ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಗಲಿದ ಶ್ರೀದೇವಿಯವರು ಸರಕಾರಿ ಗೌರವಕ್ಕೆ ಅರ್ಹರಾ?

By Prasad
|
Google Oneindia Kannada News

Recommended Video

ಅಗಲಿದ ಶ್ರೀದೇವಿಗೆ ಸರ್ಕಾರೀ ಗೌರವ ಕೊಡಬೇಕಿತ್ತಾ? | Oneindia Kannada

ಮುಂಬೈ, ಫೆಬ್ರವರಿ 28 : ಜನಪ್ರಿಯತೆ ಇರಲಿ ಇಲ್ಲದಿರಲಿ, ಅರ್ಹತೆ ಇರಲಿ ಇಲ್ಲದಿರಲಿ, ಯಾರು ಏನಾದರೂ ಅಂದುಕೊಳ್ಳಲಿ, ಎಷ್ಟೇ ಕಟುಟೀಕೆಗಳನ್ನು ಮಾಡಿಕೊಳ್ಳಲಿ, ಯಾರೇ ಕೂಗಾಡಲಿ, ನಾಡಿನ ದೊಡ್ಡ ವ್ಯಕ್ತಿಗೆ ಸರಕಾರಿ ಮರ್ಯಾದೆಯಿಂದ ಅಂತಿಮ ಸಂಸ್ಕಾರ ನೆರವೇರಿಸುವುದು ಫ್ಯಾಷನ್ ಆಗಿದೆ.

ಇದಕ್ಕೆ ಯಾವುದೇ ರಾಜ್ಯವಾಗಲಿ, ಯಾವುದೇ ಪಕ್ಷವಾಗಲಿ ಹೊರತಲ್ಲ. ಇತ್ತೀಚೆಗೆ ನಿಧನರಾದ ಪತ್ರಕರ್ತೆ ಗೌರಿ ಲಂಕೇಶ್, ಕನ್ನಡ ನಾಡಿನ ಖ್ಯಾತ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸಕಲ ಸರಕಾರಿ ಗೌರವಗಳೊಂದಿಗೆ, ರಾಷ್ಟ್ರಧ್ವಜವನ್ನು ಹೊದಿಸಿ, ಕುಶಾಲು ತೋಪು ಹಾರಿಸಿ ಇಹಲೋಕದಿಂದ ಬೀಳ್ಕೊಡಲಾಗಿತ್ತು.

ಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗಶ್ರೀದೇವಿಯನ್ನು ಬೀಳ್ಕೊಡಲು ಸಾಲುಸಾಲಾಗಿ ಬಂದ ತಾರಾ ಬಳಗ

ಇದಕ್ಕೆ ಭಾರೀ ಪ್ರತಿಕ್ರಿಯೆಗಳು, ಪ್ರತಿಭಟನೆಗಳು, ಕಟು ಟೀಕೆಗಳು ವ್ಯಕ್ತವಾಗಿದ್ದವು. ಇವರು ನಾಡಿಗೆ ಏನು ಮಾಡಿದ್ದಾರೆ? ಎಂಬ ಪ್ರಶ್ನೆಯನ್ನು ಹಲವರು ಕೇಳಿದ್ದರು. ಕಡೆಗೆ, ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯಿತು ಮತ್ತು ತನ್ನ ಹಠವನ್ನೇ ಸಾಧಿಸಿ, ಯಾವ ಟೀಕೆಗೂ ಕಿವಿಗೊಡದೆ ಸರಕಾರಿ ಗೌರವ ನೀಡಿತ್ತು.

ಅರ್ಹತೆ ಇದ್ದವರಿಗೆ ಸರಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೀಡಿದರೆ ಯಾರೂ ಆಕ್ಷೇಪ ಮಾಡುವುದಿಲ್ಲ. ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಆ ಅರ್ಹತೆ ಇತ್ತು ಕೂಡ. ಇದೇ ರೀತಿ, ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ನೀಡಲಾಗುತ್ತದೆ. ಅದಕ್ಕೆ ಅವರು ನೂರಕ್ಕೆ ನೂರರಷ್ಟು ಅರ್ಹರಾಗಿರುತ್ತಾರೆ.

ಶ್ರೀದೇವಿಯವರು ಸರಕಾರಿ ಮರ್ಯಾದೆಗೆ ಅರ್ಹರೆ?

