ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತ ಇದನ್ನು ನೋಡುವುದು ಯಾವಾಗ?': ಮಾಸ್ಕ್‌ ಹಾಕದ ವಿಂಬಲ್ಡನ್‌ ಪ್ರೇಕ್ಷಕರ ಬಗ್ಗೆ ಕೋರ್ಟ್

|
Google Oneindia Kannada News

ಮುಂಬೈ, ಜು.14: ಕಳೆದ ವಾರ ವಿಂಬಲ್ಡನ್‌ನಲ್ಲಿ ನಡೆದ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ನೊವಾಕ್ ಜೊಕೊವಿಕ್ ಮತ್ತೊಂದು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆದರೆ ಬಾಂಬೆ ಹೈಕೋರ್ಟ್‌ ಮಾತ್ರ ಮಾಸ್ಕ್‌ ಧರಿಸದ ಪ್ರೇಕ್ಷಕರಿಂದ ತುಂಬಿದ ಕ್ರೀಡಾಂಗಣವನ್ನು ಗುರುತಿಸಿದೆ.

ಭಾರತ ಈ ಮಟ್ಟಕ್ಕೆ ಸಾಮಾನ್ಯ ಸ್ಥಿತಿಗೆ ಮರಳುವುದನ್ನು ಯಾವಾಗ ನೋಡಬಹುದೆಂದು ಎಂದು ಕೇಳಿದ ನ್ಯಾಯಾಲಯವು, "ಇದಕ್ಕಾಗಿ ಎಲ್ಲರಿಗೂ ಲಸಿಕೆ ಹಾಕುವುದು" ಮುಖ್ಯ ಎಂದು ಹೇಳಿದೆ.

'ಸಂಗಾತಿಯ ಆಯ್ಕೆ ವೈಯಕ್ತಿಕ ನಿರ್ಧಾರ, ರಾಜ್ಯ-ಸಮಾಜ ಮೂಗು ತೂರಿಸುವಂತಿಲ್ಲ' - ಬಾಂಬೆ ಹೈಕೋರ್ಟ್'ಸಂಗಾತಿಯ ಆಯ್ಕೆ ವೈಯಕ್ತಿಕ ನಿರ್ಧಾರ, ರಾಜ್ಯ-ಸಮಾಜ ಮೂಗು ತೂರಿಸುವಂತಿಲ್ಲ' - ಬಾಂಬೆ ಹೈಕೋರ್ಟ್

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ನ್ಯಾಯಮೂರ್ತಿ ಜಿ.ಎಸ್. ಕುಲಕರ್ಣಿಯನ್ನು ಒಳಗೊಂಡ ದ್ವಿಸದಸ್ಯ ವಿಭಾಗೀಯ ಪೀಠವು ಮಹಾರಾಷ್ಟ್ರದ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಮೂರನೇ ಅಲೆಯನ್ನು ಎದುರಿಸಲು ರಾಜ್ಯ ಸರ್ಕಾರದ ಸನ್ನದ್ಧತೆ ಕುರಿತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು (ಪಿಐಎಲ್) ವಿಚಾರಣೆ ನಡೆಸಿತು.

 When Will India See This? says Bombay Court On Wimbledon Spectators Without Masks

ಈ ಸಂದರ್ಭದಲ್ಲಿ ಹೈಕೋರ್ಟ್, "ವಿಂಬಲ್ಡನ್ ಫೈನಲ್ ಈ ವರ್ಷದ ದೃಶ್ಯವಾಗಿತ್ತು. ನೀವು ಅದನ್ನು ನೋಡಿದ್ದೀರಾ ಎಂದು ನಮಗೆ ತಿಳಿದಿಲ್ಲ, ಆದರೆ ಒಬ್ಬ ವ್ಯಕ್ತಿಯು ಮುಖವಾಡ ಧರಿಸಿರಲಿಲ್ಲ," ಎಂದು ಅಡ್ವೊಕೇಟ್ ಜನರಲ್ ಅಶುತೋಷ್ ಕುಂಭಕೋಣಿಗೆ ತಿಳಿಸಿದರು.

