ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾರಾಷ್ಟ್ರ ವಿಧಾನಸಭೆಯ ಹಂಗಾಮಿ ಸ್ಪೀಕರ್ ಯಾರಾಗಲಿದ್ದಾರೆ?

|
Google Oneindia Kannada News

ಮುಂಬೈ, ನವೆಂಬರ್ 26: ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ ಮುಹೂರ್ತವನ್ನು ಸುಪ್ರೀಂಕೋರ್ಟ್ ಇಂದು ನಿಗದಿಪಡಿಸಿದೆ. ದೇವೇಂದ್ರ ಫಡ್ನವೀಸ್ ಅವರು ನವೆಂಬರ್ 27ರಂದು ಬಹುಮತ ಸಾಬೀತುಪಡಿಸಬೇಕಾಗುತ್ತದೆ. ಈ ನಡುವೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ನಡೆಸಲು ಹಂಗಾಮಿ ಸ್ಪೀಕರ್ ನೇಮಕವಾಗಬೇಕಿದೆ. ವಿಧಾನಸಭೆಯ ಹಂಗಾಮಿ ಸ್ಪೀಕರ್ ಯಾರಾಗಲಿದ್ದಾರೆ? ಎಂಬುದು ಕುತೂಹಲ ಕೆರಳಿಸಿದೆ.

ಇದಕ್ಕಾಗಿ 6 ಮಂದಿ ಹೆಸರನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ನೀಡಲಾಗಿದೆ. ನಾಳೆ ಬೆಳಗ್ಗೆ ಹಂಗಾಮಿ ಸ್ಪೀಕರ್ ಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮೊದಲಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ ನಂತರ ಹಂಗಾಮಿ ಸ್ಪೀಕರ್ ಅವರು ನೂತನ ಶಾಸಕರಿಗೆ ಪ್ರಮಾಣ ವಚನ ಸ್ವೀಕಾರ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.

ನ್ಯಾ. ಎನ್ ವಿ ರಮಣ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಸಂಜೀವ್ ಖನ್ನಾ ಅವರು ಭಾನುವಾರದಂದು ಶಿವಸೇನಾ-ಕಾಂಗ್ರೆಸ್- ಎನ್ಸಿಪಿ ಸದಸ್ಯರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.

Who will become Pro-Tem Speaker in Maharashtra?

ಆದರೆ, ಸದನದ ನಡಾವಳಿ, ವಿಶ್ವಾಸಮತಯಾಚನೆಗೆ ಎಷ್ಟು ಕಾಲಾವಕಾಶ ನೀಡಬೇಕು ಎಂಬುದು ಸ್ಪೀಕರ್ ನಿರ್ದೇಶನದಂತೆ ನಡೆಯಲಿದೆ. ವಿಶ್ವಾಸಮತ ಯಾಚನೆ ಚರ್ಚೆ ಕಾಲಾವಧಿ, ಸದನದ ನಡಾವಳಿ ಬಗ್ಗೆ ಸ್ಪೀಕರ್ ನಿರ್ಣಯ ಅಂತಿಮವಾಗಿರುತ್ತದೆ. ಸದನದ ಕಲಾಪದ ನಿರ್ಣಯದ ಬಗ್ಗೆ ಕೋರ್ಟ್ ನಿರ್ದೇಶಿಸುವಂತಿಲ್ಲ. ಆದರೆ ಸ್ಪೀಕರ್ ನಿರ್ಣಯದ ಮೇಲೆ ಕೋರ್ಟ್ ಗೆ ಮನವಿ ಸಲ್ಲಿಸಬಹುದು. ಉದಾಹರಣೆಗೆ ಇತ್ತೀಚೆಗೆ ಕರ್ನಾಟಕದಲ್ಲಿ 17 ಶಾಸಕರು ರಾಜೀನಾಮೆ ನೀಡಿ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಅಂದಿನ ಸ್ಪೀಕರ್ ರಮೇಶ್ ಕುಮಾರ್ ಅವರು ಸದನಕ್ಕೆ ಹಾಜರಾಗದ ಶಾಸಕರನ್ನು ಅನರ್ಹಗೊಳಿಸಿದ್ದರು. ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಅನರ್ಹ ಶಾಸಕರು ಸದ್ಯ ಉಪಚುನಾವಣೆ ಎದುರಿಸುತ್ತಿದ್ದಾರೆ.

ಈಗ ಮಹಾರಾಷ್ಟ್ರದಲ್ಲಿ ಅಂತಿಮಗೊಂಡಿರುವ ಹಂಗಾಮಿ ಸ್ಪೀಕರ್ ಹೆಸರುಗಳು
1. ರಾಧಾಕೃಷ್ಣ ವಿಖೆ ಪಾಟೀಲ್(ಬಿಜೆಪಿ)
2. ಕಾಳಿದಾಸ್ ಕೋಲಂಬ್ಕರ್(ಬಿಜೆಪಿ)
3. ಬಾಬನ್ ರಾವ್ ಭಿಕಾಜಿ ಪಚ್ಪುಟೆ (ಬಿಜೆಪಿ)
4. ಬಾಳಾಸಾಹೇಬ್ ಥೋರಟ್ (ಕಾಂಗ್ರೆಸ್)
5. ಕೆಸಿ ಪಡ್ನಿ (ಕಾಂಗ್ರೆಸ್)
6. ದಿಲೀಪ್ ವಲ್ಸೆ ಪಾಟೀಲ್ (ಎನ್ ಸಿಪಿ)

ಬಿಜೆಪಿ ಸದ್ಯಕ್ಕೆ ಈ ಹಿಂದಿನ ಸ್ಪೀಕರ್ ಹರಿಬಾವ್ ಬಗಾಡೆ ಅಥವಾ ಬಾಬನ್ ರಾವ್ ಪಚ್ಪುಟೆ ಅವರನ್ನು ನೇಮಿಸಲು ಬಯಸಿದೆ. ಕಾಂಗ್ರೆಸ್ಸಿನಿಂದ ಡಿಸಿಎಂ ಸ್ಥಾನಕ್ಕೇರುವ ಆಸೆ ಇರಿಸಿಕೊಂಡಿದ್ದ ಬಾಳಾಸಾಹೇಬ್ ಥೋರಟ್ ಅವರು 8 ಬಾರಿ ಶಾಸಕರಾಗಿದ್ದು, ಈಗ ಹಂಗಾಮಿ ಸ್ಪೀಕರ್ ಸ್ಥಾನ ಅವರ ಹೆಸರು ಮುಂಚೂಣಿಯಲ್ಲಿದೆ.

English summary
Who will become Pro-Tem Speaker in Maharashtra?. Six names have been submitted for Protem Speaker to the Governor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X