ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಛೋಟಾ ರಾಜನ್ : ಕಳ್ಳಭಟ್ಟಿ ಖದೀಮ, ಡಾನ್ ಆಗಿದ್ದು ಹೇಗೆ?

By ವಿಕಾಸ್ ನಂಜಪ್ಪ
|
Google Oneindia Kannada News

ಮುಂಬೈ, ಅ.26: ಭೂಗತ ಪಾತಕಿ ರಾಜನ್ ಸದಾಶಿವ್ ನಿಕ್ಲಾಜೆ ಅಲಿಯಾಸ್ ಛೋಟಾ ರಾಜನ್ ನನ್ನು ಇಂಟರ್ ಪೋಲ್ ಪೊಲೀಸರು ಬಂಧಿಸಿದ್ದನ್ನು ಸಿಬಿಐ ದೃಢಪಡಿಸಿದೆ. ಡಾನ್ ದಾವೂದ್ ಇಬ್ರಾಹಿಂ ಅವರ ಬಲಗೈ ಬಂಟನಾಗಿದ್ದ ರಾಜನ್ ಸುಮಾರು 2 ದಶಕಗಳ ಕಾಲ ತಲೆ ಮರೆಸಿಕೊಂಡು ಪೊಲೀಸರಿಗೆ ಸವಾಲಾಗಿದ್ದ. ಕಳ್ಳಭಟ್ಟಿ ದಂಧೆಯ ಖದೀಮ ಮುಂದೆ ಡಾನ್ ಆದ ಕಥೆ ಇಲ್ಲಿದೆ.

ಸಣ್ಣ ಪುಟ್ಟ ಕಳ್ಳತನ, ಕಳ್ಳಭಟ್ಟಿ ದಂಧೆಕೋರನಾಗಿದ್ದ ರಾಜನ್ ಗೆ ರಾಜನ್ ನಾಯರ್ ಜೊತೆ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಬಡಾ ರಾಜನ್(ರಾಜನ್ ನಾಯರ್) ಕಳ್ಳಭಟ್ಟಿ ದಂಧೆಯಲ್ಲಿ ಪಳಗಿದ್ದ ಆಸಾಮಿಯಾಗಿದ್ದ. ಬಡಾ ರಾಜನ್ ಹತ್ಯೆಯಾದ ನಂತರ ಆತನ ಬಿಸಿನೆಸ್ ಮುಂದುವರೆಸಿದ ರಾಜನ್ ಬಹುಬೇಗ ಡಿ ಕಂಪನಿ ಸದಸ್ಯನಾಗಿಬಿಟ್ಟ.[ಭೂಗತ ಪಾತಕಿ ಛೋಟಾ ರಾಜನ್ ಬಂಧನ]

ಮುಂಬೈನಲ್ಲಿ ಜನಿಸಿದ ರಾಜನ್ ಚೆಂಬೂರ್ ನ ತಿಲಕ್ ನಗರದಲ್ಲಿ ಬಾಲ್ಯವನ್ನು ಕಳೆಯುತ್ತಾನೆ. ಸಹಕಾರ್ ಸಿನಿಮಾಜೊತೆ 80ರ ದಶಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಛೋಟಾ ಮುಂದೆ ಬಡಾ ರಾಜನ್ ಗೆಳೆತನದಿಂದ ಸಂಪೂರ್ಣವಾಗಿ ಭೂಗತ ಜಗತ್ತಿನ ಭಾಗವಾಗಬಿಡುತ್ತಾನೆ.

ಡಿ ಗ್ಯಾಂಗಿನಲ್ಲಿ ಹಂತ ಹಂತವಾಗಿ ಬೆಳೆದ ಛೋಟಾ ರಾಜನ್ ಗೆ ದಾವೂದ್ ಇಬ್ರಾಹಿಂನ ನಂಬಿಕೆ ಗಳಿಸುವುದು ಕಷ್ಟವಾಗಲಿಲ್ಲ. 1988ರ ನಂತರ ದಾವೂದ್ ಇಬ್ರಾಹಿಂ ದುಬೈಗೆ ತೆರಳಿದ ಮೇಲೆ ಭಾರತದಲ್ಲಿ ಡಿ ಗ್ಯಾಂಗಿನ ಸಂಪೂರ್ಣ ನಿರ್ವಹಣೆ ಹೊಣೆಯನ್ನು ಹೊರುತ್ತಾನೆ.

ಮೋಸ್ಟ್ ವಾಂಟೆಡ್ ರಾಜನ್

ಮೋಸ್ಟ್ ವಾಂಟೆಡ್ ರಾಜನ್

ಮೋಸ್ಟ್ ವಾಂಟೆಡ್ : ರಾಜನ್ ಮೇಲೆ ಕೊಲೆ, ಬೆದರಿಕೆ, ಮಾದಕ ದ್ರವ್ಯ ವ್ಯಾಪಾರ ಆರೋಪ ಹೊರೆಸಿ ಇಂಟರ್ ಪೋಲ್ ನ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರಿಸಲಾಗಿತ್ತು. ಬಾಲಿವುಡ್ ನ ಗಣ್ಯರಿಗೆ ಬೆದರಿಕೆ ಹಾಕುವ ಪ್ರಕರಣಗಳಲ್ಲಿ ರಾಜನ್ ಹೆಸರು ಮೊದಲಿಗೆ ಕೇಳಿ ಬರುತ್ತದೆ. ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗಳ ಪಟ್ಟಿಯಲ್ಲೂ ಛೋಟಾ ರಾಜನ್ ಹೆಸರು ಅಗ್ರಸ್ಥಾನ ಪಡೆದುಕೊಂಡಿದೆ.

