ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂಬೈ; ಕೋವಿಡ್ ಲಸಿಕೆ ಬಗ್ಗೆ ಖಾಸಗಿ ಆಸ್ಪತ್ರೆಗಳ ಸುಳ್ಳು ಲೆಕ್ಕ

|
Google Oneindia Kannada News

ಮುಂಬೈ, ಜೂನ್ 11; ಲಸಿಕೆ ಕೊರತೆಯ ಕಾರಣ ಮುಂಬೈ ಮಹಾನಗರ ಪಾಲಿಕೆ ಮತ್ತು ರಾಜ್ಯ ಸರ್ಕಾರದ ಲಸಿಕಾ ಕೇಂದ್ರ ಮುಚ್ಚಿತ್ತು. ಆದರೆ ಇದೇ ಲಸಿಕಾ ಕೇಂದ್ರದ ಸಮೀಪದಲ್ಲಿದ್ದ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಿತ್ತು.

ಮುಂಬೈ ಮಹಾನಗರದ ಕಳೆದ ವಾರದ ಕಥೆ ಇದು. ಹಿಂದಿನ ಲಸಿಕೆ ನೀತಿಯಂತೆ ರಾಜ್ಯಗಳು ಮತ್ತು ಖಾಸಗಿ ಆಸ್ಪತ್ರೆಗಳಿಗೆ ಶೇ 25ರಷ್ಟು ಲಸಿಕೆಯನ್ನು ಕಂಪನಿಗಳಿಂದ ನೇರವಾಗಿ ಖರೀದಿ ಮಾಡಲು ಅವಕಾಶವಿತ್ತು.

ಮುಂಬೈ; ಇಂದಿನಿಂದ ಅನ್‌ಲಾಕ್, ಬಸ್ ಸೇವೆ ಆರಂಭ ಮುಂಬೈ; ಇಂದಿನಿಂದ ಅನ್‌ಲಾಕ್, ಬಸ್ ಸೇವೆ ಆರಂಭ

ಮೇ ತಿಂಗಳಿನಲ್ಲಿ ಮಹಾರಾಷ್ಟ್ರ ಸರ್ಕಾರ 25.10 ಲಕ್ಷ ಡೋಸ್ ಲಸಿಕೆ ಖರೀದಿ ಮಾಡಿತು. ಖಾಸಗಿ ಆಸ್ಪತ್ರೆಗಳು 32.38 ಲಕ್ಷ ಡೋಸ್ ಖರೀದಿ ಮಾಡಿದವು. ಮುಂಬೈ ನಗರದಲ್ಲಿ ಖಾಸಗಿ ಆಸ್ಪತ್ರೆಗಳು 22.37 ಲಕ್ಷ ಡೋಸ್‌ ಲಸಿಕೆ ಖರೀದಿ ಮಾಡಿವೆ. ದೇಶದ ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ಇದು ಅಧಿಕವಾಗಿದೆ.

ಹುಷಾರ್! ಕೊರೊನಾ ಲಸಿಕೆ ಸಂಗ್ರಹಣೆ ಬಗ್ಗೆ ಮಾಹಿತಿ ನೀಡುವಂತಿಲ್ಲ? ಹುಷಾರ್! ಕೊರೊನಾ ಲಸಿಕೆ ಸಂಗ್ರಹಣೆ ಬಗ್ಗೆ ಮಾಹಿತಿ ನೀಡುವಂತಿಲ್ಲ?

Why BMC Vaccine Center Shut Due To Vaccine Shortage

ಕೇಂದ್ರ ಸರ್ಕಾರ ಜೂನ್ 8 ರಿಂದ ಲಸಿಕೆ ನೀತಿ ಬದಲಾವಣೆ ಮಾಡಿದೆ. ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಖಾಸಗಿ ಆಸ್ಪತ್ರೆಗಳಿಗೆ ಕಂಪನಿಗಳು ಒಟ್ಟು ಉತ್ಪಾದನೆಯ ಶೇ 25ರಷ್ಟನ್ನು ಮಾತ್ರ ನೀಡಬೇಕು ಎಂದು ಹೇಳಿದರು. ಉಳಿದ ಲಸಿಕೆಯನ್ನು ಕೇಂದ್ರ ಸರ್ಕಾರವೇ ಖರೀದಿ ಮಾಡಿ, ರಾಜ್ಯಗಳಿಗೆ ಪೂರೈಕೆ ಮಾಡಲಿದೆ.