ಶ್ರೀದೇವಿಯವರು ಸರಕಾರಿ ಮರ್ಯಾದೆಗೆ ಅರ್ಹರೆ?

ಆದರೆ, ಸರಕಾರಿ ಗೌರವಕ್ಕೆ ಪಂಚಭೂತಗಳಲ್ಲಿ ಲೀನವಾಗುತ್ತಿರುವ ಬಾಲಿವುಡ್ ಬೆಡಗಿ, ರೂಪ್ ಕಿ ರಾಣಿ 'ಪದ್ಮಶ್ರೀ' ಶ್ರೀದೇವಿಯವರು ಅರ್ಹರಾ ಎಂಬ ಪ್ರಶ್ನೆ ಧುತ್ತನೆ ಎದುರಾಗಿದೆ. ಏಕೆಂದರೆ, ದೇವೇಂದ್ರ ಫಡ್ನವೀಸ್ ಅವರ ಸರಕಾರ ಶ್ರೀದೇವಿಯವರಿಗೆ ಸರಕಾರಿ ಮರ್ಯಾದೆಗಳೊಂದಿಗೆ ಅಂತಿಮ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದೆ.

ಶ್ರೀದೇವಿಯೆರು ಸಮಾಜಕ್ಕೆ ಏನು ಮಾಡಿದ್ದಾರೆ?

ಶ್ರೀದೇವಿಯೆರು ಸಮಾಜಕ್ಕೆ ಏನು ಮಾಡಿದ್ದಾರೆ?

ಇದಕ್ಕೆ ಭಾರೀ ತಕರಾರು ಎದ್ದಿದೆ. ಹುಬ್ಬು ಕುಣಿಸುವ, ಸೊಂಟ ಬಳುಕಿಸುವ ಸುಂದರಿ ಎಂದೇ ಹೆಸರಾಗಿದ್ದ ಶ್ರೀದೇವಿಯವರು ಇಂಥಹ ಮರ್ಯಾದೆಗಾಗಿ ಏನು ಮಾಡಿದ್ದಾರೆ? ಯಾವುದಾದರೂ ಸಮಾಜ ಸೇವೆಯಲ್ಲಿ ತೊಡಗಿದ್ದರಾ? 300 ಕೋಟಿ ರುಪಾಯಿ ಆಸ್ತಿಯ ಒಡತಿ ಬಡಬಗ್ಗರಿಗಾಗಿ ಏನಾದರೂ ಮಾಡಿದ್ದರಾ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ.

ಇದಕ್ಕಿಂತ ಮೂರ್ಖತನದ ಕೆಲಸ ಮತ್ತೊಂದಿಲ್ಲ

ಇದಕ್ಕಿಂತ ಮೂರ್ಖತನದ ಕೆಲಸ ಮತ್ತೊಂದಿಲ್ಲ

ಇದಕ್ಕಿಂತ ಮೂರ್ಖತನದ ಕೆಲಸ ಮತ್ತೊಂದಿಲ್ಲ. ಬಾಲಿವುಡ್ ತಾರೆಗಳನ್ನು ಮತ್ತು ತನ್ನ ಹೆಂಡತಿಯನ್ನು ಮೆಚ್ಚಿಸುವ ಉದ್ದೇಶದಿಂದ ದೇವೇಂದ್ರ ಫಡ್ನವೀಸ್ ಅವರು ಶ್ರೀದೇವಿಗೆ ಸರಕಾರಿ ಮರ್ಯಾದೆಯಿಂದ ಅಂತಿಮ ಸಂಸ್ಕಾರ ನೆರವೇರಿಸುತ್ತಿದ್ದಾರೆ ಎಂಬ ಟೀಕಾಪ್ರಹಾರವನ್ನು ಟ್ವಿಟ್ಟಿಗರೊಬ್ಬರು ಮಾಡಿದ್ದಾರೆ.