"ಕ್ರೀಡಾಂಗಣವು ಕಿಕ್ಕಿರಿದು ತುಂಬಿತ್ತು. ಆದರೆ ಒಬ್ಬ ಮಹಿಳೆ ಮಾತ್ರ ಮಾಸ್ಕ್‌ ಧರಿಸಿದ್ದರು. ಒಬ್ಬ ಭಾರತೀಯ ಕ್ರಿಕೆಟಿಗ ಕೂಡ ಹಾಜರಿದ್ದರು. ಆದರೆ ಕ್ರಿಕೆಟಿಗ ಮಾಸ್ಕ್‌ ಧರಿಸಿರಲಿಲ್ಲ. ," ಎಂದು ನ್ಯಾಯಾಧೀಶರು ಹೇಳಿದರು. "ಭಾರತ ಅಂತಹ ಪರಿಸ್ಥಿತಿಯನ್ನು ಯಾವಾಗ ನೋಡುತ್ತದೆ?. ಅದಕ್ಕಾಗಿ ಎಲ್ಲರಿಗೂ ಲಸಿಕೆ ನೀಡುವುದು ಮುಖ್ಯ" ಎಂದು ಹೈಕೋರ್ಟ್ ಹೇಳಿದೆ.

'ಪಿಎಂ ಕೇರ್‌ ಅಡಿ ಲಭಿಸಿದ ವೆಂಟಿಲೇಟರ್‌ನ ದೋಷ ಸಾವಿಗೆ ಕಾರಣವಾದರೆ ಕೇಂದ್ರವೇ ಹೊಣೆ' : ಬಾಂಬೆ ಹೈಕೋರ್ಟ್'ಪಿಎಂ ಕೇರ್‌ ಅಡಿ ಲಭಿಸಿದ ವೆಂಟಿಲೇಟರ್‌ನ ದೋಷ ಸಾವಿಗೆ ಕಾರಣವಾದರೆ ಕೇಂದ್ರವೇ ಹೊಣೆ' : ಬಾಂಬೆ ಹೈಕೋರ್ಟ್

ಇನ್ನು ಈ ನಡುವೆ ಕೊರೊನಾ ಸಾಂಕ್ರಾಮಿಕ ಮೂರನೇ ಅಲೆಯು ಈಗಾಗಲೇ ಕೆಲವು ರಾಜ್ಯಗಳನ್ನು ಅಪ್ಪಳಿಸಿದೆ ಎಂದು ವರದಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, "ಈಶಾನ್ಯದ ಎರಡು ರಾಜ್ಯಗಳಲ್ಲಿ ಮೂರನೇ ಅಲೆ ಪ್ರಾರಂಭವಾಗಿದೆ ಎಂದು ವರದಿಗಳಿವೆ. ನಾವು ಈ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ನಾವು ಈಗ ಹೆಚ್ಚು ಆರಾಮದಾಯಕ ಪರಿಸ್ಥಿತಿಯಲ್ಲಿದ್ದೇವೆ. ಆದರೆ ನಾವು ಹಾಗಿರಬಾರದು ಎಚ್ಚರವಾಗಿರಬೇಕು," ಎಂದು ಹೇಳಿದರು.

ಮಹಾರಾಷ್ಟ್ರದಲ್ಲಿ ಕೊರೊನಾವೈರಸ್‌ ಡೆಲ್ಟಾ-ಪ್ಲಸ್ ರೂಪಾಂತರದ ಸಕ್ರಿಯ ಪ್ರಕರಣಗಳ ಬಗ್ಗೆ ಸುದ್ದಿ ವರದಿಗಳನ್ನು ಓದಿದ್ದೇವೆ. ಕೋವಿಡ್‌ ಸೋಂಕು ಹರಡುವುದನ್ನು ತಡೆಯಲು ರಾಜ್ಯವು ಕಾರ್ಯನಿರ್ವಹಿಸಬೇಕು ಎಂದು ಇದೇ ವೇಳೆ ನ್ಯಾಯಾಧೀಶರು ಹೇಳಿದರು.

ಮೂರು ವಾರಗಳ ನಂತರ ಹೈಕೋರ್ಟ್ ಈ ಅರ್ಜಿಯ ವಿಚಾರಣೆ ನಡೆಸಲಿದೆ.

(ಒನ್‌ಇಂಡಿಯಾ ಸುದ್ದಿ)

English summary
We don't know if you saw Wimbledon final, but not a single person was wearing a mask. When will India see such a situation? Vaccinating everyone is the key to it says Bombay high court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X