ಡಿ ಗ್ಯಾಂಗ್ ನಿಂದ ಹೊರಕ್ಕೆ

ಡಿ ಗ್ಯಾಂಗ್ ನಿಂದ ಹೊರಕ್ಕೆ

1993ರ ಮುಂಬೈ ಸರಣಿ ಸ್ಫೋಟದ ನಂತರ ಡಿ ಗ್ಯಾಂಗ್ ನಿಂದ ಹೊರ ಬಂದ ಛೋಟಾ ರಾಜನ್ ದುಬೈಗೆ ಹಾರಿದ್ದ. ದುಬೈ ಹಾಗೂ ಥೈಲ್ಯಾಂಡ್ ನಲ್ಲಿದ್ದುಕೊಂಡೇ ಭಾರತದಲ್ಲಿ ದುಷ್ಕೃತ್ಯಗಳನ್ನು ನಿಯಂತ್ರಿಸುತ್ತಿದ್ದ. ಡಿ ಗ್ಯಾಂಗ್ ಬಗ್ಗೆ ಸಂಪೂರ್ಣ ಮಾಹಿತಿ ನೀಡುವುದಾಗಿ ಭಾರತದ ಸಿಬಿಐಗೆ ತಿಳಿಸಿದ್ದ. ಇದರಿಂದ ಡಿ ಗ್ಯಾಂಗ್ ಜೊತೆ ವಿರೋಧ ಕಟ್ಟಿಕೊಂಡ. ಚಿತ್ರದಲ್ಲಿ : ಇಂಟರ್ ಪೋಲ್ ಅಧಿಕಾರಿ ಜೊತೆ ಛೋಟಾ ರಾಜನ್ ಇತ್ತೀಚಿನ ಚಿತ್ರ.

ಇಬ್ರಾಹಿಂ ಗ್ಯಾಂಗ್ ನಡುವೆ ವಾರ್

ಇಬ್ರಾಹಿಂ ಗ್ಯಾಂಗ್ ನಡುವೆ ವಾರ್

ಹಲವಾರು ವರ್ಷಗಳ ಕಾಲ ಛೋಟಾ ರಾಜನ್ ಹಾಗೂ ದಾವೂದ್ ಇಬ್ರಾಹಿಂ ಗ್ಯಾಂಗ್ ನಡುವೆ ವಾರ್ ನಡೆಯುತ್ತಲೇ ಇತ್ತು. 2000ರಲ್ಲಿ ಬ್ಯಾಂಕಾಕ್ ನಲ್ಲಿದ್ದ ಛೋಟಾ ರಾಜನ್ ನನ್ನು ಕೊಲ್ಲಲು ದಾವೂದ್ ಬಂಟ ಶಕೀಲ್ ಯತ್ನಿಸಿ ವಿಫಲನಾಗಿದ್ದ. ಅಲ್ಲಿಂದ ಆಸ್ಟ್ರೇಲಿಯಾಕ್ಕೆ ಶಿಫ್ಟ್ ಆದ ಛೋಟಾ ರಾಜನ್ ಈಗ ಇಂಡೋನೇಷಿಯಾದ ಬಾಲಿ ದ್ವೀಪದಲ್ಲಿ ಸಿಕ್ಕಿಬಿದ್ದಿದ್ದಾನೆ.

ಮರಾಠಿ ಮಾನುಸ್ ರಾಜನ್

ಮರಾಠಿ ಮಾನುಸ್ ರಾಜನ್

ಮರಾಠಿ ಮಾನುಸ್ ರಾಜನ್ ಗೆ ಅಂಕಿತಾ, ನಿಕಿತಾ ಹಾಗೂ ಖುಷಿ ಎಂಬ ಮೂವರು ಪುತ್ರಿಯರಿದ್ದಾರೆ. ಬಡಾ ರಾಜನ್, ಹೈದರಾಬಾದಿನ ಯಾದಗಿರಿ ಇಬ್ಬರು ದಂಧೆಯಲ್ಲಿ ತನ್ನ ಗುರುಗಳು ಎಂದು ನಂಬಿದ್ದಾನೆ. ದಾವೂದ್ ಇಬ್ರಾಹಿಂ, ಬಡಾ ರಾಜನ್ ಹಾಗೂ ಅರುಣ್ ಗೌಳಿ ಜೊತೆ ಕಾರ್ಯನಿರ್ವಹಿಸಿದ ರಾಜನ್ ಬದುಕನ್ನು ಆಧಾರಿಸಿ ಕಂಪನಿ(ಚಂದು ಪಾತ್ರ) ಹಾಗೂ ವಾಸ್ತವ್ ಹೆಸರಿನ ಚಿತ್ರಗಳು ಬಂದಿವೆ.

English summary
Chotta Rajan has been detained in Indonesia after a chase that lasted over 2 decades. A former aide of Dawood Ibrahim, Rajan ran a crime syndicate in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X