ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಹಾರಿಸುವವರನ್ನು ತಡೆದಿದ್ದೇಕೆ? ಶಿವಸೇನೆ ಪ್ರಶ್ನೆ

|
Google Oneindia Kannada News

ಮುಂಬೈ, ಅಕ್ಟೋಬರ್ 28: ಕಾಶ್ಮೀರದಲ್ಲಿ ರಾಷ್ಟ್ರಧ್ವಜ ಏರಿಸಲು ಮುಂದಾದ ಜನರನ್ನು ಪೊಲೀಸರು ತಡೆದಿದ್ದೇಕೆ ಎಂದು ಶಿವಸೇನೆ ಪ್ರಶ್ನಿಸಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಗೊಳಿಸಿದ ಬಳಿಕವೂ ಶ್ರೀನಗರದ ಲಾಲ್‌ಚೌಕದಲ್ಲಿ ರಾಷ್ಟ್ರಧ್ವಜ ಹಾರಿಸಲು ಮುಂದಾದ ಯುವಕರನ್ನು ಪೊಲೀಸರು ತಡೆದಿದ್ದರು.

ರಾಷ್ಟ್ರಧ್ವಜದ ಬಗ್ಗೆ ಹೇಳಿಕೆ: ಮೆಹಬೂಬ ಮುಫ್ತಿಯನ್ನು ಬಂಧಿಸಲು ಬಿಜೆಪಿ ಆಗ್ರಹರಾಷ್ಟ್ರಧ್ವಜದ ಬಗ್ಗೆ ಹೇಳಿಕೆ: ಮೆಹಬೂಬ ಮುಫ್ತಿಯನ್ನು ಬಂಧಿಸಲು ಬಿಜೆಪಿ ಆಗ್ರಹ

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಯತ್ನಿಸುತ್ತಿದ್ದಾಗ ಮೂವರನ್ನು ತಡೆದು ಪೊಲೀಸರು ಬಂಧಿಸಿದ್ದಾರೆ.

Why National Flag Hoisting Prevented In Srinagar? Asks Shiv Sena

ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ಕುರಿತು ಪ್ರಶ್ನಿಸಿರುವ ಶಿವಸೇನಾ 370ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಏನು ಬದಲಾಗಿದೆ ಹಿಂದುತ್ವ ಅಂದರೆ ರಾಷ್ಟ್ರೀಯತೆ ಅಲ್ಲವೇ ಎಂದು ಕೇಳಿದ್ದಾರೆ.

ಮುಂಬೈ ಅನ್ನು ಪಾಕ್ ಆಕ್ರಮಿತ ಕಶ್ಮೀರ ಎಂದು ಕರೆಯುವ ನಕಲಿ ಧೈರ್ಯಶಾಲಿಗೆ ಕೇಂದ್ರ ಸರ್ಕಾರವು ಭದ್ರತೆ ನೀಡಿದರೆ, ಕಶ್ಮೀರದಲ್ಲಿ ತ್ರಿವರ್ಣವನ್ನು ಹಾರಿಸುವ ಯುವಕರನ್ನು ಪೊಲೀಸರು ಕರೆದೊಯ್ಯುತ್ತಾರೆ ಎಂದು ವ್ಯಂಗ್ಯವಾಡಿದರು.

ಪಾಕಿಸ್ತಾನದ ಹಸ್ತಕ್ಷೇಪವಿರುವಲ್ಲಿ ತ್ರಿವರ್ಣ ಧ್ವಜವನ್ನು ಅವಮಾನಿಸಲಾಗುತ್ತಿದೆ. ಶ್ರೀನಗರದ ಲಾಲ್‌ಚೌಕದಲ್ಲಿ ಯುವಕರು ಏಕೆ ತ್ರಿವರ್ಣಧ್ವಜ ಹಾರಿಸಲಾಗಲಿಲ್ಲ ಎನ್ನುವ ಕಾರಣವನ್ನು ದೇಶ ಕೇಳುತ್ತಿದೆ. ಹಾಗಿದ್ದರೆ ಕಾಶ್ಮೀರದ ಪರಿಸ್ಥಿತಿ ಹಾಗೆಯೇ ಇದೆ ಎಂದು ಅರ್ಥವೇ ಎಂದು ಪ್ರಶ್ನಿಸಿದರು.

English summary
The Shiv Sena on Wednesday asked why some youths were prevented by police from hoisting the national flag at Lal Chowk in Srinagar despite the abrogation of Article 370.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X