತ್ನಿ ಕೊಲೆ

ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್​ ಅಧಿಕಾರಿ ಧ್ಯಾನೇಶ್ವರ್​ ಗನೋರೆ ಅವರ ಪತ್ನಿ ಮಂಗಳವಾರ ರಾತ್ರಿ ಮುಂಬೈಯಲ್ಲಿ ಹತ್ಯೆಗೀಡಾಗಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಮೇ 24: ಶೀನಾ ಬೋರಾ ಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸ್​ ಅಧಿಕಾರಿ ಧ್ಯಾನೇಶ್ವರ್​ ಗನೋರೆ ಅವರ ಪತ್ನಿ ಮಂಗಳವಾರ ರಾತ್ರಿ ಮುಂಬೈಯಲ್ಲಿ ಹತ್ಯೆಗೀಡಾಗಿದ್ದಾರೆ.

ಧ್ಯಾನೇಶ್ವರ್​ ಗನೋರೆ ಅವರ ಪತ್ನಿ 42 ವರ್ಷ ವಯಸ್ಸಿನ ದೀಪಾಲಿ ಗನೋರಿ ಅವರು ಮಂಗಳವಾರ ಮುಂಜಾನೆ 3.30ರ ಸುಮಾರಿಗೆ ಹತ್ಯೆಗೀಡಾಗಿದ್ದಾರೆ. ಸಾಂತಾಕ್ರೂಜ್ ನಲ್ಲಿರುವ ತಮ್ಮ ನಿವಾಸಕ್ಕೆ ಬಂದ ಧ್ಯಾನೇಶ್ವರ್ ಅವರಿಗೆ ಪತ್ನಿ ಶವ ಎದುರಾಗಿದೆ.

Wife of cop who probed Sheena Bora murder found dead in Mumbai

ಗಾಯದ ಮೇಲೆ ಬರೆ ಎಳೆದಂತೆ ಧ್ಯಾನೇಶ್ವರ್ ಅವರ 21 ವರ್ಷ ವಯಸ್ಸಿನ ಪುತ್ರ ನಾಪತ್ತೆಯಾಗಿದ್ದಾರೆ. 2012ರ ಶೀನಾ ಬೋರಾ ಹತ್ಯೆ ಪ್ರಕರಣದಲ್ಲಿ ಶೀನಾ ಬೋರಾ ಅವರ ತಾಯಿ ಇಂದ್ರಾಣಿ ಮುಖರ್ಜಿ ಮತ್ತು ಇಂದ್ರಾಣಿ ಮುಖರ್ಜಿಯ ಪತಿ ಪೀಟರ್​ ಮುಖರ್ಜಿ ಪ್ರಮುಖ ಆರೋಪಿಗಳಾಗಿದ್ದಾರೆ.

ಈ ಪ್ರಕರಣದ ತನಿಖೆಯನ್ನು ಮೊದಲಿಗೆ ಮುಂಬೈ ಪೊಲೀಸರು ಕೈಗೆತ್ತಿಕೊಂಡಿದ್ದರು. ಈ ತನಿಖಾ ತಂಡದಲ್ಲಿ ಧ್ಯಾನೇಶ್ವರ್ ಅವರು ಕೂಡಾ ಇದ್ದರು. ನಂತರ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸಲಾಗಿದೆ.

English summary
The wife of an inspector who was part of the investigating team which probed the Sheena Bora murder case was found dead at Mumbai. Deepali Ganore was found lying in a pool of blood with a knife besides her. The body was discovered by her husband, Inspector Dyaneshwar Ganore when he returned home from work on Tuesday at 3.30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X