ಶ್ರೀದೇವಿ ಅರ್ಹರು, ಅಭಿಮಾನಿಯ ತಿರುಗೇಟು

ಶ್ರೀದೇವಿ ಅರ್ಹರು, ಅಭಿಮಾನಿಯ ತಿರುಗೇಟು

ಇದಕ್ಕೆ ತಿರುಗೇಟು ಮತ್ತೊಬ್ಬರು ನೀಡಿದ್ದು, ಸರಕಾರಿ ಗೌರವಕ್ಕೆ ಶ್ರೀದೇವಿ ಸಂಪೂರ್ಣ ಅರ್ಹರು. 5 ದಶಕಗಳ ಕಾಲ ಅವರು ಬಾಲಿವುಡ್ ಆಳಿದ್ದರು, ಕೋಟ್ಯಂತರ ಸಿನಿರಸಿಕರ ಹೃದಯವನ್ನು ಗೆದ್ದಿದ್ದಾರೆ. ಮಹಾರಾಷ್ಟ್ರ ಸರಕಾದ ಉತ್ತಮ ನಿರ್ಧಾರವಿದು. ಕೇಂದ್ರ ಸಚಿವರು ಕೂಡ ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ವಿಕ್ಕಿ ಎಂಬುವವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಪದ್ಮಶ್ರೀ ಗೌರವ ಬಂದವರಿಗೆಲ್ಲ ಇದೇ ಮರ್ಯಾದೆ ಕೊಡುತ್ತಾರೆ ಎನ್ನುವುದಾದರೆ ಯಾರದೂ ತಕರಾರು ಇರುವುದಿಲ್ಲ.

ಫಡ್ನವೀಸ್ ಗೆ ಕಪೂರ್ ಚಿತ್ರದಲ್ಲಿ ಲೀಡ್ ರೋಲ್

ಫಡ್ನವೀಸ್ ಗೆ ಕಪೂರ್ ಚಿತ್ರದಲ್ಲಿ ಲೀಡ್ ರೋಲ್

ನನಗನ್ನಿಸತ್ತೆ, ದೇವೇಂದ್ರ ಫಡ್ನವೀಸ್ ಅವರು ಕಪೂರ್ ಖಾಂದಾನ್ ತಯಾರಿಸುವ ಮುಂದಿನ ಚಿತ್ರದಲ್ಲಿ ಲೀಡ್ ರೋಲ್ ಗಳಿಸಲಿದ್ದಾರೆ ಎಂದು ಒಬ್ಬರು ವ್ಯಂಗ್ಯವಾಡಿದ್ದರೆ, ದೇಶಕ್ಕಾಗಿ ಗಡಿ ಕಾಯುತ್ತ, ಪ್ರಾಣ ತ್ಯಾಗ ಮಾಡುವ ಎಲ್ಲ ಯೋಧರಿಗೆ ಇಂಥ ಗೌರವ ಏಕೆ ನೀಡುವುದಿಲ್ಲ ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರ ಸಿಗುವುದಿಲ್ಲ.

ಯಾಕ್ಸಾರ್ ಸುಮ್ಮನೆ ಆಬ್ಜೆಕ್ಷನ್ ಎತ್ತುತ್ತೀರಾ?

ಯಾಕ್ಸಾರ್ ಸುಮ್ಮನೆ ಆಬ್ಜೆಕ್ಷನ್ ಎತ್ತುತ್ತೀರಾ?

ಯಾಕ್ಸಾರ್ ಸುಮ್ಮನೆ ಆಬ್ಜೆಕ್ಷನ್ ಎತ್ತುತ್ತೀರಾ? ಶ್ರೀದೇವಿಯವರು ಪಬ್ಲಿಕ್ ಫಿಗರ್ ಆಗಿದ್ದರು. ಯಾವುದೇ ವಿವಾದದಲ್ಲಿ ಸಿಲುಕದೆ, ಕೋಟ್ಯಂತರ ಚಿತ್ರಪ್ರೇಮಿಗಳ ಪ್ರೀತಿಗೆ ಪಾತ್ರರಾಗಿದ್ದರು. ಕರ್ನಾಟಕದಲ್ಲಿ ನಗರದ ನಕ್ಸಲೈಟ್ ಗೌರಿ ಲಂಕೇಶ್ ಅವರಿಗೆ ಸರಕಾರಿ ಗೌರವ ನೀಡಿದ್ದಕ್ಕಿಂತ ಇದು ಎಷ್ಟೋ ಉತ್ತಮವಾದುದು ಎಂದು ಸೋನಾಲಿ ಎಂಬುವವರು ತಿರುಗೇಟು ನೀಡಿದ್ದಾರೆ.