Good News: ಭಾರತದಲ್ಲಿ ಅತಿ ಕಡಿಮೆ ಬೆಲೆಯ ಕೊರೊನಾವೈರಸ್ ಲಸಿಕೆ! Good News: ಭಾರತದಲ್ಲಿ ಅತಿ ಕಡಿಮೆ ಬೆಲೆಯ ಕೊರೊನಾವೈರಸ್ ಲಸಿಕೆ!

ಮುಂಬೈ ಮಹಾನಗರ ಪಾಲಿಕೆ ಮಾಹಿತಿ ಪ್ರಕಾರ ಮೇ 1 ರಿಂದ ಜೂನ್ 2ರ ತನಕ ಆಸ್ಪತ್ರೆಗಳು ಕೇವಲ 3.34 ಲಕ್ಷ ಡೋಸ್ ಲಸಿಕೆ ನೀಡಿವೆ. ಹಲವು ಆಸ್ಪತ್ರೆಗಳು ತಪ್ಪು ಮಾಹಿತಿಯನ್ನು ನೀಡಿವೆ. ಜನರಿಂದ ಸಹ ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಹಣವನ್ನು ಲಸಿಕೆಗಾಗಿ ಪಡೆದಿವೆ ಎಂದು ಆರೋಪಿಸಲಾಗಿದೆ.

ಕೆಲವು ಆಸ್ಪತ್ರೆಗಳು ಥಾಣೆ ಮತ್ತು ನವೀ ಮುಂಬೈ ಪ್ರದೇಶದಲ್ಲಿ ಲಸಿಕೆ ಅಭಿಯಾನವನ್ನು ನಡೆಸಿವೆ. ಈ ಅಭಿಯಾನದ ಮೂಲಕ ಸುಮಾರು 1.34 ಲಕ್ಷ ಡೋಸ್ ಲಸಿಕೆ ನೀಡಲಾಗಿದೆ ಎಂದು ಅಂದಾಜಿಸಲಾಗಿದೆ. ಸರ್ಕಾರಿ ಲಸಿಕಾ ಕೇಂದ್ರಕ್ಕೆ ಬೀಗ ಬಿದ್ದರೂ ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಲಭ್ಯವಿತ್ತು.

ಮುಂಬೈ ನಗರದಲ್ಲಿ ಸರ್ಕಾರಿ ಲಸಿಕಾ ಕೇಂದ್ರ ಮುಚ್ಚಿದ ಬಳಿಕ ನಡೆದ ಅಧಿಕಾರಿಗಳ ಸಭೆಯಲ್ಲಿ ಲಸಿಕೆಗಳ ಲಭ್ಯತೆ ಬಗ್ಗೆ ಚರ್ಚೆ ನಡೆದಿದೆ. ಆಗ ಆಸ್ಪತ್ರೆಗಳು ನಿಗದಿಪಡಿಸಿದ ಪ್ರಮಾಣಕ್ಕಿಂತ ಹೆಚ್ಚಿನ ಲಸಿಕೆ ಖರೀದಿ ಮಾಡಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದರು.

ಪಾಲಿಕೆ ಅಧಿಕಾರಿಗಳು ಈಗ ಖಾಸಗಿ ಆಸ್ಪತ್ರೆಗಳ ಲಸಿಕಾ ಖರೀದಿ ಬಗ್ಗೆ ಮಾಹಿತಿ ಸಂಗ್ರಹ ಮಾಡಲು ಆರಂಭಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೂನ್ 21 ರಿಂದ 18-44 ವಯೋಮಿತಿಯವರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

English summary
In Mumbai city vaccination center run by BMC and the state government shut due to vaccine shortage. But lakhs of doses were still available at private hospitals.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X