ಇಂಥ ಗೌರವ ನೀಡುವುದನ್ನು ನಿಲ್ಲಿಸಬೇಕು

ಇಂಥ ಗೌರವ ನೀಡುವುದನ್ನು ನಿಲ್ಲಿಸಬೇಕು

ಶ್ರೀದೇವಿಯವರು ತಮ್ಮ ಸೌಂದರ್ಯ, ಮ್ಯಾನರಿಸಂ, ಅದ್ಭುತ ನರ್ತನ, ಮನೋಜ್ಞ ಅಭಿನಯದಿಂದ ಕೋಟ್ಯಂತರ ಅಭಿಮಾನಿಗಳ ಹೃದಯ ಚೋರಿ ಮಾಡಿದ್ದನ್ನು ಯಾರೂ ಅಲ್ಲಗಳೆಯುವುದಿಲ್ಲ. ಆದರೆ, ಜನಪ್ರಿಯತೆಯ ಆಧಾರದ ಮೇಲೆ ಅಥವಾ ಹಠಮಾರಿ ಧೋರಣೆಯಿಂದಾಗಿ ಯಾರೇ ತೀರಿಕೊಂಡಾಗ ಸರಕಾರಿ ಗೌರವದಿಂದ ಬೀಳ್ಕೊಡುವುದನ್ನು ನಿಲ್ಲಿಸಬೇಕು.

ಒನ್ಇಂಡಿಯಾ ಅಭಿಪ್ರಾಯ

ಒನ್ಇಂಡಿಯಾ ಅಭಿಪ್ರಾಯ

ಸರಕಾರಿ ನಿಯಮಗಳ ಪ್ರಕಾರ, ಮಾಜಿ ಪ್ರಧಾನಿ, ಹಾಲಿ ಮತ್ತು ಮಾಜಿ ಕೇಂದ್ರ ಸಂಸದರು, ಹಾಲಿ ಮತ್ತು ಮಾಜಿ ಶಾಸಕರು ಮಾತ್ರ ಸರಕಾರಿ ಗೌರವಕ್ಕೆ ಅರ್ಹರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಮಾನದಂಡವೆಂಬುದೇ ಇಲ್ಲ. ಎಂಥೆಂಥ ರಾಜಕಾರಣಿಗಳಿಗೆ ರಾಷ್ಟ್ರಧ್ವಜ ಹೊದಿಸಿ ಗೌರವ ನೀಡಿರಬೇಕಾದರೆ, ಚಿತ್ರರಸಿಕರ ಆರಾಧ್ಯದೇವತೆಯಾಗಿದ್ದ, ಸಂಭಾವಿತ ವ್ಯಕ್ತಿಯಾಗಿದ್ದ ಶ್ರೀದೇವಿಗೆ ಇಂಥ ಗೌರವ ನೀಡಿದರೆ ತಪ್ಪೇನು?

ಬಾಲಿವುಡ್ ನಟಿ ಶ್ರೀದೇವಿ ಸಾವು : ಉತ್ತರ ಸಿಕ್ಕದ 5 ಪ್ರಶ್ನೆಗಳುಬಾಲಿವುಡ್ ನಟಿ ಶ್ರೀದೇವಿ ಸಾವು : ಉತ್ತರ ಸಿಕ್ಕದ 5 ಪ್ರಶ್ನೆಗಳು

ಜ್ಯೋತಿಷ್ಯ: ಶ್ರೀದೇವಿಯವರ ಸಾವು ಬಂದದ್ದಲ್ಲ, ತಂದುಕೊಂಡದ್ದು!ಜ್ಯೋತಿಷ್ಯ: ಶ್ರೀದೇವಿಯವರ ಸಾವು ಬಂದದ್ದಲ್ಲ, ತಂದುಕೊಂಡದ್ದು!

ಶ್ರೀದೇವಿ ನಿಗೂಢ ಸಾವು: ವಿವಾದ ಹುಟ್ಟಿಸಿದ ತಸ್ಲಿಮಾ ನಸ್ರಿನ್ ಟ್ವೀಟ್ಶ್ರೀದೇವಿ ನಿಗೂಢ ಸಾವು: ವಿವಾದ ಹುಟ್ಟಿಸಿದ ತಸ್ಲಿಮಾ ನಸ್ರಿನ್ ಟ್ವೀಟ್

English summary
Why actress Sridevi to be cremated with state honor? Many people have raised this question, saying Devendra Fadnavis has done the wrong thing. Few hardcore fans have shot back by saying Sridevi was public figure and had won the heart of millions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X